ದುರ್ಯೋಧನನ ಪಾತ್ರದಿಂದಲೇ ನಟ ದರ್ಶನ್​​ಗೆ ಅಹಂ ಭಾವ ಹೆಚ್ಚಾದದ್ದು | ಅದಕ್ಕೇ ಹಿಂಗಾಡ್ತಿರೋದು ಎಂದು ಸಾಕ್ಷಿ ಸಮೇತ ಪ್ರೂವ್ ಮಾಡುತ್ತಿರುವ ಈ ಊರಿನ ಗ್ರಾಮಸ್ಥರು !!

ನಟ ದರ್ಶನ್​ ಇತ್ತೀಚೆಗೆ ಸಾಕಷ್ಟು ವಿವಾದಗಳಿಗೆ ತುತ್ತಾಗಿದ್ದಾರೆ. ಕಷ್ಟದಿಂದ ಮೇಲೆ ಬಂದ ದರ್ಶನ್ ಅವರ ಇತ್ತೀಚಿನ ನಡವಳಿಕೆ ಯಾರಿಗೂ ಇಷ್ಟವಾಗುತ್ತಿಲ್ಲ. ಆತನ ದನಿಯಲ್ಲಿ ದರ್ಪ ಎದ್ದು ಕಾಣುತ್ತಿದೆ. ಅಹಂಕಾರ ತುಂಬಿದ ಬಾಡಿ ಲಾಂಗ್ವೇಜ್ ಇಷ್ಟ ಆಗುತ್ತಿಲ್ಲ. ಅವರು ಈ ಮದ್ಯೆ ಸಾಕಷ್ಟು ಜನರ ಮೆಲೆ ಕೋಪಗೊಂಡಿದ್ದೂ ಇದೆ. ಬದುಕಿನಲ್ಲಿ ಏನೂ ಇಲ್ಲದೆ ಹಸು ಕಟ್ಟಿ ಸಗಣಿ ಬಾಚಿ ಹಾಲು ಮಾರಿ ಬದುಕು ಆರಂಭಿಸಿದ ದರ್ಶನ್ ಹೀಗೆಕಾದರು ? ಎಂಬ ಪ್ರಶ್ನೆ ಈಗ ಎಲ್ಲರಲ್ಲಿ ಮೂಡುತ್ತಿರುವುದು ಸಾಂದರ್ಭಿಕ.

ಈಗ ದರ್ಶನ್ ಅವರು ತೋರ್ಪಡಿಸುವ ಈ ಸಿಟ್ಟಿಗೆ ಅವರು ಅಂದು ನಟಿಸಿದ ಆ ಪಾತ್ರವೇ ಕಾರಣವಂತೆ. ಯಾವುದಾ ವರ್ತನೆ ಬದಲಿಸುವ ಪಾತ್ರ ?!

ದರ್ಶನ್​ ಅಂದು ಮಾಡಿದ ದುರ್ಯೋಧನನ ಪಾತ್ರವೇ ಅದಕ್ಕೆ ಕಾರಣವಂತೆ! ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿ  ಗ್ರಾಮಸ್ಥರು ಹೀಗೊಂದು ಅಭಿಪ್ರಾಯವನ್ನು ಮಂಡಿಸುತ್ತಿದ್ದಾರೆ. 2019ರಲ್ಲಿ ತೆರೆಗೆ ಬಂದ ‘ಕುರುಕ್ಷೇತ್ರ’  ಸಿನಿಮಾದಲ್ಲಿ ದರ್ಶನ್​ ಅವರು ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಗಣ್ಣ ನಿರ್ದೇಶನದ ಈ ಸಿನಿಮಾಗೆ ಹಾಲಿ ಶಾಸಕ ಮುನಿರತ್ನ ಅವರು ಬಂಡವಾಳ ಹೂಡಿದ್ದರು. ಈ ದುರ್ಯೋಧನನ ಪಾತ್ರ ದರ್ಶನ್​ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದೆ ಅನ್ನೋದು ಗ್ರಾಮಸ್ಥರ ಅಭಿಪ್ರಾಯ.

‘ದುರ್ಯೋಧನನ ಪಾತ್ರ ಮಾಡಿದವರಿಗೆ ಅಹಂ ಭಾವ ಜಾಸ್ತಿಯಾಗುತ್ತದೆ. ಆ ಪಾತ್ರ ಮಾಡಿದವರು ಯಾರ ಮಾತನ್ನೂ ಕೇಳೋದಿಲ್ಲ. ಅವರು ಹೇಳಿದ್ದೇ ನಡೆಯಬೇಕು, ಅವರು ಹೇಳಿದ್ದೇ ಸರಿ ಅನ್ನುತ್ತಾರೆ. ನಮ್ಮ ಗ್ರಾಮದಲ್ಲಿ ದುರ್ಯೋಧನನ ಪಾತ್ರ ಮಾಡಿದ ಮೂವರು ಇದೇ ರೀತಿಯ ಸಂಕಷ್ಟಕ್ಕೆ ಸಿಲುಕಿದ್ದರು. ಬಳಿಕ ಬೇರೆ ಸೌಮ್ಯ ಪಾತ್ರ ಮಾಡಿದ ಮೇಲೆ ಸಂಕಷ್ಟ ನಿವಾರಣೆ ಆಯ್ತು’ ಎಂಬ ವಿಶೇಷವಾದ ಮಾಹಿತಿಯನ್ನು ನೀಡಿದ್ದಾರೆ ಈ ಗ್ರಾಮದವರು.

ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿ ಗ್ರಾಮದ ಕಥೆ
ಕಳೆದ ಹಲವು ವರ್ಷಗಳ ಹಿಂದೆ ಈ ಗ್ರಾಮದ ಚೌಡೇಗೌಡ, ಮಹಾದೇವಪ್ಪ ಹಾಗೂ ನಾಗರಾಜು ಎಂಬುವವರು ನಾಟಕದಲ್ಲಿ ದುರ್ಯೊಧನನ ಪಾತ್ರ ಮಾಡಿದ್ದರು. ಅಚ್ಚರಿ ಎಂಬಂತೆ, ನಾಟಕ ಮಾಡಿದ ನಂತರವೂ ಅವರಲ್ಲಿ ದುರ್ಯೋಧನನ ಗುಣ ಮರುಕಳಿಸಲು ಪ್ರಾರಂಭಿಸಿತು. ‘ನಮ್ಮಲ್ಲಿ ಅಹಂ ಭಾವ ಹೆಚ್ಚಾಗಿತ್ತು. ಈ ಗುಣದಿಂದ ನಮ್ಮ ಜೀವನದಲ್ಲಿ ಸಾಕಷ್ಟು ತೊಂದರೆಗಳು ಉಂಟಾದವು. ಬೇರೆ ಪೌರಾಣಿಕ ಪಾತ್ರಗಳನ್ನು ಮಾಡಿದ ಮೇಲೆ ನಮ್ಮ ಮನಸ್ಥಿತಿ ಸರಿ ಆಯಿತು. ಬದುಕು ಸುಧಾರಿಸಿತು. ಈಗ ನಟ ದರ್ಶನ್​​ಗೂ ಅದೇ ಆಗಿದೆ. ಅವರು ಕುರುಕ್ಷೇತ್ರ ಸಿನಿಮಾ‌ದಲ್ಲಿ ದುರ್ಯೋಧನನ‌ ಪಾತ್ರ ಮಾಡಿದ್ದಾರೆ. ಪಾತ್ರದ ಛಾಯೆ ಅವರ ಮೇಲಿರುವುದರಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಬೇರೆ ಪೌರಾಣಿಕ ಪಾತ್ರ ಮಾಡಿದರೆ ಅವರಲ್ಲಿ ಬದಲಾವಣೆ ಆಗಲಿದೆ’ ಎನ್ನುತ್ತಾರೆ ಈ ಪಾತ್ರ ಮಾಡಿ ಕಷ್ಟ ಅನುಭವಿಸಿ ನೊಂದು ಇದೀಗ ಮಾಮೂಲಾಗಿ ಬದಲಾದ ಅಂದಿನ ದುರ್ಯೋಧನ ಪಾತ್ರಧಾರಿಗಳು.

Leave A Reply

Your email address will not be published.