5500 ರೂ. ಮೇಲ್ಪಟ್ಟ ಉಡುಗೊರೆ ಕಡ್ಡಾಯ, ವಧುವನ್ನು ಮದುವೆ ಮನೆಯಲ್ಲಿ ಯಾರೂ ಮಾತಾಡಕೂಡದು ಮುಂತಾದ ವಿಚಿತ್ರ ಕಂಡೀಶನ್ ಹಾಕಿದ್ದ ಮ್ಯಾರೇಜ್ ಇನ್ವಿಟೇಶನ್ ವೈರಲ್ !

ಕೊರೋನಾ ಹಿನ್ನೆಲೆಯಲ್ಲಿ ಮದುವೆಗೆ ಕೆಲವೊಂದು ಷರತ್ತು ವಿಧಿಸಲಾಗಿದೆ. ಆದರೆ ಇಲ್ಲೊಂದು ಮದುವೆಯಲ್ಲಿ ಮದುಮಕ್ಕಳೇ ವಿಚಿತ್ರ ಎನಿಸುವಂಥ ಷರತ್ತು ವಿಧಿಸಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಮೊದಲೆಲ್ಲಾ ಮನೆಯವರೇ ಪ್ಲ್ಯಾನ್ ಮಾಡಿ ಮದುವೆ ಸಮಾರಂಭಗಳನ್ನು ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭವು ಹೇಗಿರಬೇಕು, ಎಷ್ಟು ಮಂದಿ ಮದುವೆಗೆ ಬರುತ್ತಿದ್ದಾರೆ ಎಂದು ತಿಳಿದು ಅದರ ಅನುಗುಣವಾಗಿ ವೆಡ್ಡಿಂಗ್​ ಪ್ಲಾನ್​ ಮಾಡುವವರು ಇದ್ದಾರೆ. ಇಂತಹ ಮದುವೆಯ ಪ್ಲಾನರ್ ಒಬ್ಬರು ವಧು ಮತ್ತು ವರನ ಪರವಾಗಿ ಮದುವೆಗೆ ಬರುವಂತಹ ಅತಿಥಿಗಳಿಗೆ ವಿಚಿತ್ರ ರೂಲ್ಸ್ ಇರುವ ಲಿಸ್ಟ್ ಅನ್ನು ಕಳಿಸಿದ್ದಾರೆ.

ಮದುವೆಗೆ ಬರುವ ಅತಿಥಿಗಳು ಏನು ಮಾಡಬೇಕು. ಏನು ಮಾಡಬಾರದು ಎಂಬ ಉದ್ದನೆಯ ಪಟ್ಟಿಯನ್ನು ಮಾಡಿರುವ ಮದುಮಕ್ಕಳು ಈ ಎಲ್ಲಾ ನಿಯಮಗಳನ್ನು ಪಾಲನೆ ಮಾಡುವುದಿದ್ದರೆ ಮಾತ್ರ ಮದುವೆಗೆ ಬನ್ನಿ ಎಂದು ಪ್ಲಾನರ್ ಮೂಲಕ ಮೇಲ್ ಕಳುಹಿಸಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ಈ ನಿಯಮ ಪಾಲನೆ ಮಾಡುವ ಮನಸ್ಸು ಇದ್ದವರು, ಮದುವೆಗೆ ಬರುವ ಬಗ್ಗೆ ಮೇಲ್ ಗೆ ರಿಪ್ಲೈ ಮಾಡಿ ಎಂದು ಹೇಳಿದ್ದಾರೆ.

Ad Widget / / Ad Widget

ಏನೇನಿವೆ ನೋಡಿ ಷರತ್ತುಗಳು :

  • ಮದುವೆಗೆ ಬರುವವರು 15 ರಿಂದ 30 ನಿಮಿಷ ಬೇಗ ಬರಬೇಕು.
  • ಬರುವಾಗ ಬಿಳಿ, ಕ್ರೀಮ್, ಬೂದು ಬಣ್ಣದ ಬಟ್ಟೆಗಳನ್ನು ಧರಿಸಬಾರದು.
  • ತಲೆಗೂದಲನ್ನು ಬಾಬ್ ಕಟ್ ತರಹ ಅಥವಾ ಪೋಣಿ ಕಟ್ಟಿದರೆ ಮಾತ್ರ ವಿವಾಹಕ್ಕೆ ಹಾಜರಾಗಬೇಕು.
  • ಮುಖಕ್ಕೆ ಮೇಕಪ್ ಹಚ್ಚಿಕೊಂಡು ಬರಬಾರದು.
  • ಮದುವೆಯ ಕ್ಷಣಗಳನ್ನು ವಿಡಿಯೋ ಮಾಡಬಾರದು
  • ನಾವು ಸೂಚಿಸುವವರೆಗೂ ಫೇಸ್ ಬುಕ್ ಓಪನ್ ಮಾಡಬಾರದು
  • ಮದುವೆ ಫೋಟೋ ಪೋಸ್ಟ್ ಮಾಡಬೇಕಾದರೆ ಹ್ಯಾಶ್ ಟ್ಯಾಗ್ ಉಪಯೋಗಿಸಬೇಕು
  • ವಧುವಿನ ಜತೆ ಯಾರೂ ಮಾತನಾಡಬಾರದು
  • ಮದುವೆಗೆ ಆಗಮಿಸುವವರು $75 (ಸುಮಾರು ಐದೂವರೆ ಸಾವಿರ ರೂ) ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಉಡುಗೊರೆಗಳನ್ನು ತರಬೇಕು

ಈ ರೀತಿಯ ವಿಚಿತ್ರವಾದ ರೂಲ್ಸ್ ಗಳನ್ನು ಒಳಗೊಂಡಿರುವ ಲಿಸ್ಟ್ ಒಂದನ್ನು ಮದುವೆಯ ಪ್ಲ್ಯಾನರ್ ಕಳುಹಿಸಿರುವುದು ಅತಿಥಿಗಳಲ್ಲಿ ತುಂಬಾ ಗೊಂದಲ ಉಂಟಾಗಿ, ಯಾರೋ ಒಬ್ಬರು ಈ ವಿಚಿತ್ರವಾದ ಲಿಸ್ಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದು, ಈ ರೂಲ್ಸ್ ಲಿಸ್ಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದನ್ನು ನೋಡಿದವರ ಪೈಕಿ ಹಲವರು ಬಿದ್ದು ಬಿದ್ದು ನಕ್ಕಿದ್ದಾರೆ. ಇನ್ನು ಕೆಲವರು ನಾವು ಇದಕ್ಕೆ ಬಹಿಷ್ಕಾರ ಹಾಕುತ್ತೇವೆ ಎಂದಿದ್ದಾರೆ. ಇದು ಎಲ್ಲಿ ನಡೆದಿರುವ ಮದುವೆ, ಯಾರದ್ದು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಇದು ಭಾರಿ ಸದ್ದು ಮಾಡುತ್ತಿದೆ.

Leave a Reply

error: Content is protected !!
Scroll to Top
%d bloggers like this: