ಆಲಂಕಾರು : ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ ಯೋಜನೆಯಡಿ ಆರ್ಥಿಕ ನೆರವು ಹಸ್ತಾಂತರ

ಆಲಂಕಾರು : ಕ್ಯಾಂಪ್ಕೋ ಸಂಸ್ಥೆ ಮಂಗಳೂರು ಇದರ ವತಿಯಿಂದ “ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ” ಎಂಬ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ನೀಡಿದ ಆರ್ಥಿಕ ಸಹಕಾರ ನೆರವಿನ ಹಸ್ತಾಂತರ ಆಲಂಕಾರು ಕ್ಯಾಂಪ್ಕೋ ಶಾಖೆಯಲ್ಲಿ ನಡೆಯಿತು.

ಯೋಜನೆಯ ಫಲಾನುಭವಿ ಹಾಗೂ ಕ್ಯಾಂಪ್ಕೋ ಸದಸ್ಯ ಬಲ್ಯ ನಿವಾಸಿ ಕೊರಗಪ್ಪ ಗೌಡ ರವರ ಹೃದಯ ಚಿಕಿತ್ಸೆ (ಅಂಜಿಯೋಪ್ಲಾಸ್ಟಿ) ರೂ.12,500/- ಮೊತ್ತದ ಚೆಕನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಶ್ರೀ ಕೃಷ್ಣಪ್ರಸಾದ್ ಮಡ್ತಿಲ ಅವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಮುಖ್ಯ ಪ್ರಾದೇಶಿಕ ಮಾರುಕಟ್ಟೆ ಪ್ರಬಂಧಕರಾದ ಗೋವಿಂದ ಭಟ್, ಆಲಂಕಾರು ಶಾಖಾ ವ್ಯವಸ್ಥಾಪಕರಾದ ಉದಯ ಬಿ.ಆರ್. ಸಿಬ್ಬಂದಿಗಳಾದ ಮಹೇಶ್ ಟಿ. ಧನುಷ್ ಉಪಸ್ಥಿತರಿದ್ದರು.

Ad Widget


Ad Widget


Ad Widget

Ad Widget


Ad Widget

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: