ಒಂದೇ ದಿನಕ್ಕೆ 1 ಲಕ್ಷಕ್ಕೂ ಬುಕಿಂಗ್ ಆದ ಓಲಾ ಎಲೆಕ್ಟ್ರಿಕ್ ಸ್ಕೂಟರ್ | ಇನ್ಮುಂದೆ ಎಲೆಕ್ಟ್ರಿಕ್ ಗಾಡಿಗಳದೇ ದುನಿಯಾ !

ಗರಿಷ್ಠ ಮೈಲೇಜ್, ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ಉಪಯೋಗಗಳಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ಬಾರಿ ಕುತೂಹಲ ಕೆರಳಿಸಿದೆ. ಇದು ದೇಶದ ಎಲೆಕ್ಟ್ರಿಕ್ ವಾಹನದಲ್ಲಿ ಹೊಸ ಅಧ್ಯಾಯ ಬರೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಇದೀಗಲೇ ಬುಕಿಂಗ್ ಆರಂಭಗೊಂಡಿದ್ದು, ಒಂದೇ ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ಸ್ಕೂಟರ್ ಬುಕಿಂಗ್ ಆಗಿ, ದಾಖಲೆಯಾಗಿದೆ.

ಜುಲೈ 15ಕ್ಕೆ ಬುಕಿಂಗ್ ಆರಂಭವಾಗಿದ್ದು ಅತೀ ಕಡಿಮೆ ಸಮಯದಲ್ಲಿ ಲಕ್ಷಕ್ಕೂ ಮೀರಿ ಬುಕಿಂಗ್ ಆಗಿ ಎಲ್ಲರಿಗೂ ಕುತೂಹಲ ಮೂಡಿಸಿದೆ.ಗ್ರಾಹಕರು ಕೇವಲ ರೂ. 499 ಪಾವತಿಸಿ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು.ಇದೀಗ ಎಲ್ಲಾ ಗ್ರಾಹಕರ ಗಮನ ಸೆಳೆದ ಸ್ಕೂಟರ್,ದಾಖಲೆ ಸಂಖ್ಯೆಯಲ್ಲಿ ಸ್ಕೂಟರ್ ಕಾಯ್ದಿರಿಸಲು ಗ್ರಾಹಕರು ವೆಬ್‍ಸೈಟ್‍ಗೆ ಭೇಟಿ ನೀಡಿ ಬುಕಿಂಗ್ ಮಾಡಿ ಕೊಳ್ಳುತ್ತಿದ್ದಾರೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಲಾಂಚ್ ಆಗಲಿರುವ ಎಲೆಕ್ಟ್ರಿಕ್ ವಾಹನಕ್ಕೆ ಭಾರತದಾದ್ಯಂತ ಗ್ರಾಹಕರಿಂದ ಅದ್ಭುತ ಸ್ಪಂದನೆ ಬಂದಿರುವುದು ನನಗೆ ರೋಮಾಂಚನ ತಂದಿದ್ದು,ಈ ಅಭೂತಪೂರ್ವ ಬೇಡಿಕೆಯು, ಗ್ರಾಹಕರು ಎಲೆಕ್ಟ್ರಿಕ್ ವಾಹನಗಳಿಗೆ ವರ್ಗಾವಣೆಗೊಳ್ಳುತ್ತಿರುವ ಸ್ಪಷ್ಟ ಸೂಚಕವಾಗಿದೆ. ವಿಶ್ವವನ್ನು ಸುಸ್ಥಿರ ಸಂಚಾರಕ್ಕೆ ವರ್ಗಾಯಿಸುವ ನಮ್ಮ ದೂರದೃಷ್ಟಿಯಲ್ಲಿ ಇದು ದೊಡ್ಡ ಹೆಜ್ಜೆಯಾಗಿದೆ. ಓಲಾ ಸ್ಕೂಟರ್ ಕಾಯ್ದಿರಿಸಿ, ಇವಿ ಕ್ರಾಂತಿಯಲ್ಲಿ ಪಾಲ್ಗೊಂಡ ಎಲ್ಲ ಗ್ರಾಹಕರಿಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಇದು ಕೇವಲ ಆರಂಭ ಮಾತ್ರ ಎಂದು ಓಲಾ ಸಮೂಹದ ಅಧ್ಯಕ್ಷ ಮತ್ತು ಸಮೂಹ ಸಿಇಓ ಭವಿಷ್ ಅಗರ್ವಾಲ್ ಹೇಳಿದ್ದಾರೆ.

ಓಲಾ ಇದರ ವಿಶೇಷತೆಗಳು ಹಾಗೂ ಬೆಲೆಯನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಿದೆ.
ಭಾರತದ ತಮಿಳುನಾಡಿನ 500 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ವಿಶ್ವದ ಅತಿದೊಡ್ಡ, ಅತ್ಯಾಧುನಿಕ ಮತ್ತು ಸುಸ್ಥಿರ ದ್ವಿಚಕ್ರವಾಹನ ಫ್ಯಾಕ್ಟರಿ ಎನಿಸಿದ ಓಲಾ ಫ್ಯೂಚರ್ ಫ್ಯಾಕ್ಟರಿಯಲ್ಲಿ ಪ್ರತಿ 2 ನಿಮಿಷಕ್ಕೊಂಡು ಸ್ಕೂಟರ್ ನಿರ್ಮಾಣವಾಗುತ್ತಿದ್ದು,ಇದು ಗ್ರಾಹಕರು ಖರೀದಿಸಬಹುದಾದ ಅತ್ಯುತ್ತಮ ಸ್ಕೂಟರ್ ಎಂದೆನಿಸಿದೆ.ಓಲಾ ಸ್ಕೂಟರ್, ಓಲಾ ಎಲೆಕ್ಟ್ರಿಕ್‍ನ ಕ್ರಾಂತಿಕಾರಕ ಉತ್ಪನ್ನವಾಗಿದ್ದು, ಇಡೀ ವರ್ಗದಲ್ಲೇ ಅತ್ಯಧಿಕ ವೇಗ, ಅಭೂತಪೂರ್ವ ಶ್ರೇಣಿ, ದೊಡ್ಡ ಬೂಟ್ ಸ್ಥಳಾವಕಾಶ ಮತ್ತು ಅತ್ಯಾಧುನಿಕ ತಂತ್ರಜ್ಞಾನವನು ಇದು ಹೊಂದಿದೆ.

ಇದು ಅತೀ ದೊಡ್ಡ ಟ್ರಾನ್ಸ್‌ಫೋರ್ಟ್ ಪ್ಲಾಟ್‍ಫಾರಂ ಆಗಿದ್ದು, ವಿಶ್ವದ ಅತಿದೊಡ್ಡ ಸವಾರಿ ಸೌಲಭ್ಯ ಕಲ್ಪಿಸುವ ಕಂಪನಿಗಳಲ್ಲೊಂದಾಗಿದೆ. ಮೂರು ಖಂಡಗಳಲ್ಲಿ ನೂರು ಕೋಟಿಗೂ ಅಧಿಕ ಮಂದಿಗೆ ಬೇಡಿಕೆಗೆ ಅನುಸಾರವಾಗಿ ವಾಹನ ಪೂರೈಸುವ ಮೂಲಕ ನಗರ ಸಂಚಾರ ವ್ಯವಸ್ಥೆಯಲ್ಲಿ ಕ್ರಾಂತಿಯನ್ನು ಉಂಟುಮಾಡಿದೆ.

ಸ್ಕೂಟರ್ ವಿಶೇಷತೆ ತಿಳಿಸದಿದ್ದರೂ ಗ್ರಾಹಕರು ಬುಕಿಂಗ್ ಮಾಡುತ್ತಿರುವುದು ನಿಜಕ್ಕೂ ಕುತೂಹಲಕರವಾಗಿದೆ.ಈಗ ಓಲಾ ಎಲೆಕ್ನಿಕ್ ಸ್ಕೂಟರ್ ಅನ್ನು ಬುಕ್ಕಿಂಗ್ ಮಾಡಿರುವ ಗ್ರಾಹಕರು, ಸ್ಕೂಟರ್‌ಗಳ ವಿತರಣೆ ಪ್ರಾರಂಭವಾದಾಗ ಆದ್ಯತೆ ಪಡೆಯುತ್ತಾರೆ. ಓಲಾ ಎಲೆಕ್ನಿಕ್ ಸ್ಕೂಟರ್ 100-150 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, ಬದಲಾಯಿಸಬಹುದಾದ ಲಿಥಿಯಂ ಐಯಾನ್ ಬ್ಯಾಟರಿ, ಡಿಜಿಟಲ್ ಇಸ್ಪ್ಯುಮೆಂಟ್ ಕನ್ಸಲ್, ಕ್ರೌಡ್ ಕನೆಕ್ಟಿವಿಟಿ, ಅಲಾಯ್ ವೀಲ್ಸ್, ಟೆಲಿಸ್ಕೋಪಿಕ್ ಸಸ್ಪೆನ್ಸನ್ ಅಪ್ ಫ್ರೆಂಟ್ ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ. ಇನ್ನೊಂದು ತಿಂಗಳಲ್ಲಿ ಸ್ಕೂಟರ್ ವಿತರಣೆ ಆಗಲು ಸಾಧ್ಯತೆ ಇದೆ ಎನ್ನಲಾಗಿದೆ.

Leave A Reply

Your email address will not be published.