ಫಾಲ್ಸ್‌ ನೋಡಲು ತೆರಳಿ ನಾಪತ್ತೆಯಾಗಿದ್ದ ಪ್ರವಾಸಿಗರು ಪತ್ತೆ

ಉತ್ತರಕನ್ನಡ : ಅಂಕೋಲಾ ಯಲ್ಲಾಪುರ ಮಧ್ಯದ ಶಿರ್ಲೆ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದ 6 ಮಂದಿ ಪ್ರವಾಸಿಗರು ಕಣ್ಮರೆಯಾಗಿದ್ದು,ವ್ಯಾಪಕ ಹುಡುಕಾಟದ ಬಳಿಕ ಪತ್ತೆಯಾಗಿದ್ದಾರೆ.

ಹುಬ್ಬಳ್ಳಿ ನೊಂದಣಿ ಹೊಂದಿರುವ ಮೂರು ಬೈಕಿನಲ್ಲಿ ಬಂದ 6 ಜನ ಪ್ರವಾಸಿಗರು ಶಿರ್ಲೆ ಫಾಲ್ಸ್ ನಿಂದ ಮರಳಿ ಬಾರದಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿತ್ತು.

ಗುರುವಾರ ಮಧ್ಯಾಹ್ನದಿಂದ ಭಾರಿ ಮಳೆ ಸುರಿಯುತ್ತಿದ್ದರಿಂದ ಪ್ರವಾಸಿಗರ ಸುಳಿವು ಸಿಕ್ಕಿರಲಿಲ್ಲ.

Ad Widget


Ad Widget


Ad Widget

Ad Widget


Ad Widget

ಪ್ರವಾಸಿಗರ ಹುಡುಕಾಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಿರತರಾಗಿದ್ದು ರಾತ್ರಿ ತನಕ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ.

ಇಂದು ಶುಕ್ರವಾರ ಬೆಳಿಗ್ಗೆ ಡಿಎಸ್ಪಿ ರವಿನಾಯಕ ಹಾಗೂ ಅರಣ್ಯ ಅಧಿಕಾರಿಗಳು ಕಾಡಿನಲ್ಲಿ ಶೋಧ ನಡೆಸಿ ಯುವಕರನ್ನು ಪತ್ತೆ ಹಚ್ಚಿದ್ದಾರೆ.

ಆಶೀಫ ಮಕಬುಲಸಾಬ ಡಾಲಾಯಿತ್, ಅಹ್ಮದ ಸೈಯದ್ ಶೇಖ, ಅಬತಾಬ್ ಸದ್ದಾಂ ಶಿರಹಟ್ಟಿ, ಮಾಬುಸಾಬ ಮಕಬುಲಸಾಬ ಶಿರಹಟ್ಟಿ, ಶಾನು ಬಿಜಾಪುರಿ ಹಾಗೂ ಇಮ್ತಿಯಾಜ್ ನೀರಸಾಬ ಮುಲ್ಲಾನವರ ಎಂಬವರು ನಾಪತ್ತೆಯಾಗಿದ್ದವರು. ಈಗ ಪತ್ತೆಯಾಗುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: