ಎಮ್ಮೆಯ ಸಂದರ್ಶನ ಮಾಡಿದ ಪಾಕ್ ಪತ್ರಕರ್ತ | ಆತನ ಪ್ರಶ್ನೆಗೆ ಎಮ್ಮೆ ಉತ್ತರಿಸಿದ ವೈರಲ್ ವಿಡಿಯೋ ನೋಡಿ

ವಿಶ್ವದಾದ್ಯಂತ ಮುಸ್ಲಿಂ ಬಾಂಧವರು ಮೊನ್ನೆ ತಾನೆ ಬಕ್ರೀದ್ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ಈ ಮಧ್ಯೆ ಪಾಕಿಸ್ತಾನದ ಪತ್ರಕರ್ತನೊಬ್ಬ​ ಎಮ್ಮೆಯ ಸಂದರ್ಶನ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆಶ್ಚರ್ಯದ ಸಂಗತಿ ಎಂದರೆ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಎಮ್ಮೆ ಸರಿಯಾದ ಉತ್ತರ ನೀಡಿದೆ.

ಹೌದು, ಪಾಕಿಸ್ತಾನದ ವರದಿಗಾರ ಅಮೀನ್​ ಹಫೀಜ್ ಮಾಡಿರುವ ಎಮ್ಮೆಯ ಸಂದರ್ಶನ ಸಖತ್ತಾಗಿ ಸದ್ದು ಮಾಡುತ್ತಿದೆ. ನೈಲಾ ಇನಾಯತ್ ಎಂಬ ಪತ್ರಕರ್ತರು ತಮ್ಮ ಟ್ವೀಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅದಕ್ಕೆ ಫನ್ನಿಯಾಗಿ ಕ್ಯಾಪ್ಶನ್ ಕೂಡ ನೀಡಿದ್ದಾರೆ. ದನದ ಕೊಟ್ಟಿಗೆಯೊಂದಕ್ಕೆ ಭೇಟಿ ನೀಡಿದ್ದ ಹಫೀಜ್ ಎಮ್ಮೆಯನ್ನೇ ಸಂದರ್ಶನ ಮಾಡಿ ಅದನ್ನು ಮಾತನಾಡಿಸಿದ್ದಾರೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರು ನಕ್ಕೇ ನಗುತ್ತಾರೆ.

ತುಂಬಾ ಫನ್ನಿಯಾಗಿರುವ 28 ಸೆಕೆಂಡುಗಳ ವಿಡಿಯೋದಲ್ಲಿ ಹಫೀಜ್ ಅವರು ರಾಜಧಾನಿ ಲಾಹೋರ್ ಸಿಟಿ ಹೇಗಿದೆ, ಇಲ್ಲಿನ ಆಹಾರ ಹೇಗಿದೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಎಮ್ಮೆಯೂ ಸರಿಯಾಗಿ ಉತ್ತರ ನೀಡಿದೆ. ಎರಡು ಪ್ರಶ್ನೆಗಳಿಗೆ ಎಮ್ಮೆ ತನ್ನದೇ ಭಾಷೆಯಲ್ಲಿ ಪ್ರತಿಕ್ರಿಯೆ ನೀಡಿದೆ.

Ad Widget


Ad Widget


Ad Widget

Ad Widget


Ad Widget

ಪತ್ರಕರ್ತ ಹಫೀಜ್ ಪ್ರಶ್ನೆ ಕೇಳುತ್ತಲೇ ಎಮ್ಮೆಯ ತಲೆಯನ್ನು ಸವರುತ್ತಿದ್ದರು. ಈ ವೇಳೆ ಅಲ್ಲಿಯೇ ಇದ್ದ ಕೆಲವರು ಈ ದೃಶ್ಯವನ್ನು ನೋಡಿ ನಗುತ್ತಾ ನಿಂತಿದ್ದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.

ಅನೇಕರು ಎಮ್ಮೆ ನೀಡಿರುವ ಪ್ರತಿಕ್ರಿಯೆಗೆ ಫಿದಾ ಆಗಿದ್ದು, ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೇವೆಂದು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ್ರೆ ನೀವು ಕೂಡ ನಗೋದು ಗ್ಯಾರಂಟಿ…!

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: