ಬಂಟ್ವಾಳ : ಬೈಕ್‌ಗೆ ಲಾರಿ ಡಿಕ್ಕಿ, ಸವಾರ ಗಂಭೀರ | ಪರಾರಿಯಾಗಲೆತ್ನಿಸಿದ ಚಾಲಕ ಪೊಲೀಸ್ ವಶಕ್ಕೆ

ಬಂಟ್ವಾಳ: ತಾಲೂಕಿನ ಕುದ್ರೆಬೆಟ್ಟು ನಲ್ಲಿ ಬೈಕ್ ಸವಾರನೊರ್ವನಿಗೆ ಲಾರಿ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಸಂದರ್ಭದಲ್ಲಿ ಟ್ರಾಫಿಕ್ ಎಸ್.ಐ.ರಾಜೇಶ್ ಕೆ.ವಿ.ನೇತೃತ್ವದಲ್ಲಿ ಪೋಲೀಸರ ತಂಡದಿಂದ ಕ್ಪಿಪ್ರ ಕಾರ್ಯಾಚರಣೆಯಿಂದ ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ವರದಿಯಾಗಿದೆ.

ಮಂಗಳೂರು ತಾಲೂಕಿನ ಹರೇಕಳ ಪಾವೂರು ನಿವಾಸಿ ಮಹಮ್ಮದ್ ತೌಸೀಫ್ ಗಾಯಗೊಂಡ ಯುವಕ.ಗಂಭೀರವಾಗಿ ಗಾಯಗೊಂಡ ಯುವಕ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ಬಂಟ್ವಾಳ ‌ತಾಲೂಕಿನ ಕುದ್ರೆಬೆಟ್ಟು ಎಂಬಲ್ಲಿ ಸವಾರನೋರ್ವನಿಗೆ ಹಿಂಬದಿಯಿಂದ ಬರುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಲಾರಿಯ ಸಂಖ್ಯೆಯನ್ನು ಸ್ಥಳೀಯರು ನೋಡಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.

Ad Widget / / Ad Widget

ಕೂಡಲೇ ಕಾರ್ಯಪ್ರವೃತ್ತರಾದ ಎಸ್.ಐ. ನೇತೃತ್ವದ ತಂಡ ಕಾರ್ಯ ಚರಣೆ ನಡೆಸಿ ಬಿಸಿರೋಡಿನ ಸರ್ಕಲ್ ಬಳಿ ಲಾರಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿ.ಸಿ.ಟಿ.ವಿ.ಯಲ್ಲಿ ಅಪಘಾತದ ದೃಶ್ಯ ದಾಖಲಾಗಿದೆ.

Leave a Reply

error: Content is protected !!
Scroll to Top
%d bloggers like this: