ಕಡಬ ಪೇಟೆ : ಮರಕೆಸು ಎಲೆ ಮಾರಾಟದ ಭರಾಟೆ

ಕಡಬ : ಆಟಿ ತಿಂಗಳು ಆರಂಭವಾಗುತ್ತಿದ್ದಂತೆಯೇ ಕರಾವಳಿ ಭಾಗದ ಅಡುಗೆ ಮನೆಗಳಲ್ಲಿ ಎಲೆ , ಗೆಡ್ಡೆ ಬಳ್ಳಿ ಮುಂತಾದ ಪ್ರಕೃತಿದತ್ತವಾದ ಆಹಾರಗಳದ್ದೇ ಘಮ . ಅದಕ್ಕೆ ಪೂರಕವಾಗಿ ತುಳುನಾಡ ವಿಶೇಷ ಖಾದ್ಯ ಪತ್ರೊಡೆ ತಯಾರಿಗೆ ಬೇಕಾದ ಮರಕೆಸುವಿನ ಎಲೆ ಮಾರುಕಟ್ಟೆಗೆ ಲಗ್ಗೆ ಇಡುತ್ತದೆ.

ರವಿವಾರ ಕಡಬ ಪೇಟೆಯಲ್ಲಿ ತರಕಾರಿ ಅಂಗಡಿಯವರು ಹಾಗೂ ರಸ್ತೆ ಬದಿಯ ವ್ಯಾಪಾರಿಗಳು ಮರಕೆಸುವಿನ ಭರ್ಜರಿ ವ್ಯಾಪಾರ ನಡೆಸಿದರು .

ಕಡಬ ಪೇಟೆಯಲ್ಲಿ ರವಿವಾರ ಒಂದೇ ದಿನ ಸುಮಾರು 1 ಸಾವಿರ ಕಟ್ಟುಮರಕೆಸು ಎಲೆ ಮಾರಾಟವಾಗಿದೆ . ಒಂದು ಕಟ್ಟಿನಲ್ಲಿ 10 ಎಲೆಗಳಿದ್ದು ಅದು 25 ರಿಂದ 30 ರೂ.ಗಳಿಗೆ ಮಾರಾಟವಾಗಿದೆ.

ಘಟ್ಟದ ಮೇಲಿಂದ ಸರಬರಾಜು ಆಟಿ ತಿಂಗಳು ಕಾಲಿಡುತ್ತಿದ್ದಂತೆಯೇ ಹಾಸನ ಜಿಲ್ಲೆಯ ಸಕಲೇಶಪುರ , ಕೂಡುರಸ್ತೆ , ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ , ಕೊಟ್ಟಿಗೆಹಾರ , ಬಣಕಲ್ , ಕೊಡಗಿನ ಸಂಪಾಜೆ ಮುಂತಾದ ಕಡೆಗಳಿಂದ ದ.ಕ. ಜಿಲ್ಲೆಯ ಸುಳ್ಯ , ಪುತ್ತೂರು , ಕಡಬ , ಉಪ್ಪಿನಂಗಡಿ , ವಿಟ್ಟ ಬೆಳ್ತಂಗಡಿ , ಬಂಟ್ವಾಳ , ಮಂಗಳೂರು ಮುಂತಾದ ಕಡೆಗೆ ಮರಕೆಸು ಸರಬರಾಜಾಗುತ್ತದೆ .

ವ್ಯಾಪಾರಿಗಳು ಆಟೋ , ಕಾರು , ಮಿನಿ ಟೆಂಪೋಗಳಲ್ಲಿ ತುಂಬಿಕೊಂಡು ಪೇಟೆ ಪೇಟೆಗೆ ತೆರಳಿ ಮಾರಾಟ ಮಾಡುತ್ತಾರೆ .

Leave A Reply

Your email address will not be published.