ನಾಯಕತ್ವ ಬದಲಾವಣೆ ವಿಷಯದಲ್ಲಿ ಮಹತ್ವದ ಬದಲಾವಣೆ | ಮುಖ್ಯಮಂತ್ರಿ ಕರೆದಿದ್ದ ಶಾಸಕಾಂಗ ಪಕ್ಷದ ಸಭೆ ದಿಢೀರ್ ರದ್ದು, ರಿಲ್ಯಾಕ್ಸ್ ಮೂಡಿನಲ್ಲಿ ಸಿಎಂ !!

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ
ಬದಲಾವಣೆಯಾಗಲಿದೆ. ಜುಲೈ 25 ರಂದು ಸಿಎಂ ಯಡಿಯೂರಪ್ಪ ಶಾಸಕಾಂಗ ಸಭೆಯಲ್ಲಿ ಪ್ರಮುಖ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದೆಲ್ಲಾ ಈ ಮೊದಲು ಹೇಳಲಾಗಿತ್ತು.

ನಿನ್ನೆ 35 ಸ್ವಾಮೀಜಿಗಳು ಕೂಡ ಸಿಎಂ ಭೇಟಿಯಾಗಿ ಬೆನ್ನಿಗೆ ನಿಂತು ಬಿ.ಎಸ್.ವೈ. ಬದಲಾವಣೆ ಮಾಡಿದ್ರೆ ಸರಿ ಇರಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಇನ್ನೂ ಕೆಲ ದಿನಗಳಲ್ಲಿ 600 ಸ್ವಾಮೀಜಿಗಳು ಸಮ್ಮೇಳನ ನಡೆಸಿ ದೊಡ್ಡದಾಗಿ ಶಕ್ತಿ ಪ್ರದರ್ಶನ ನಡೆಸಿ ಯಡಿಯೂರಪ್ಪನವರಿಗೆ ಬೆಂಬಲ ಘೋಷಿಸಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾ ಕೂಡ ಯಡಿಯೂರಪ್ಪನವರಿಗೆ ಬೆಂಬಲ ನೀಡಿದ್ದು, ಈ ರೀತಿ ಅನೇಕ ಬೆಳವಣಿಗೆಗಳ ನಡುವೆ ಬಿಜೆಪಿಯಲ್ಲಿ ತೆರೆಮರೆಯಲ್ಲೇ ಚಟುವಟಿಕೆಗಳು ಗರಿಗೆದರಿವೆ.

ಇದರ ಮಧ್ಯೆ ಕಾಂಗ್ರೆಸ್ ನಿಂದ ಹೊರಬಂದು ಬಿಜೆಪಿ ಸೇರಿ ಈ ಸರಕಾರ ನಿರ್ಮಿಸಲು ಮೂಲ ಕಾರಣಕರ್ತರಾದ r17 ಶಾಸಕರು ಮುಖ್ಯಮಂತ್ರಿ ಬದಲಾವಣೆಯ ವಿಷಯದಿಂದ ತಲ್ಲಣಗೊಂಡಿದ್ದೆ ತಮ್ಮ ಭವಿಷ್ಯವೇನು ಎಂಬ ಬಗ್ಗೆ ಚಿಂತಿತರಾಗಿದ್ದಾರೆ. ಈ ಚಿಂತಿತ ಗುಂಪು ನಿನ್ನೆ ಬೆಂಗಳೂರಿನಲ್ಲಿ ಖಾಸಗಿ ಹೋಟೆಲೊಂದರಲ್ಲಿ ಗುಪ್ತ ಸಭೆ ನಡೆಸಿದರು. ನಾವು ಯಡಿಯೂರಪ್ಪನವರನ್ನು ನಂಬಿಕೊಂಡು ಬಂದಿದ್ದು. ಇದೀಗ ಯಡಿಯೂರಪ್ಪನವರ ಬದಲಾವಣೆ ಆದರೆ ನಮ್ಮ ಗತಿಯೇನು? ನಮ್ಮ ಸ್ಥಾನಮಾನ ಏನು ಎಂಬ ಬಗ್ಗೆ ಅತಂತ್ರ ಸ್ಥಿತಿಯಲ್ಲಿ ಇರುವ ಈ ‘ ಆಗಂತುಕರು’ ಯಡಿಯೂರಪ್ಪನವರ ಬದಲಾವಣೆಗೆ ಸುತರಾಂ ಸಿದ್ಧರಿಲ್ಲ.
ಹೀಗೆ ಹಲವು ಮೂಲಗಳಿಂದ ಪಕ್ಷಾತೀತವಾಗಿ ಯಡಿಯೂರಪ್ಪನವರಿಗೆ ಚೆನ್ನಾಗಿ ಮೂಡಿಬರುತ್ತಿದೆ. ಬಹುಶಃ ಯಡಿಯೂರಪ್ಪನವರೇ ಇಷ್ಟೊಂದು ಪ್ರಮಾಣದಲ್ಲಿ ಸಪೋರ್ಟ್ ಊಹಿಸಿರಲಿಕ್ಕಿಲ್ಲ. ಹೈಕಮಾಂಡ್ ಅಂತೂ ಇದನ್ನು ಎಕ್ಸ್ಪೆಕ್ಟ್ ಮಾಡಿರಲಿಲ್ಲ ಅನ್ನಿಸುತ್ತಿದೆ.

Ad Widget / / Ad Widget

ಅಲ್ಲದೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಪೆಗಾಸಸ್ ಸ್ಪೈವೇರ್ ಮುಂತಾದ ಬಹುದೊಡ್ಡ ವಿವಾದಗಳಲ್ಲಿ ಸಿಲುಕಿರುವಾಗ ನಾಯಕತ್ವ ಬದಲಾವಣೆ ಮಾಡಿ ಇನ್ನೊಂದು ವಿವಾದ ಮೈಮೇಲೆ ಎಳೆದುಕೊಳ್ಳುವ ಹೈಕಮಾಂಡ್ ತೆಗೆದುಕೊಳ್ಳಲಾಗುವುದು ಎನ್ನಲಾಗುತ್ತಿದೆ.

ಈ ಎಲ್ಲಾ ಲೇಟೆಸ್ಟ್ ಬೆಳವಣಿಗೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊಂಚ ರಿಲಾಕ್ಸ್ ಆಗಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ಅವರು ನಡೆಸಲು ಉದ್ದೇಶಿಸಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ರದ್ದು ಮಾಡಲಾಗಿದೆ. ಜುಲೈ 25 ರಂದು ಬೆಳಗ್ಗೆ 11.30 ಕ್ಕೆ ಭೋಜನಕೂಟದ ಹೆಸರಿನಲ್ಲಿ ಶಾಸಕರ ಸಭೆಯನ್ನು ನಿಗದಿಪಡಿಸಲಾಗಿತ್ತು. ನಾಳೆ ರಾತ್ರಿ ಭೋಜನ ಕೂಟ ಮಾತ್ರ ನಿಗದಿಯಾಗಿದೆ. ಬಿಜೆಪಿ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರಿಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಭೋಜನಕೂಟ ಏರ್ಪಡಿಸಲಾಗಿದೆ. ಆದರೆ, ಶಾಸಕಾಂಗ ಸಭೆಯನ್ನು ರದ್ದು ಮಾಡಲಾಗಿದೆ ಎಂದು ಸಚೇತಕ ಸುನಿಲ್ ಕುಮಾರ್ ತಿಳಿಸಿದ್ದಾರೆ.

ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಭೋಜನಕೂಟ ಆಯೋಜಿಸಲಾಗಿದೆ. ಮೊದಲು ಬಿಜೆಪಿ ಶಾಸಕಾಂಗ ಸಭೆ ಆಯೋಜಿಸಿದ್ದರೂ, ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿ ಶಾಸಕಾಂಗ ಸಭೆಯನ್ನು ಸಿಎಂ ಯಡಿಯೂರಪ್ಪ ರದ್ದು ಮಾಡಿದ್ದಾರೆ. ಮುಂದಿನ ಎರಡು ವರ್ಷದ ಅವಧಿಗೆ ಅವರೇ ಸಿಎಂ ಆಗಿ ಮುಂದುವರೆಯುವುದು ಖಚಿತವಾಗಿರುವುದರಿಂದ ಶಾಸಕಾಂಗ ಸಭೆಯನ್ನು ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ.

ಬಿಜೆಪಿ ಹೈಕಮಾಂಡ್ ಪರ್ಯಾಯ ನಾಯಕತ್ವ
ಹುಡುಕಾಟದಲ್ಲಿದ್ದು, ರಾಜ್ಯದ ರಾಜಕೀಯ
ಬೆಳವಣಿಗೆಗಳನ್ನಾಧರಿಸಿ ಸದ್ಯಕ್ಕೆ ನಾಯಕತ್ವ ಬದಲಾವಣೆ  ಶಾಸಕಾಂಗ ಪಕ್ಷದ ಸಭೆ ರದ್ದು ಮಾಡಿದ್ದಾರೆ ಎನ್ನಲಾಗಿದೆ.

Leave a Reply

error: Content is protected !!
Scroll to Top
%d bloggers like this: