ಮದುವೆಗೆ ಮೊದಲು ಆಡಿದ ಆಟ, ನಿಶ್ಚಿತಾರ್ಥದ ನಂತರ ಕೊಟ್ಟಿದೆ ಕಾಟ | ಮದುವೆ ಮುರಿದುಕೊಂಡ ವರ ಟಾಟಾ !!

ನಿಶ್ಚಿತಾರ್ಥವಾಗಿದ್ದ ಯುವತಿ ಇನ್ನು ದಾಂಪತ್ಯ ಜೀವನಕ್ಕೆ ಕಾಲಿಡಬೇಕೆನ್ನುವಾಗ, ಆಕೆಯ ಕನಸಿಗೆ ತನ್ನ ಮಾಜಿ ಪ್ರಿಯಕರನಿಂದಲೇ ತಡೆಯುಂಟಾಗಿದೆ. ಯುವತಿಯ ಮನೆಗೆ ನುಗ್ಗಿ, ಆಕೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿ, ಆಕೆಯ ಮದುವೆ ನಿಲ್ಲಲು ಕಾರಣನಾದ ಯುವಕನ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಇರ್ಫಾನ್ ಎಂಬಾತನು ಬಂಟ್ವಾಳ ತಾಲೂಕಿನ 21 ವರ್ಷದ ಯುವತಿಗೆ ಮೂರು ವರ್ಷದಿಂದ ಪರಿಚಯವಿದ್ದು, ಎಂಟು ತಿಂಗಳ ಹಿಂದಿನ ಪ್ರೀತಿಯ ವಿಚಾರವಾಗಿ ಆರೋಪಿ ಇರ್ಫಾನ್ ಯುವತಿಯ ಮನೆಗೆ ಬಂದು ಜಗಳವಾಡಿದ್ದಾನೆ.

ಬಳಿಕ ಯುವತಿಯ ತಂಗಿಯ ಮೊಬೈಲ್‌ಗೆ ಕರೆ ಮಾಡಿ ಆಕೆಯ ಹಳೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತೇನೆ, ಹಾಗೆಯೇ ನಿಶ್ಚಿಯವಾಗಿದ್ದ ಮದುವೆಯನ್ನು ನಿಲ್ಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

Ad Widget
Ad Widget

Ad Widget

Ad Widget

ನಂತರ ಮದುವೆಯಾಗುವ ಯುವಕನ ಮನೆಯವರಿಗೆ ಕರೆ ಮಾಡಿ ಬೆದರಿಕೆ ಹಾಕಿ ಮದುವೆಯನ್ನು ನಿಲ್ಲಿಸಿದ್ದಾನೆ ಎಂದು ಯುವತಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

2020ನೇ ಡಿಸೆಂಬರ್‌ನಿಂದಲೂ ನಿರಂತರ ಬೆದರಿಕೆ ಹಾಕಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!
Scroll to Top
%d bloggers like this: