Day: July 23, 2021

ನಾಳೆ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ಕನ್ಯಾಡಿಯ ಜಗದ್ಗುರು ಪೀಠಾಧೀಶರ ಚಾತುರ್ಮಾಸ್ಯ ವ್ರತಾರಂಭೆ ಹಾಗೂ ಅನ್ನಛತ್ರದ ಶಿಲಾನ್ಯಾಸ ಕಾರ್ಯಕ್ರಮ

ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನ ಕನ್ಯಾಡಿಯ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾರಂಭೆ ಮತ್ತು ಅನ್ನಛತ್ರದ ಶಿಲಾನ್ಯಾಸ ಕಾರ್ಯಕ್ರಮ ನಾಳೆ ನಡೆಯಲಿದೆ. ಶ್ರೀ ಗುರುದೇವ ಮಠದಲ್ಲಿ ನಡೆಯಲಿದ್ದು,ಶ್ರೀ ರಾಮ ದೇವರ ಮಂತ್ರಾಕ್ಷತೆಯನ್ನು ಪಡೆದು ಪುನೀತರಾಗಬೇಕಾಗಿ ಆಡಳಿತ ಸಮಿತಿ ಸದಸ್ಯರು ವಿನಂತಿಸುತ್ತಿದ್ದಾರೆ. ಈ ಕಾರ್ಯಕ್ರಮವು ಲಕ್ಷ್ಮಿ ಪತಿ ಗೋಪಾಲಚಾರರು, ಆಗಮ ಪ್ರವೀಣ ಬೆಂಗಳೂರು ಇವರ ಉಪಸ್ಥಿತಿಯಲ್ಲಿ ಶ್ರೀ ಗುರುದೇವ ಮಠದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಗುರುಪೂರ್ಣಿಮೆಯಂದು ಮೂಲ ಮಠ ಶ್ರೀ ರಾಮಕ್ಷೇತ್ರ …

ನಾಳೆ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ಕನ್ಯಾಡಿಯ ಜಗದ್ಗುರು ಪೀಠಾಧೀಶರ ಚಾತುರ್ಮಾಸ್ಯ ವ್ರತಾರಂಭೆ ಹಾಗೂ ಅನ್ನಛತ್ರದ ಶಿಲಾನ್ಯಾಸ ಕಾರ್ಯಕ್ರಮ Read More »

ಪ್ರಪಂಚದ ಅತ್ಯಂತ ಹಿರಿಯ, 105 ವರ್ಷದ ವಿದ್ಯಾರ್ಥಿನಿ, ಕೇರಳದ ಭಾಗೀರಥಿ ಅಮ್ಮ ಇನ್ನಿಲ್ಲ !

ವಿದ್ಯಾರ್ಥಿಗಳಿಗೆ ಒಂದು ದೊಡ್ಡ ಸ್ಪೂರ್ತಿಯಾಗಿ ಉಳಿದಿದ್ದ ಹಿರಿಯ ಜೀವ ಇನ್ನಿಲ್ಲ. ಆಕೆ ತನ್ನ 105ನೇ ವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯದಿಂದ ತೀರಿಕೊಂಡಿದ್ದಾರೆ. ತನ್ನ 105ನೇ ವಯಸ್ಸಿನಲ್ಲಿ ಸಾಕ್ಷರತಾ ಪರೀಕ್ಷೆ ಬರೆದು 7ನೇ ತರಗತಿಯಲ್ಲಿ ಉತ್ತೀರ್ಣರಾಗಿ, ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸೆ ಗಳಿಸಿದ್ದ, ನಾರಿಶಕ್ತಿ ಪ್ರಶಸ್ತಿ ಪುರಸ್ಕೃತೆ, ಪ್ರಪಂಚದ ಅತ್ಯಂತ ಹಿರಿಯ ವಿದ್ಯಾರ್ಥಿನಿ, ಕೇರಳದ ಭಾಗೀರಥಿ ಅಮ್ಮ(107) ವಯೋಸಹಜ ಕಾರಣಗಳಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಕೇರಳದ ಕೊಲ್ಲಂ ಜಿಲ್ಲೆಯ ಪ್ರಕುಲಂನ ಶತಾಯುಷಿ ಭಾಗೀರಥಿ ಅಮ್ಮ, 2019 ರಲ್ಲಿ ಕೇರಳ ರಾಜ್ಯ …

ಪ್ರಪಂಚದ ಅತ್ಯಂತ ಹಿರಿಯ, 105 ವರ್ಷದ ವಿದ್ಯಾರ್ಥಿನಿ, ಕೇರಳದ ಭಾಗೀರಥಿ ಅಮ್ಮ ಇನ್ನಿಲ್ಲ ! Read More »

ಮಂಗಳೂರು-ಮುಂಬೈ ರೈಲು ಹಾದಿಯಲ್ಲಿ ಭೂಕುಸಿತ ಉಂಟಾಗಿ ತಪ್ಪಿದ ಹಳಿ | 345 ಜನರ ಗ್ರೇಟ್ ಎಸ್ಕೇಪ್ !

ಸುರಿಯುತ್ತಿದ್ದ ಭಾರೀ ಮಳೆಗೆ ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ ಮುಂಬೈಗೆ ತೆರಳುವ ವಿಶೇಷ ರೈಲು (ಮಂಗಳೂರು-ಮುಂಬೈ ಎಕ್ಸ್‌ಪ್ರೆಸ್) ದೂಧ್‌ಸಾಗರ್-ಸೋನೌಲಿಮ್ ನಿಲ್ದಾಣಗಳ ನಡುವೆ ಹಳಿ ತಪ್ಪಿದ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಸಾವುನೋವುಗಳು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ರೈಲಿನಲ್ಲಿದ್ದ ಎಲ್ಲಾ 345 ಪ್ರಯಾಣಿಕರನ್ನು ಮಡ್ಗಾಂವ್‌ಗೆ ವಾಪಸ್ ಕಳುಹಿಸಲಾಗಿದೆ. ಕರಾವಳಿ ಪ್ರದೇಶದಲ್ಲಿ ನಿರಂತರ ಮಳೆ ಮತ್ತು ಗೋವಾದಲ್ಲಿ ನದಿಗಳು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಅನೇಕ ರೈಲುಗಳು ಮಡ್ಗೊವನ್-ಲೋಂಡಾ-ಮಿರಾಜ್ ಮೂಲಕ ಸಂಚರಿಸುತ್ತಿವೆ. ಪರಿಣಾಮವಾಗಿ, ದುರಾದೃಷ್ಟದ ಮಂಗಳೂರು-ಮುಂಬೈ ರೈಲು ಕಾರ್ವಾರ್, ಮಡ್ಗಾಂವ್, …

ಮಂಗಳೂರು-ಮುಂಬೈ ರೈಲು ಹಾದಿಯಲ್ಲಿ ಭೂಕುಸಿತ ಉಂಟಾಗಿ ತಪ್ಪಿದ ಹಳಿ | 345 ಜನರ ಗ್ರೇಟ್ ಎಸ್ಕೇಪ್ ! Read More »

ಒತ್ತಾಯಕ್ಕೆ ಮಣಿದು ಮದುವೆಯಾದ ಯುವತಿ ಹಳೇ ಲವರ್ ನೊಂದಿಗೆ ಪರಾರಿ| ವಿಷಯ ತಿಳಿಯುತ್ತಿದ್ದಂತೆ ಪ್ರೇಮಿಗಳನ್ನು ಮದುವೆ ಮಾಡಿಸಿದ ಕರುಣಾಮಯಿ ಭಾವಿ ಪತಿ

ಪ್ರೇಮಿಗಳಿಬ್ಬರ ಪ್ರೀತಿಗೆ ಯುವತಿ ಮನೆಯವರು ವಿಲನ್ ಆಗಿ ಯುವತಿಗೆ ಬೇರೆ ಮದುವೆ ನಡೆಸಿದರು. ಆ ಬಳಿಕ 17 ದಿನ ಬಿಟ್ಟು ಯುವತಿಯ ಭಾವಿ ಪತಿ ಪ್ರಿಯತಮನ ಜೊತೆಗೆ ಕಳುಹಿಸಿ ಕೊಟ್ಟು ನೈಜ ಪ್ರೀತಿಯನ್ನು ಉಳಿಸಿದ,ಲವ್ & ಬ್ರೇಕ್ ಅಪ್ ಸಿನಿಮಾವನ್ನೂ ಮೀರಿಸುವಂತಹ ನೈಜ ಘಟನೆ ಇದಾಗಿದ್ದು ಜಾರ್ಖಂಡ್ ನಲ್ಲಿ ನಡೆದಿದೆ. ಘಟನೆ ವಿವರ:ರಾಂಚಿಯ ಸುಖದೇವ್ ನಗರದ ಯುವತಿಯೊಬ್ಬಳಿಗೆ ಕುಟುಂಬದ ಸಮ್ಮುಖದಲ್ಲಿಯೇ ವ್ಯಕ್ತಿಯೊಬ್ಬನ ಜೊತೆ ವಿವಾಹ ನಡೆಸಲಾಗಿತ್ತು. ಆದರೆ ಮದುವೆಯಾದ 17 ದಿನಗಳ ಬಳಿಕ ಯುವತಿ ಗಂಡನ ಮನೆಬಿಟ್ಟು …

ಒತ್ತಾಯಕ್ಕೆ ಮಣಿದು ಮದುವೆಯಾದ ಯುವತಿ ಹಳೇ ಲವರ್ ನೊಂದಿಗೆ ಪರಾರಿ| ವಿಷಯ ತಿಳಿಯುತ್ತಿದ್ದಂತೆ ಪ್ರೇಮಿಗಳನ್ನು ಮದುವೆ ಮಾಡಿಸಿದ ಕರುಣಾಮಯಿ ಭಾವಿ ಪತಿ Read More »

ಬೆಳ್ತಂಗಡಿ, ಕೊಕ್ಕಡ | ಉಡುಪಿ ಸಮೀಪ ನಡೆದ ಅಪಘಾತಕ್ಕೆ ಕೊಕ್ಕಡ ನಿವಾಸಿ ಸದಾನಂದ ಕಿಣಿ ಸಾವು

ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಯುವಕನೊಬ್ಬ ಉಡುಪಿಯ ಕುಂದಾಪುರದಲ್ಲಿ ನಡೆದ ಅಪಘಾತದಲ್ಲಿ ಮೃತರಾಗಿದ್ದಾರೆ. ಇಲ್ಲಿನ ಕೊಕ್ಕಡದ ಹಳ್ಳಿಂಗೇರಿ ನಿವಾಸಿಯಾಗಿರುವ ಸದಾನಂದ ಕಿಣಿ ಯಾನೆ ಬಾಬು ಕಿಣಿ ಎಂಬ ಯುವಕನೇ ಮೃತ ಯುವಕ.ವೃತ್ತಿಯಲ್ಲಿ ವೆಲ್ಡಿಂಗ್ ಮತ್ತಿತರ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಸದಾನಂದ ಕಿಣಿ ತಮ್ಮ ಸಹೋದರ ಲಾರಿ ಚಾಲಕ ಕೃಷ್ಣಾನಂದ ಕಿಣಿಯವರೊಂದಿಗೆ ಕಾರ್ಯ ನಿಮಿತ್ತ ಕುಂದಾಪುರಕ್ಕೆ ತೆರಳಿದ್ದನು. ಕುಂದಾಪುರದ ತ್ರಾಸಿ ಎಂಬಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗಳಾಗಿತ್ತು. ಕೂಡಲೇ ಇವನನ್ನು ಮಂಗಳೂರಿನ …

ಬೆಳ್ತಂಗಡಿ, ಕೊಕ್ಕಡ | ಉಡುಪಿ ಸಮೀಪ ನಡೆದ ಅಪಘಾತಕ್ಕೆ ಕೊಕ್ಕಡ ನಿವಾಸಿ ಸದಾನಂದ ಕಿಣಿ ಸಾವು Read More »

ಬಸ್ ಚಾಲಕನ ಏಕಾಏಕಿ ಬ್ರೇಕ್ | ಬಸ್ಸಿನ ಮುಂಭಾಗ ಕುಳಿತಿದ್ದ ಬಾಲಕಿ ಗಾಜಿನ ಮೂಲಕ ಹೊರಬಂದು ಟೈರ್ ನ ಅಡಿಗೆ ಬಿದ್ದು ಸಾವು

ಖಾಸಗಿ ಬಸ್ ಚಾಲಕನೊಬ್ಬನ ನಿರ್ಲಕ್ಷ್ಯದಿಂದಾಗಿ 6 ವರ್ಷದ ಬಾಲಕಿ ಬಸ್ ಹರಿದು ಮೃತಪಟ್ಟಿರುವ ಭಯಾನಕ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿ‌ನ ಹೊನ್ನಾಪುರದ ಬಳಿ ನಡೆದಿದೆ. ಜೀವಿಕಾ (6) ಮೃತಪಟ್ಟ ಬಾಲಕಿ ಎಂದು ತಿಳಿದುಬಂದಿದೆ. ಕುಮಾರ್ ಹಾಗೂ ಜ್ಯೋತಿ ಎಂಬ ದಂಪತಿಯ ಏಕೈಕ ಪುತ್ರಿಯಾಗಿದ್ದ ಜೀವಿಕಾ ಬೆಂಗಳೂರಿನಿಂದ ತನ್ನ ಅಜ್ಜಿ ಗೌರಮ್ಮ ಹಾಗೂ ಚಿಕ್ಕಪ್ಪ ಯೋಗೇಶ್ ಎಂಬವರ ಜೊತೆ ಮಂಡ್ಯ ಜಿಲ್ಲೆ ಮದ್ದೂರಿಗೆ ಖಾಸಗಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದಳು. ಬೆಳಿಗ್ಗೆ ಸುಂಕದಕಟ್ಟೆಯಲ್ಲಿ ಈ ಮೂವರು ಖಾಸಗಿ ಬಸ್ ಹತ್ತಿದ್ದರು. …

ಬಸ್ ಚಾಲಕನ ಏಕಾಏಕಿ ಬ್ರೇಕ್ | ಬಸ್ಸಿನ ಮುಂಭಾಗ ಕುಳಿತಿದ್ದ ಬಾಲಕಿ ಗಾಜಿನ ಮೂಲಕ ಹೊರಬಂದು ಟೈರ್ ನ ಅಡಿಗೆ ಬಿದ್ದು ಸಾವು Read More »

ಫಾಲ್ಸ್‌ ನೋಡಲು ತೆರಳಿ ನಾಪತ್ತೆಯಾಗಿದ್ದ ಪ್ರವಾಸಿಗರು ಪತ್ತೆ

ಉತ್ತರಕನ್ನಡ : ಅಂಕೋಲಾ ಯಲ್ಲಾಪುರ ಮಧ್ಯದ ಶಿರ್ಲೆ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದ 6 ಮಂದಿ ಪ್ರವಾಸಿಗರು ಕಣ್ಮರೆಯಾಗಿದ್ದು,ವ್ಯಾಪಕ ಹುಡುಕಾಟದ ಬಳಿಕ ಪತ್ತೆಯಾಗಿದ್ದಾರೆ. ಹುಬ್ಬಳ್ಳಿ ನೊಂದಣಿ ಹೊಂದಿರುವ ಮೂರು ಬೈಕಿನಲ್ಲಿ ಬಂದ 6 ಜನ ಪ್ರವಾಸಿಗರು ಶಿರ್ಲೆ ಫಾಲ್ಸ್ ನಿಂದ ಮರಳಿ ಬಾರದಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಗುರುವಾರ ಮಧ್ಯಾಹ್ನದಿಂದ ಭಾರಿ ಮಳೆ ಸುರಿಯುತ್ತಿದ್ದರಿಂದ ಪ್ರವಾಸಿಗರ ಸುಳಿವು ಸಿಕ್ಕಿರಲಿಲ್ಲ. ಪ್ರವಾಸಿಗರ ಹುಡುಕಾಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಿರತರಾಗಿದ್ದು ರಾತ್ರಿ ತನಕ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಇಂದು ಶುಕ್ರವಾರ ಬೆಳಿಗ್ಗೆ …

ಫಾಲ್ಸ್‌ ನೋಡಲು ತೆರಳಿ ನಾಪತ್ತೆಯಾಗಿದ್ದ ಪ್ರವಾಸಿಗರು ಪತ್ತೆ Read More »

ಬೆಳ್ತಂಗಡಿ | ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ದನದ ರಕ್ಷಣೆ ಮಾಡಿದ ಯುವಕರು

ನದಿಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ದನವೊಂದನ್ನು ಯುವಕರ ತಂಡವೊಂದು ರಕ್ಷಣೆ ಮಾಡಿದ ಘಟನೆಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ. ದನವು ವೇಣೂರಿನ ಜಯರಾಮ್ ಶೆಟ್ಟಿ ಎಂಬವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಫಲ್ಗುಣಿ ನದಿಯ ನೀರಿನ ರಭಸಕ್ಕೆ ದನವು ಕೊಚ್ಚಿ ಹೋಗುವ ಸ್ಥಿತಿಯಲ್ಲಿತ್ತು. ಈ ವೇಳೆ ಇದನ್ನು ಗಮನಿಸಿದ ನುರಿತ ಈಜುಗಾರರಾದ ಇಂತಿಯಾಝ್ ನಡ್ತಿಕಲ್ ಹಾಗು ಹಸನಬ್ಬ ಕೈರೋಳಿ ಎಂಬುವವರು ನದಿಗೆ ಧುಮುಕಿ ದನವನ್ನು ಎಳೆದು ದಡಕ್ಕೆ ತಂದಿದ್ದಾರೆ. ನದಿ ತಟದ ಬಳಿ ಮೇಯಲು ಹೋಗಿದ್ದ ವೇಳೆ ನದಿ ನೀರಿನ …

ಬೆಳ್ತಂಗಡಿ | ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ದನದ ರಕ್ಷಣೆ ಮಾಡಿದ ಯುವಕರು Read More »

ವರದಕ್ಷಿಣೆಯಾಗಿ 21 ಆಮೆಗಳು, ಕಪ್ಪುನಾಯಿಯ ಸಹಿತ ಹಲವು ವಸ್ತುಗಳಿಗೆ ವಿಚಿತ್ರ ಬೇಡಿಕೆ ಇಟ್ಟ ವರಮಹಾಶಯ !!

ಮುಂಬೈ: ಭಾರತದಲ್ಲಿ ವರದಕ್ಷಿಣೆ ಪಡೆಯುವುದಿರಲಿ, ಕೊಡುವುದು ಕೂಡಾ ಕೇಳುವುದೇ ಅಪರಾಧ. ವರದಕ್ಷಿಣೆಯನ್ನು ಕೊಟ್ಟು ವಧುವನ್ನು ವರನ ಮನೆಗೆ ಕೊಡುವವರು ತಮ್ಮ ಮಗಳ ಪ್ರಾಣದ ಜತೆ ಆಟವಾಡುವುದಲ್ಲದೆ ಮತ್ತೇನಲ್ಲ. ಒಬ್ಬರಿಗೆ ಕೊಟ್ಟು ತೃಪ್ತಿಪಡಿಸಲು ಆಗುವುದಿಲ್ಲ ಮತ್ತು ಆ ರೀತಿ ಕೊಟ್ಟದ್ದು ಶಾಶ್ವತವಲ್ಲ, ತೆಗೆದುಕೊಂಡವರು ಮತ್ತಷ್ಟು ಬೇಡಿಕೆಯನ್ನು ಇಡುತ್ತಲೆ ಹೋಗುತ್ತಾರೆ. ಇದು ಹೆಚ್ಚಿನ ಸಂದರ್ಭಗಳಲ್ಲಿ ನಿಜವಾಗಿದೆ. ಕೆಲವರು ಹಣ ಕೇಳಿದರೆ, ಇನ್ನು ಕೆಲವರು ಬಂಗಲೆ, ಚಿನ್ನ, ದುಬಾರಿ ಕಾರು, ಉಳ್ಳವರು ಸೈಟು ಆಸ್ತಿ  ಮುಂತಾದವುಗಳನ್ನು ಕೇಳುತ್ತಾರೆ. ಇದರಲ್ಲಿ ಅಚ್ಚರಿಯೇನಿಲ್ಲ. ಆದರೆ, …

ವರದಕ್ಷಿಣೆಯಾಗಿ 21 ಆಮೆಗಳು, ಕಪ್ಪುನಾಯಿಯ ಸಹಿತ ಹಲವು ವಸ್ತುಗಳಿಗೆ ವಿಚಿತ್ರ ಬೇಡಿಕೆ ಇಟ್ಟ ವರಮಹಾಶಯ !! Read More »

ATM ಕಾರ್ಡ್ ಬಳಸದೆಯೇ ಹಣ ಡ್ರಾ ಮಾಡುವ ಹೊಸ ವಿಧಾನ ಇಲ್ಲಿದೆ | SBI ಸೇರಿ ಹಲವು ATM ಗಳಲ್ಲಿ ಈ ಸೌಲಭ್ಯ

ಸಾಮಾನ್ಯವಾಗಿ ನಾವು ಎಟಿಎಂಗಳಿಂದ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಲು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತೇವೆ. ಆದರೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ ಇಲ್ಲದೆಯೂ ಎಟಿಎಂನಿಂದ ಹಣವನ್ನು ವಿತ್ ಡ್ರಾ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಈ ಸುದ್ದಿ ಖಂಡಿತವಾಗಿಯೂ ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆಯಾದರೂ, ಇದು ನಿಜ. ಡಿಜಿಟಲ್ ಯುಗದಲ್ಲಿ ನೀವು ಕಾರ್ಡ್ ಇಲ್ಲದೆ ಎಟಿಎಂನಿಂದ ಹಣವನ್ನು ಪಡೆಯಬಹುದು. ಮತ್ತೊಂದು ಮುಖ್ಯ ವಿಷಯವೆಂದರೆ ಇದರಲ್ಲಿ ನೀವು ಸುರಕ್ಷತೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಎನ್‌ಸಿಆರ್ ಕಾರ್ಪೊರೇಷನ್ ಯುಪಿಐ ಎನೇಬಲ್ಡ್ ಇಂಟ್ರೋಪೆರೆಬಲ್ …

ATM ಕಾರ್ಡ್ ಬಳಸದೆಯೇ ಹಣ ಡ್ರಾ ಮಾಡುವ ಹೊಸ ವಿಧಾನ ಇಲ್ಲಿದೆ | SBI ಸೇರಿ ಹಲವು ATM ಗಳಲ್ಲಿ ಈ ಸೌಲಭ್ಯ Read More »

error: Content is protected !!
Scroll to Top