ಆಕಸ್ಮಿಕವಾಗಿ ಉರಿದ ಮನೆ | ಮಲಗಿದ್ದಲ್ಲೇ ಸುಟ್ಟು ಕರಕಲಾದ ಪತಿ, ಪತ್ನಿಯ ಸ್ಥಿತಿ ಗಂಭೀರ

ಇಂದು ಬೆಳಗಿನ ಜಾವ ಮನೆಯೊಂದು ಏಕಾಏಕಿ ಹೊತ್ತಿ ಉರಿದ ಪರಿಣಾಮ ಮಲಗಿದ್ದಲ್ಲೇ ವ್ಯಕ್ತಿಯೊಬ್ಬ ಸಜೀವ ದಹನ ಆದ ಘಟನೆ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ತೇಕಲವಟ್ಟಿ ಗ್ರಾಮದಲ್ಲಿ ನಡೆದಿದೆ.

ಪ್ರಕಾಶ್ (55) ಮೃತ ದುರ್ದೈವಿ. ಇವರ ಪತ್ನಿ ಗಂಭೀರ ಗಾಯಗೊಂಡಿದ್ದು, ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕಾಶ್ ಮನೆಯಲ್ಲೇ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. ಬೆಳಗಿನ ಜಾವ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ನಿದ್ರೆ ಮಾಡುತ್ತಿದ್ದ ಪ್ರಕಾಶ್ ಅಲ್ಲೇ ಸುಟ್ಟುಕರಕಲಾಗಿದ್ದಾರೆ. ಕಿರಾಣಿ ಅಂಗಡಿಯಲ್ಲಿದ್ದ ಎಲ್ಲಾ ಸಾಮಗ್ರಿ ಸಂಪೂರ್ಣ ಸುಟ್ಟು ಬೂದಿಯಾಗಿದೆ ಎಂದು ತಿಳಿದುಬಂದಿದೆ.

Ad Widget


Ad Widget


Ad Widget

ಈ ಬಗ್ಗೆ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Ad Widget
Ad Widget Ad Widget
error: Content is protected !!
Scroll to Top
%d bloggers like this: