ಹುಡುಗಿಯರಿಗೆ ಸಿನಿಮಾಗಳಲ್ಲಿ ಅವಕಾಶ ಕೊಡಿಸುವ ಆಮಿಷ | ಅಶ್ಲೀಲ ಚಿತ್ರಗಳ ಅವಕಾಶ ಕೊಡಿಸಿ, ಕೊನೆಗೆ ವೇಶ್ಯಾವಾಟಿಕೆಗೆ !

ಇತ್ತೀಚೆಗೆ ಅನೇಕರು ಮಹಿಳೆಯರಿಗೆ ಸಿನಿಮಾದಲ್ಲಿ ಅವಕಾಶ ನೀಡುತ್ತೇವೆ ಎಂದು ನಂಬಿಸಿ ಮೋಸ ಮಾಡುತ್ತಿರುವುದು ಹೆಚ್ಚಾಗಿದ್ದು, ಇದೀಗ ನಿರ್ಮಾಪಕ ಎಂದು ಹೇಳಿ ಸಿನಿಮಾದಲ್ಲಿ ಅವಕಾಶ ನೀಡೋದಾಗಿ ಮಹಿಳೆಯರನ್ನು ನಂಬಿಸಿ ವೇಶ್ಯಾವಾಟಿಕೆ ದಂಧೆ ನಡೆಸುತಿದ್ದ ಆರೋಪದ ಹಿನ್ನೆಲೆಯಲ್ಲಿ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ತಾನು ನಿರ್ಮಾಪಕ ಎಂದು ಯುವತಿಯರು ಹಾಗೂ ಮಹಿಳೆಯರ ಬಳಿಯಲ್ಲಿ ಪರಿಚಯ ಮಾಡಿಸಿಕೊಂಡು,ನಂತರದಲ್ಲಿ ಅವರಿಗೆ ಸಿನಿಮಾದ ಆಫರ್‌ ತೋರಿಸಿ ವೇಶ್ಯಾವಾಟಿಕೆ ದಂಧಗೆ ಬಳಸಿಕೊಳ್ಳುತ್ತಿದ್ದ.

ಮುಂಬೈನ ಮೀರಾ ರಸ್ತೆಯಲ್ಲಿರುವ ವಸತಿ ಸಮುಚ್ಚಯದಲ್ಲಿ ಹಲವು ವರ್ಷಗಳಿಂದಲೂ ಆರೋಪಿ ಖಾನಯಲಾಲ್‌ ಬಾಲ್ಚಂದಾನಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದು,ವನಿತಾ ಇಂಗಲ್‌ ಎಂಬುವವರು ಏಜೆಂಟ್‌ ಆಗಿ ಅವರೊಂದಿಗೆ ಕೆಲಸವನ್ನು ಮಾಡುತ್ತಿದ್ದರು.

Ad Widget / / Ad Widget

ಈ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಆಧಿಕಾರಿ ಡಾ.ಮಹೇಶ್‌ ಪಾಟೀಲ್‌ ತಿಳಿಸಿದ್ದಾರೆ.

ಇತ್ತೀಚೆಗೆ ಅಶ್ಲೀಲ ಚಿತ್ರಗಳ ನಿರ್ಮಾಣದ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್‌ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್‌ ಕುಂದ್ರಾ ಅವರನ್ನು ಕ್ರೈಂ ಬ್ರ್ಯಾಂಚ್‌ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಇಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

Leave a Reply

error: Content is protected !!
Scroll to Top
%d bloggers like this: