ಒಲಿಂಪಿಕ್ಸ್ ಗಾಗಿ ತಯಾರಾಗಿದೆ ಹೊಸ ಮಂಚ | ನಿದ್ದೆ ಬಿಟ್ಟು ಬೇರೇನೂ ಸಂಚು ರೂಪಿಸಬಾರದೆಂದು ತಯಾರಿಸಿದ್ದಾರೆ ಈ ಸೆಕ್ಸ್ ವಿರೋಧಿ ಮಂಚ !

ಟೋಕಿಯೊ: ಇದು ಟೋಕಿಯೊ ಒಲಿಂಪಿಕ್ಸ್ ಗಾಗಿ ಅಲ್ಲಿನ ಒಲಿಂಪಿಕ್ಸ್ ಸಂಘಟಕರು ತಯಾರಿಸಿದ ಸ್ಪೆಷಲ್ ಮಂಚ. ಮಂಚ ಕಂ ಹಾಸಿಗೆ. ಇದನ್ನು ಒಲಿಂಪಿಕ್ಸ್ ವೀಕ್ಷಣೆಗೆಂದು ಬರುವ ಪ್ರೇಕ್ಷಕರಿಗೆ, ಆಟಗಾರರಿಗೆ ಮತ್ತು ಹಲವು ದೇಶಗಳ ಸ್ಟಾಪ್ ಗಳಿಗೆ ಅನುಕೂಲ ಆಗದೆ (!!) ಇರಲಿ ಎಂದು ರಚಿಸಲಾಗಿದೆ.
ಮುಖ್ಯವಾಗಿ ಆಟಗಾರರು ಹೊಸ ಊರಿಗೆ ಬಂದು, ಊರು ಚೆನ್ನಾಗಿದೆ, ಮಂಚ ಚೆನ್ನಾಗಿದೆ ಎಂದು ಹಳೆಯ ಆಟ ಆಡುವ ಹೊಸ ಸಂಚನ್ನೇನಾದರೂ ರೂಪಿಸಬಾರದೆಂದು ಈ ಪ್ಲಾನು.

ಈ ಪ್ಲಾನಿನ ಪ್ರಕಾರ ಹೆಚ್ಚು ಭಾರ ಬಿದ್ದರೆ ಈ ಮಂಚ ಮುರಿದು ಬೀಳಲಿದೆ. ಆ ಮೂಲಕ ದೈಹಿಕ ಸಂಪರ್ಕವನ್ನು ತಡೆಯುವ ಪ್ಲಾನ್ ಆಯೋಜಕರದು. ಕಾರ್ಡ್ ಬೋರ್ಡ್ ನಿಂದ ತಯಾರಿಸಲಾದ ಈ ಮಂಚವು ಗರಿಷ್ಠ 200 ಕೆಜಿ ತೂಕವನ್ನು ಮಾತ್ರ ಹೊರಬಲ್ಲದು. ಇಬ್ಬರು ಮಾಮೂಲಾಗಿ ನೆಟ್ಟಗೆ ಮಲಗಿದ್ರೆ ಸುಮ್ಮನೆ ಇರುವ ಈ ಮಂಚವು, ಒಂದು ವೇಳೆ ಅವರು ಆಟ ಶುರುಮಾಡಿ ಮಂಚದ ಮೇಲೆ ಜೆರ್ಕ್ ಹೊಡೆದರೆ ಪಟಾರಣೆ ತುಂಡಾಗಿ ಬಿಡುತ್ತದೆ. ಹಾಗಾಗಿ ಈ ಮಂಚದಲ್ಲಿ ಮಲಗಿ ಸೆಕ್ಸ್ ಮಾಡಲ್ಲ, ಮಾಡಬಾರದು ಅನ್ನುವುದು ಒಲಿಂಪಿಕ್ಸ್ ಆಯೋಜಕರ ಹುನ್ನಾರ.

ಟೋಕಿಯೊ ಒಲಿಂಪಿಕ್ಸ್ ಸಂಘಟಕರು ಜಪಾನ್‌ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿದ್ಧಪಡಿಸಿರುವ ವಿಶೇಷ ಮಂಚ ಕಂ ಹಾಸಿಗೆಯ ಕರಾಮತ್ತು ಇದು. ವಿಷಯ ಏನಂದ್ರೆ, ಕೋವಿಡ್ ಇರುವ ಕಾರಣ ಈ ಟೋಕಿಯೋ ಒಲಿಂಪಿಕ್ಸ್ ವೇಳೆ ಲೈಂಗಿಕ ಸಂಪರ್ಕ ತಡೆಯಲು ಸಂಘಟಕರು ಇನ್ನಿಲ್ಲದ ಯತ್ನ ನಡೆಸಿದ್ದಾರೆ. ಇದೇ ಉದ್ದೇಶದಿಂದ ಈ ಬಾರಿ 1,60,000 ಕಾಂಡೋಮ್ ಗಳನ್ನು ಒಲಿಂಪಿಕ್ಸ್ ಸಂದರ್ಭ ನೀಡಲು ನಿರ್ಧರಿಸಿದ್ದಾರೆ. ರೂಮಿನ ಒಳಗೆ ಮಂಚವನ್ನೇ ಬಳಸದೆ ಬೇರೆಯದೇ ಸಂಚು ರೂಪಿಸಿದರೆ ಕಡೆಗೆ ಇದಾದರೂ ಇರಲಿ ಎನ್ನುವುದು ಆಯೋಜಕರ ಮುಂದಾಲೋಚನೆ.

Ad Widget


Ad Widget


Ad Widget

ಅಮೆರಿಕದ ಕ್ರೀಡಾಪಟು ಪಾಲ್ ಚೆಲಿವೊ ತಮ್ಮ ಟ್ವಿಟರ್ ಖಾತೆಯಲ್ಲಿ ಬೆಡ್‌ಗಳ ಫೋಟೋ ಶೇರ್ ಮಾಡಿ ಅದನ್ನು ‘ಸೆಕ್ಸ್ ವಿರೋಧಿ’ ಎಂದು ಕರೆದಿದ್ದಾರೆ. ಸೆಕ್ಸ್ ಎಂಬ ಜಗತ್ತಿನ ಫೇವರಿಟ್ ಅಟವನ್ನು ಒಲಿಂಪಿಕ್ ಎಂಬ ಆಟದ ನಗರದಲ್ಲಿ ಬ್ಯಾನ್ ಮಾಡಲು ಹೋದರೆ ಏನಾಗಬಹದು ? ಊಹಿಸಿ !!

Leave a Reply

Ad Widget
Ad Widget Ad Widget
error: Content is protected !!
Scroll to Top
%d bloggers like this: