ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 40 ಕೋಟಿ ಬಾಹುಬಲಿಗಳನ್ನು ಸೃಷ್ಟಿಸಿದ್ದಾರಂತೆ. ಯಾರವರು ಗೊತ್ತಾ ?!

ನವದೆಹಲಿ: ದೇಶದಲ್ಲಿ ಇದುವರೆಗೆ 40 ಕೋಟಿ ಬಾಹುಬಲಿಗಳನ್ನು ಸೃಷ್ಟಿಸಲಾಗಿದೆಯಂತೆ. ಹಾಗೆಂದು ನಮ್ಮ ಪ್ರಧಾನಿ ಮೋದಿ ಹೇಳಿದ್ದಾರೆ. ಯಾರಾ 40 ಕೋಟಿ ಬಾಹುಬಲಿಗಳು ?!

ನಿನ್ನೆ ಸಂಸತ್ತಿನ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ.

ಮಾರಕ ಕೊರೋನಾ ನಿಯಂತ್ರಿಸುವ ಸಲುವಾಗಿ ಬಾಹುಗಳಿಗೆ ಅಂದರೆ ತೋಳಿಗೆ ಲಸಿಕೆ ನೀಡಲಾಗುತ್ತಿದೆ. ಇದರಿಂದ ರೋಗ ತಡೆಗಟ್ಟಲು ಸಾಧ್ಯವಾಗಿದೆ. ಇದುವರೆಗೆ 40 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಅವರೆಲ್ಲರೂ ಬಾಹುಬಲಿಗಳಾಗಿದ್ದಾರೆ ಎಂದು ಪ್ರಧಾನಿ ಪರೋಕ್ಷವಾಗಿ ಸೂಪರ್ ಹಿಟ್ ಚಿತ್ರ ಬಾಹುಬಲಿಯ ಉದಾಹರಣೆ ನೀಡಿದ್ದಾರೆ.

Ad Widget


Ad Widget


Ad Widget

Ad Widget


Ad Widget

ಸಂಸತ್ತಿನಲ್ಲಿ ಕೊರೋನಾ ನಿರ್ವಹಣೆ ಸಂಬಂಧ ಆರೋಗ್ಯ ಪೂರ್ಣ ಚರ್ಚೆಗೆ ಸರ್ಕಾರ ಸಿದ್ಧ ಎಂದು ಪ್ರಧಾನಿ ಘೋಷಿಸಿದ್ದಾರೆ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: