ಫೇಸ್ ಬುಕ್ ಅವಹೇಳನ ಮಾಡಿದ ಪ್ರೊಫೆಸರ್ ಗೆ ಪಾಠ ಕಲಿಸಿದ ಸ್ಮೃತಿ ಇರಾನಿ | ಶಹರ್ಯಾರ್ ಅಲಿ ಗೆ ಸುಪ್ರೀಂ ಕೋರ್ಟಲ್ಲೂ ಸಿಗಲಿಲ್ಲ ರಿಲೀಫ್ !

ಫೇಸ್‌ಬುಕ್‌ ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಉತ್ತರಪ್ರದೇಶ ಎಸ್‌ಆರ್‌ಕೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಶಹರ್ಯಾರ್‌ ಅಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿ, ಅವರನ್ನು ಪೊಲೀಸ್ ವಶಕ್ಕೆ ಒಪ್ಪಿಸಿದೆ.

ಫಿರೋಜಾಬಾದ್​ನ ಎಸ್‌ಆರ್‌ಕೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಶಹರ್ಯಾರ್ ಅಲಿ ಜಿಲ್ಲಾ ಹೆಚ್ಚುವರಿ ಸೆಷನ್ಸ್​ ನ್ಯಾಯಾಧೀಶರ ಮುಂದೆ ಶರಣಾಗಿ, ಮಧ್ಯಂತರ ಜಾಮೀನು ಅರ್ಜಿಯನ್ನು ಕೋರಿದ್ದು, ಜಾಮೀನು ತಿರಸ್ಕರಿಸಿದ ಬೆನ್ನಿಗೇ ಕೋರ್ಟ್​ ಅವರ ಬಂಧನಕ್ಕೆ ಆದೇಶಿಸಿದೆ.

ಇವರು ಕಳೆದ ಮಾರ್ಚ್​ ತಿಂಗಳಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಇರಾನಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಅನ್ನು ಫೇಸ್​ಬುಕ್​ ಖಾತೆಯಲ್ಲಿ ಹಾಕಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುವ ಭಾಷೆ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಕೋರ್ಟ್‌ ಎಚ್ಚರಿಕೆಯನ್ನು ಕೂಡ ನೀಡಿತ್ತು. ಆದರೂ ಅಲಿ ಅವರು ಅವಹೇಳನಕಾರಿ ಪೋಸ್ಟ್‌ ಹಾಕಿದ್ದರು.

Ad Widget / / Ad Widget

ಕಳೆದ ಮೇ ತಿಂಗಳಿನಲ್ಲಿ ಕೂಡ ಅಲಿ ಅವರು ಅಲಹಾಬಾದ್‌ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ತಮ್ಮ ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗಿತ್ತು ಎಂಬ ಕಾರಣವನ್ನು ಅವರು ನೀಡಿದ್ದರು. ಆದರೆ ನ್ಯಾಯಾಧೀಶರಾದ ಜೆ. ಜೆ. ಮುನೀರ್‌ ಅವರು ಅರ್ಜಿಯನ್ನು ತಿರಸ್ಕೃತಗೊಳಿಸಿದ್ದರು.

ಪ್ರೊಫೆಸರ್​ ಅಲಿ ಬಂಧನದಿಂದ ರಕ್ಷಣೆ ಕೋರಿ, ಅಲಹಾಬಾದ್​ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅದು ತಿರಸ್ಕರಿಸಲ್ಪಟ್ಟ ಮೇಲೆ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್‌ ಮೇಟ್ಟಿಲೇರಿದ್ದ ಅಲಿ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ನ್ಯಾಯಾಧೀಶರಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ನ್ಯಾ.ಹೇಮಂತ್‌ ಗುಪ್ತಾ ಅವರಿದ್ದ ಪೀಠ ನಿರಾಕರಿಸಿತ್ತು.

ಆದರೆ ಸುಪ್ರೀಂ ಕೋರ್ಟ್​ ತಿರಸ್ಕರಿಸಿದ ಹಿನ್ನೆಲೆಯಲ್ಲಿ, ಅವರು ಸೆಷನ್ಸ್​ ನ್ಯಾಯಾಲಯದ ಮುಂದೆ ಆತ್ಮ ಸಮರ್ಪಣೆ ಮಾಡಿಕೊಂಡರು. ಹಾಗಾಗಿ ಇದೀಗ ಪ್ರೊಫೆಸರ್ ಜೈಲು ಕಂಬಿ ಎಣಿಸುತ್ತಿದ್ದಾರೆ.

Leave a Reply

error: Content is protected !!
Scroll to Top
%d bloggers like this: