ನಬಾರ್ಡ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆ | 162 ಹುದ್ದೆಗಳು, ಒಟ್ಟು 75,000 ರೂವರೆಗೆ ಸಂಬಳ

ನಬಾರ್ಡ್, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ (ನಬಾರ್ಡ್-ಎನ್‌ಬಿಎಆರ್‌ಡಿ) ಅಧೀನದಲ್ಲಿ ಕಾರ್ಯನಿರ್ವಹಿಸುವ ರೂರಲ್ ಡೆವಲಪ್‌ಮೆಂಟ್ ಬ್ಯಾಂಕಿಂಗ್ ಸರ್ವೀಸ್ (ಆರ್‌ಡಿಬಿಎಸ್)ನಲ್ಲಿ ಕಾರ್ಯನಿರ್ವಹಿಸಲು ಮ್ಯಾನೇಜರ್ (ಗ್ರೇಡ್ ಬಿ) ಹಾಗೂ ಪ್ರೋಟೋಕಾಲ್ ಆ್ಯಂಡ್ ಸೆಕ್ಯುರಿಟಿ ಸರ್ವೀಸ್‌ನಲ್ಲಿ ಕಾರ್ಯನಿರ್ವಹಿಸಲು ಅಸಿಸ್ಟೆಂಟ್ ಮ್ಯಾನೇಜರ್ (ಗ್ರೇಡ್ ಎ) ಹುದ್ದೆಗೆ ನೇಮಕ ಮಾಡಿಕೊಳ್ಳಲು ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಹುದ್ದೆಗಳಲ್ಲಿ ಮೀಸಲಾತಿ ನಿಗದಿಯಾಗಿದೆ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಒಟ್ಟು ಹುದ್ದೆಗಳು: 162

ಹುದ್ದೆ ವಿವರ

  • ಮ್ಯಾನೇಜರ್ (ಆರ್‌ಡಿಬಿಎಸ್) – 7
    *ಅಸಿಸ್ಟೆಂಟ್ ಮ್ಯಾನೇಜರ್ (ಪಿ ಆ್ಯಂಡ್ ಎಸ್ಎಸ್) – 2
  • ಅಸಿಸ್ಟೆಂಟ್ ಮ್ಯಾನೇಜರ್ (ರಾಜ್‌ಭಾಷಾ) – 5 * ಅಸಿಸ್ಟೆಂಟ್ ಮ್ಯಾನೇಜರ್ (ಆರ್‌ಡಿಬಿಎಸ್) – 148

ಶೈಕ್ಷಣಿಕ ಅರ್ಹತೆ: ಅಗ್ರಿಕಲ್ಟರ್/ಅಗ್ರಿಕಲ್ಟರಲ್ ಇಂಜಿನಿಯರಿಂಗ್/ ಅನಿಮಲ್ ಹಸ್ಪಂಡರಿ/ ಫಿಷರೀಸ್/ ಾರೆಸ್ಟ್/ ಪ್ಲಾಂಟೇಷನ್/ ಹಾರ್ಟಿಕಲ್ಟರ್/ ಲ್ಯಾಂಡ್ ಡೆವಲಪ್‌ಮೆಂಟ್-ಸಾಯಿಲ್ ಸೈನ್ಸ್/ ವಾಟರ್ ರಿಸೋರ್ಸ್/ ಲೈನಾನ್ಸ್ (ಬಿಬಿಎ)/ ಕಂಪ್ಯೂಟರ್ ಆ್ಯಂಡ್ ಇನ್ ಮೇರ್ಷನ್ ಟೆಕ್ನಾಲಜಿಯಲ್ಲಿ ಪದವಿ/ ಸ್ನಾತಕೋತ್ತರ ಪದವಿ, ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಪದವಿ/ ಸ್ನಾತಕೋತ್ತರ ಪದವಿ ಪಡೆದಿದು ಕನಿಷ ಶೇ 60 ಅಂಕ ಮೀಸಲಾತಿ

ಪದವಿ ಪಡೆದಿದ್ದು, ಕನಿಷ್ಠ ಶೇ.60 ಅಂಕ, ಮೀಸಲಾತಿ ಅಭ್ಯರ್ಥಿಗಳು ಕನಿಷ್ಠ ಶೇ.55 ಅಂಕ ಪಡೆದಿರಬೇಕು.

ವಯೋಮಿತಿ: 1.7.2021ಕ್ಕೆ ಅನ್ವಯವಾಗುವಂತೆ ಹುದ್ದೆಗಳಿಗೆ ಅನುಗುಣವಾಗಿ 21 ರಿಂದ 30, 32, 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

ವೇತನ: ಅಸಿಸ್ಟೆಂಟ್ ಮ್ಯಾನೇಜರ್‌ಗೆ ಮಾಸಿಕ 28,150 55,600 ರೂ. ಹಾಗೂ ಮ್ಯಾನೇಜರ್ ಹುದ್ದೆಗೆ 35,150 78,000 ರೂ. ವೇತನ ಇದೆ.

  • ಪರೀಕ್ಷಾ ಪೂರ್ವ ತರಬೇತಿ ಎಸ್ಸಿ, ಎಸ್ಟಿ, ಅಂಗವಿಕಲ, ಇತರ ಹಿಂದುಳಿದ ಅಭ್ಯರ್ಥಿಗ ಉಚಿತವಾಗಿ ವಿವಿಧ ಸ್ಥಳಗಳಲ್ಲಿ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಕರ್ನಾಟಕದ ಅಭ್ಯರ್ಥಿಗಳಿಗೆ Karnataka NABARD Towers, 46, K.G. Road, Bangalore 560 009 ವಿಳಾಸದಲ್ಲಿ ತರಬೇತಿ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು 9.8.2021ರ ಗಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ

ಅರ್ಜಿ ಶುಲ್ಕ: ಅಸಿಸ್ಟೆಂಟ್ ಮ್ಯಾನೇಜರ್ ರಾಜ್‌ಭಾಷಾ ಹಾಗೂ ಆರ್‌ಡಿಬಿಎಸ್‌ಗೆ ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳು 150 ರೂ. ಹಾಗೂ ಇತರ ಅಭ್ಯರ್ಥಿಗಳು 800 ರೂ., ಎಎಂ ಪಿ ಆ್ಯಂಡ್ ಎಸ್ಎಸ್ ಹುದ್ದೆಗೆ ಮೀಸಲಾತಿ ಅಭ್ಯರ್ಥಿಗಳು 100 ರೂ., ಇತರ ಅಭ್ಯರ್ಥಿಗಳು 750 ರೂ., ಮ್ಯಾನೇಜರ್ ಹುದ್ದೆಗೆ ಮೀಸಲಾತಿ ಅಭ್ಯರ್ಥಿಗಳು 150 ರೂ., ಇತರ ಅಭ್ಯರ್ಥಿಗಳು 900 ರ ಅರ್ಜಿ ಶುಲ್ಕ ಪಾವತಿಸಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 7.8.2021
ಅಧಿಸೂಚನೆಗೆ : https://bit.ly/36HVGhG
ಮಾಹಿತಿಗೆ : http://www.nabard.org
ಪದವಿ ಪೂರ್ವ ಶಿಕ್ಷಣ ಇಲಾಖೆ 18ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು-560012,

Leave A Reply

Your email address will not be published.