ಉಡುಪಿ:ಉದ್ಯಮಿಯ ಅಪಹರಿಸಿ ದರೋಡೆ ಪ್ರಕರಣ ಮೂವರು ಆರೋಪಿಗಳ ಬಂಧನ|ಆರೋಪಿಗಳೆಲ್ಲರೂ ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತರು

ಉಡುಪಿಯಲ್ಲಿ ನಡೆದ ಟ್ರೇಡರ್ಸ್ ಮಾಲೀಕರೊಬ್ಬರ ದರೋಡೆ ಪ್ರಕರಣವನ್ನು ಬೇಧಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು,ಬಂಧಿತರನ್ನು ಸಂತೋಷ್ ಬೋವಿ,ಅನಿಲ್ ಪೂಜಾರಿ,ಮಣಿಕಂಠ ಖಾರ್ವಿ ಎಂದು ಗುರುತಿಸಲಾಗಿದ್ದು,ಆರೋಪಿಗಳು ಕಾರ್ಕಳ ತಾಲೂಕಿನ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದರೂ ಹಾಗೂ ಇನ್ನಿತರ ಕ್ರೈಮ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಘಟನೆ ವಿವರ:ಉಡುಪಿಯಲ್ಲಿ ಶೇರ್ ಮಾರುಕಟ್ಟೆ ನಡೆಸುತ್ತಿದ್ದ ಅಶೋಕ್ ಕುಮಾರ್ ಎಂಬುವವರನ್ನು ಜುಲೈ 16ರ ಅಪರಾಹ್ನ 5 ಗಂಟೆ ಸುಮಾರಿಗೆ ಸಂತೋಷ್ ಎಂಬುವವರು ವ್ಯವಹಾರದ ಮಾತುಕತೆ ಸಲುವಾಗಿ ಕಚೇರಿಯಿಂದ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ 70ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ತನ್ನ ಮೊಬೈಲ್, ಕಂಪನಿ ಲೈಸನ್ಸ್ ಹಾಗೂ ಒಂದೂವರೆ ಲಕ್ಷ ಹಣವನ್ನು ದೋಚಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಅದಲ್ಲದೇ ಮರುದಿನ ಆರೋಪಿಗಳು ನನ್ನನ್ನು ಬಲವಂತವಾಗಿ ಕೆನರಾ ಬ್ಯಾಂಕ್ ಏಟಿಎಂ ಗೆ ಬರ ಹೇಳಿ ಹಣ ಡ್ರಾ ಮಾಡಿಸಿಕೊಳ್ಳಲು ಪ್ರಯತ್ನಿಸಿದಾಗ ತಾನು ಬೊಬ್ಬೆ ಹೊಡೆದಿದ್ದು, ಜನ ಸೇರುವುದನ್ನು ಗಮನಿಸಿದ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು ಎಂದು ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಕೃತ್ಯಕ್ಕೆ ಬಳಸಿದ ಇನೋವಾ ಕಾರು ಮಣಿಪಾಲದ ಮಣ್ಣಹಳ್ಳಿ ಎಂಬಲ್ಲಿ ಪತ್ತೆಯಾಗಿತ್ತು. ಇದರ ಜಾಡು ಹಿಡಿದು ಹೊರಟ ಪೊಲೀಸರು ಕಟಪಾಡಿ ಸಮೀಪ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಆಯುಧಗಳ ಸಹಿತ ಸುಮಾರು 135 ಲಕ್ಷ ಹಣವನ್ನೂ ವಶಪಡಿಸಿಕೊಳ್ಳಗಿದೆ.ಪ್ರಕರಣ ನಡೆದು ಕೇವಲ ಮೂರೇ ದಿನದಲ್ಲಿ ಆರೋಪಿಗಳ ಬಂಧನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Leave A Reply

Your email address will not be published.