Day: July 18, 2021

ಪುಟ್ಟ ಮಗಳ ಕುತ್ತಿಗೆಗೆ ಬಾಯಿ ಹಾಕಿದ ಚಿರತೆ | ಅಮ್ಮನ ಬರಿಗೈನ ಹೋರಾಟಕ್ಕೆ ಸೋತು ಹೋದ ಚಿರತೆ, ಮಗಳು ಬಚಾವ್ !

ಎದುರಿಗಿರುವುದು ಯಾವುದೇ ದೊಡ್ಡ ಹಿಂಸಾ ಪ್ರಾಣಿಯಾದರೇನು, ತನ್ನ ಮಗುವಿಗೆ ಸಮಸ್ಯೆ ಎದುರಾದಾಗ ಹೆತ್ತವರು ಪ್ರಾಣವೆಂಬುದನ್ನು ಕಸದ ತರ ನಿರ್ಲಕ್ಷಿಸಿ ಮಕ್ಕಳನ್ನು ರಕ್ಷಿಸುತ್ತಾರೆ ಎಂಬುದಕ್ಕೆ ಇದೊಂದು ಫ್ರೆಶ್ ಉದಾಹರಣೆ. ತಾಯಿ ಮಗಳಿಬ್ಬರು ಕಾಡಿಗೆ ತೆರಳಿದ್ದ ವೇಳೆ ಚಿರತೆಯೊಂದು ಬಾಲಕಿಯ ಮೇಲೆ ಎರಗಿದೆ. ಬಾಲಕಿಯ ತಾಯಿ ಏಕಾಂಗಿಯಾಗಿ ಬರಿಕೈಯಲ್ಲಿ ಚಿರತೆಯೊಂದಿಗೆ ಹೋರಾಡಿ ಮಗಳನ್ನು ರಕ್ಷಿಸಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಚಂದ್ರಪುರ ನಗರದ ಬಳಿ ಇರುವ ಜುನೋನಾ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ತಾಯಿ ಅರ್ಚನಾ ತಮ್ಮ 5 ವರ್ಷದ …

ಪುಟ್ಟ ಮಗಳ ಕುತ್ತಿಗೆಗೆ ಬಾಯಿ ಹಾಕಿದ ಚಿರತೆ | ಅಮ್ಮನ ಬರಿಗೈನ ಹೋರಾಟಕ್ಕೆ ಸೋತು ಹೋದ ಚಿರತೆ, ಮಗಳು ಬಚಾವ್ ! Read More »

ಸವಣೂರು: ಅಂಬಾ ಬ್ರದರ್ಸ್ ವತಿಯಿಂದ ಹಡೀಲು ಬಿದ್ದ ಗದ್ದೆಯಲ್ಲಿ ಬೇಸಾಯಕ್ಕೆ ಚಾಲನೆ | ಗದ್ದೆಗಿಳಿಯೋಣ ಬಾ ಕಾರ್ಯಕ್ರಮದಲ್ಲಿ ಸಚಿವ ಎಸ್.ಅಂಗಾರ ಭಾಗಿ

ಸವಣೂರು : ಇಲ್ಲಿನ ಚಂದ್ರನಾಥ ಬಸದಿಯ ಸಮೀಪದ ಗದ್ದೆಯೊಂದು ಹಲವು ವರ್ಷಗಳಿಂದ ಬೇಸಾಯ ಮಾಡದೇ ಹಡೀಲು ಬಿದ್ದಿದ್ದು,ಸವಣೂರಿನ ಸಮಾನ ಮನಸ್ಕ ಯುವಕರ ತಂಡ ಅಂಬಾ ಬ್ರದರ್ಸ್ ಇದರ ವತಿಯಿಂದ ಈ ಗದ್ದೆಯಲ್ಲಿ ಈ ಬಾರಿ ಬೇಸಾಯ ನಡೆಯಲಿದೆ. ಅಂಬಾ ಬ್ರದರ್ಸ್ ತಂಡವು ಈಗಾಗಲೇ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು,ಇದೀಗ ಹಡೀಲು ಬಿದ್ದ ಗದ್ದೆಯಲ್ಲಿ ಭತ್ತದ ಬೇಸಾಯಕ್ಕೆ ಮುಂದಾಗಿದ್ದು ಈ ವಿನೂತನ ಕಾರ್ಯಕ್ರಮ ಅಂಬಾ ಗದ್ದೆಗಿಳಿಯೋಣ ಬಾ ಕಾರ್ಯಕ್ರಮಕ್ಕೆ ರವಿವಾರ ಸವಣೂರು ಬಸದಿಯ ಆವರಣದ ಗದ್ದೆಯಲ್ಲಿ ಗದ್ದೆಯ ಮಾಲಕ ನ್ಯಾಯವಾದಿ …

ಸವಣೂರು: ಅಂಬಾ ಬ್ರದರ್ಸ್ ವತಿಯಿಂದ ಹಡೀಲು ಬಿದ್ದ ಗದ್ದೆಯಲ್ಲಿ ಬೇಸಾಯಕ್ಕೆ ಚಾಲನೆ | ಗದ್ದೆಗಿಳಿಯೋಣ ಬಾ ಕಾರ್ಯಕ್ರಮದಲ್ಲಿ ಸಚಿವ ಎಸ್.ಅಂಗಾರ ಭಾಗಿ Read More »

ರಾಜ್ಯದಲ್ಲಿ ಮತ್ತಷ್ಟು ಅನ್ ಲಾಕ್ | ಹೊಸ ಮಾರ್ಗಸೂಚಿ ಬಿಡುಗಡೆ !

ಬೆಂಗಳೂರು: ರಾಜ್ಯದಲ್ಲಿ ಆನ್ ಲಾಕ್ 4.0 ಜಾರಿಗೆ ಮಾರ್ಗಸೂಚಿ ಆದೇಶ ಹೊರಬಂದಿದ್ದು ನಾಳೆಯಿಂದಲೇ ಹೊಸ ಆನ್ ಲಾಕ್ ರೂಲ್ ಜಾರಿಗೆ ಬರಲಿದೆ. ಅಧಿಕೃತ ನಿವಾಸದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯಾದ್ಯಂತ ನೈಟ್ ಕರ್ಪ್ಯೂ ಅವಧಿಯಲ್ಲಿ ಒಂದು ಗಂಟೆ ಸಡಿಲಗೊಳಿಸಿ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ವರೆಗೆ ವಿಧಿಸಿ ಆದೇಶಿಸಿದ್ದಾರೆ. ಆದುದರಿಂದ ಜನರ ವ್ಯವಹಾರದ ಅವಧಿಯು ಒಂದು ಗಂಟೆ ನಾಳೆಯಿಂದ ಹೆಚ್ಚಾಗಲಿದೆ. ನಾಳೆಯಿಂದ ರಾಜ್ಯಾದ್ಯಂತ ಸಿನಿಮಾ ಥಿಯೇಟರ್ …

ರಾಜ್ಯದಲ್ಲಿ ಮತ್ತಷ್ಟು ಅನ್ ಲಾಕ್ | ಹೊಸ ಮಾರ್ಗಸೂಚಿ ಬಿಡುಗಡೆ ! Read More »

ಚಾರ್ಮಾಡಿ ಘಾಟಿಯಲ್ಲಿ ಪ್ರಯಾಣಿಕರ ನ್ಯೂಸೆನ್ಸ್ | ಅಪಾಯಕಾರಿ ಸ್ಥಳಗಳಲ್ಲಿ ಡ್ಯಾನ್ಸ್, ಕಾಲು ಜಾರಿದರೆ ಖಲಾಸ್ !!

ಚಾರ್ಮಾಡಿ ಘಾಟ್ ನ ರಸ್ತೆಯಲ್ಲಿ ಕೆಲ ಪ್ರವಾಸಿಗರು ಮಿತಿಮೀರಿದ ವರ್ತನೆಯಿಂದ ವಾಹನ ಸವಾರರಿಗೆ ತೊಂದರೆ ಮಾಡಿದ ಘಟನೆ ವರದಿಯಾಗಿದೆ. ಚಾರ್ಮಾಡಿ ಘಾಟ್ ರಸ್ತೆಯ ಜಲಪಾತಗಳ ಮುಂದೆ ವಾಹನಗಳನ್ನು ನಿಲ್ಲಿಸಿಕೊಂಡು, ಜೋರಾಗಿ ಹಾಡು ಹಾಕುತ್ತಾ ಕೆಲ ಯುವಕರು ನೃತ್ಯವಾಡುತ್ತಿದ್ದರು. ಮಳೆಯನ್ನು ಲೆಕ್ಕಿಸದೇ ರಸ್ತೆ ಮಧ್ಯೆ, ಅಂಗಿ ಬಿಚ್ಚಿ ಕೆಲವು ಯುವಕರು ಡ್ಯಾನ್ಸ್ ಮಾಡುತ್ತಿದ್ದರು. ಯುವಕರ ಈ ಹುಚ್ಚಾಟದಿಂದ ಇತರೆ ಪ್ರವಾಸಿಗರೂ ಕಿರಿಕಿರಿ ಅನುಭವಿಸುವಂತಾಯಿತು. ಬಂಡೆಯ ಮೇಲೆ ಹತ್ತಿ ಪ್ರವಾಸಿಗರು ಸೆಲ್ಫಿ ಕ್ಲಿಕ್ಕಿಸುವಲ್ಲಿ ನಿರತರಾಗಿದ್ದರು. ಇದು ಬಹಳ ಅಪಾಯಕಾರಿ ಸ್ಥಳಗಳಾಗಿದ್ದರೂ, …

ಚಾರ್ಮಾಡಿ ಘಾಟಿಯಲ್ಲಿ ಪ್ರಯಾಣಿಕರ ನ್ಯೂಸೆನ್ಸ್ | ಅಪಾಯಕಾರಿ ಸ್ಥಳಗಳಲ್ಲಿ ಡ್ಯಾನ್ಸ್, ಕಾಲು ಜಾರಿದರೆ ಖಲಾಸ್ !! Read More »

ಒಂದೇ ದಿನಕ್ಕೆ 1 ಲಕ್ಷಕ್ಕೂ ಬುಕಿಂಗ್ ಆದ ಓಲಾ ಎಲೆಕ್ಟ್ರಿಕ್ ಸ್ಕೂಟರ್ | ಇನ್ಮುಂದೆ ಎಲೆಕ್ಟ್ರಿಕ್ ಗಾಡಿಗಳದೇ ದುನಿಯಾ !

ಗರಿಷ್ಠ ಮೈಲೇಜ್, ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ಉಪಯೋಗಗಳಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ಬಾರಿ ಕುತೂಹಲ ಕೆರಳಿಸಿದೆ. ಇದು ದೇಶದ ಎಲೆಕ್ಟ್ರಿಕ್ ವಾಹನದಲ್ಲಿ ಹೊಸ ಅಧ್ಯಾಯ ಬರೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಇದೀಗಲೇ ಬುಕಿಂಗ್ ಆರಂಭಗೊಂಡಿದ್ದು, ಒಂದೇ ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ಸ್ಕೂಟರ್ ಬುಕಿಂಗ್ ಆಗಿ, ದಾಖಲೆಯಾಗಿದೆ. ಜುಲೈ 15ಕ್ಕೆ ಬುಕಿಂಗ್ ಆರಂಭವಾಗಿದ್ದು ಅತೀ ಕಡಿಮೆ ಸಮಯದಲ್ಲಿ ಲಕ್ಷಕ್ಕೂ ಮೀರಿ ಬುಕಿಂಗ್ ಆಗಿ ಎಲ್ಲರಿಗೂ ಕುತೂಹಲ ಮೂಡಿಸಿದೆ.ಗ್ರಾಹಕರು ಕೇವಲ ರೂ. 499 ಪಾವತಿಸಿ ಸ್ಕೂಟರ್ …

ಒಂದೇ ದಿನಕ್ಕೆ 1 ಲಕ್ಷಕ್ಕೂ ಬುಕಿಂಗ್ ಆದ ಓಲಾ ಎಲೆಕ್ಟ್ರಿಕ್ ಸ್ಕೂಟರ್ | ಇನ್ಮುಂದೆ ಎಲೆಕ್ಟ್ರಿಕ್ ಗಾಡಿಗಳದೇ ದುನಿಯಾ ! Read More »

ಮುಂಬೈನಲ್ಲಿ ಧಾರಾಕಾರ ಮಳೆ | ಕಳೆದ 8 ಗಂಟೆಗಳಿಂದ ನಿಲ್ಲದ ಮಳೆಗೆ ತೇಲುವ ವಾಹನಗಳು, ಪ್ರವಾಹ ಪರಿಸ್ಥಿತಿ ಸೃಷ್ಟಿ !

ಮುಂಬೈ: ಮಹಾರಾಷ್ಟ್ರದ ಮುಂಬೈ ಸುತ್ತಮುತ್ತ ನಿನ್ನೆ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ರಾತ್ರಿ ಶುರುವಾದ ಮಳೆಯ ಹನಿ ತುಂಡಾಗದಷ್ಟು ಬಿರುಸಿನ ವರ್ಷ ಇಂದು ಮುಂಜಾನೆ ತನಕವೂ ಎಡಬಿಡದೆ ಸುರಿದ ಭಾರೀ ಮಳೆಯಿಂದಾಗಿ (Heavy Rain) ರಸ್ತೆ, ತಗ್ಗುಪ್ರದೇಶಗಳೆಲ್ಲಾ ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮುಂಬೈನ ವಿಕ್ರೋಲಿ, ಚೆಂಬೂರ್ ಸೇರಿದಂತೆ ಕೆಲವೆಡೆ ಮಳೆಯಿಂದಾಗಿ ಸುಮಾರು 15 ಜನ ಪ್ರಾಣ ಕಳೆದುಕೊಂಡ ದುರಂತ ಘಟನೆಗಳು ವರದಿಯಾಗಿವೆ. ಮುಂಬೈನಲ್ಲಿ ರಸ್ತೆಗಳು ಕೊಚ್ಚಿಹೋಗಿದ್ದಷ್ಟೇ ಅಲ್ಲದೇ ರೈಲ್ವೇ ಹಳಿಗಳ ಮೇಲೂ ನೀರು ನಿಂತ ಕಾರಣ ಸ್ಥಳೀಯ …

ಮುಂಬೈನಲ್ಲಿ ಧಾರಾಕಾರ ಮಳೆ | ಕಳೆದ 8 ಗಂಟೆಗಳಿಂದ ನಿಲ್ಲದ ಮಳೆಗೆ ತೇಲುವ ವಾಹನಗಳು, ಪ್ರವಾಹ ಪರಿಸ್ಥಿತಿ ಸೃಷ್ಟಿ ! Read More »

ಬೆಳ್ತಂಗಡಿ | ಆತ್ಮಹತ್ಯೆ ಮಾಡಿಕೊಂಡ ಪತ್ನಿಯ ಅಂತ್ಯಸಂಸ್ಕಾರಕ್ಕೆ ಹಾಕಿದ ಶಾಮಿಯಾನಕ್ಕೆ ನೇಣು ಜಗ್ಗಿಕೊಂಡ ಪತಿ !

ಪತ್ನಿ ಆತ್ಮಹತ್ಯೆ ಮಾಡಿಕೊಂಡು ಆಕೆಯ ಅಂತ್ಯಸಂಸ್ಕಾರಕ್ಕೆಂದು ಕಟ್ಟಿದ್ದ ಶಾಮಿಯಾನದ ಪೈಪಿಗೇ ನೇಣು ಹಾಕಿಕೊಂಡು ಪತಿ ಕೂಡ ಆತ್ಮಹತ್ಯೆಗೈದುಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಮುಡಿಪಿರೆ ಎಂಬಲ್ಲಿ ನಡೆದಿದೆ. ಮೊದಲಿಗೆ ಪತ್ನಿ ಚಂದ್ರಾವತಿ (49) ಅವರು ಮನೆಯ ಪಕ್ಕದ ಗೇರುಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮರುದಿನ ಅವರ ಪತಿ ಶಿವಪ್ಪ ಗೌಡ(56) ಕೂಡ ಇದೇ ಕೃತ್ಯವೆಸಗಿದ್ದಾರೆ. ಪತ್ನಿ ಚಂದ್ರಾವತಿ ಅವರು ಮನೆಯ ಜಾನುವಾರಿಗೆ ಹುಲ್ಲುತರಲೆಂದು ಮನೆಯಿಂದ ಮಧ್ಯಾಹ್ನ ಹೊರಹೋದವರು ಸಂಜೆಯವರೆಗೂ ಮರಳಿಬಾರದೇ ಇದ್ದುದರಿಂದ ಸಂದೇಹಗೊಂಡ ಮನೆಯವರು ಹುಡುಕಾಟ …

ಬೆಳ್ತಂಗಡಿ | ಆತ್ಮಹತ್ಯೆ ಮಾಡಿಕೊಂಡ ಪತ್ನಿಯ ಅಂತ್ಯಸಂಸ್ಕಾರಕ್ಕೆ ಹಾಕಿದ ಶಾಮಿಯಾನಕ್ಕೆ ನೇಣು ಜಗ್ಗಿಕೊಂಡ ಪತಿ ! Read More »

ಮದುವೆಗೆ ಮೊದಲು ಆಡಿದ ಆಟ, ನಿಶ್ಚಿತಾರ್ಥದ ನಂತರ ಕೊಟ್ಟಿದೆ ಕಾಟ | ಮದುವೆ ಮುರಿದುಕೊಂಡ ವರ ಟಾಟಾ !!

ನಿಶ್ಚಿತಾರ್ಥವಾಗಿದ್ದ ಯುವತಿ ಇನ್ನು ದಾಂಪತ್ಯ ಜೀವನಕ್ಕೆ ಕಾಲಿಡಬೇಕೆನ್ನುವಾಗ, ಆಕೆಯ ಕನಸಿಗೆ ತನ್ನ ಮಾಜಿ ಪ್ರಿಯಕರನಿಂದಲೇ ತಡೆಯುಂಟಾಗಿದೆ. ಯುವತಿಯ ಮನೆಗೆ ನುಗ್ಗಿ, ಆಕೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿ, ಆಕೆಯ ಮದುವೆ ನಿಲ್ಲಲು ಕಾರಣನಾದ ಯುವಕನ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಇರ್ಫಾನ್ ಎಂಬಾತನು ಬಂಟ್ವಾಳ ತಾಲೂಕಿನ 21 ವರ್ಷದ ಯುವತಿಗೆ ಮೂರು ವರ್ಷದಿಂದ ಪರಿಚಯವಿದ್ದು, ಎಂಟು ತಿಂಗಳ ಹಿಂದಿನ ಪ್ರೀತಿಯ ವಿಚಾರವಾಗಿ ಆರೋಪಿ ಇರ್ಫಾನ್ ಯುವತಿಯ ಮನೆಗೆ ಬಂದು ಜಗಳವಾಡಿದ್ದಾನೆ. …

ಮದುವೆಗೆ ಮೊದಲು ಆಡಿದ ಆಟ, ನಿಶ್ಚಿತಾರ್ಥದ ನಂತರ ಕೊಟ್ಟಿದೆ ಕಾಟ | ಮದುವೆ ಮುರಿದುಕೊಂಡ ವರ ಟಾಟಾ !! Read More »

ಈ ವಿಸ್ಕಿ ಬಾಟಲ್ ನ ಬೆಲೆ ಬರೊಬ್ಬರಿ 1 ಕೋಟಿ ! ಕಿಕ್ ಏರಿಳಿಯುವ ದರದ ಈ ಬಾಟಲ್ ನಲ್ಲಿದೆ ವಿಶ್ವದ ಅತ್ಯಂತ ಹಳೆಯ ಕಮ್ಮಗಿನ ಬಿಸಿಬಿಸಿ ವಿಸ್ಕಿ !!

ಮನುಷ್ಯರಿಗೆ ಎಲ್ಲವೂ ಹೊಸದು ಬೇಕು. ಆಭರಣ, ಕಾರು, ಮನೆ ಎಲ್ಲವೂ ಹೊಚ್ಚ ಹೊಸದು ಆಗಿದ್ದರೇನೆ ಚಂದ. ಕೊನೆಗೆ ಮದುವೆಯಾಗಲು ಕೂಡಾ ಲೇಟೆಸ್ಟ್ ಮಾಡೆಲ್ ನ ( ಚಿಕ್ಕ ಪ್ರಾಯದ) ಹುಡುಗಿ ಹುಡುಕುವವರು ಇದ್ದಾರೆ. ಆದರೆ ಅದೊಂದು ಮಾತ್ರ ಹಳೆಯದು ಬೇಕು. ಅದು ಹಳೆಯದಾದಷ್ಟು ಚಂದ. ಮಾಗಿದಷ್ಟು ಮದ್ಯಕ್ಕೆ ಮಗದಷ್ಟು ಬೆಲೆ ಹೆಚ್ಚು. ಅಂತಹಾ ಅತ್ಯಂತ ಹಳೆಯ ವಿಸ್ಕಿ ಬಾಟಲಿ ಒಂದು ಮೊನ್ನೆ ಹರಾಜಿಗೆ ಬಂದಿತ್ತು. ಹಳೆಯ ಮದ್ಯಕ್ಕೆ ಏಜ್ಡ್ ಲಿಕ್ಕರ್ ಅಂತಲೂ ಕರೆಯುತ್ತಾರೆ. ಮರದಿಂದ ತಯಾರಿಸಿದ ದೊಡ್ಡ …

ಈ ವಿಸ್ಕಿ ಬಾಟಲ್ ನ ಬೆಲೆ ಬರೊಬ್ಬರಿ 1 ಕೋಟಿ ! ಕಿಕ್ ಏರಿಳಿಯುವ ದರದ ಈ ಬಾಟಲ್ ನಲ್ಲಿದೆ ವಿಶ್ವದ ಅತ್ಯಂತ ಹಳೆಯ ಕಮ್ಮಗಿನ ಬಿಸಿಬಿಸಿ ವಿಸ್ಕಿ !! Read More »

ಬಿಜೆಪಿ ವತಿಯಿಂದ ನಾರಾವಿ ಹಾಗೂ ಪಡಂಗಡಿ ಮಹಾಶಕ್ತಿ ಕೇಂದ್ರದ ಪಂಚಾಯತ್ ಸದಸ್ಯರ ಅಭ್ಯಾಸ ವರ್ಗ ಉದ್ಘಾಟನೆ

ಭಾರತೀಯ ಜನತಾ ಪಾರ್ಟಿ,ಬೆಳ್ತಂಗಡಿ ಮಂಡಲದ ವತಿಯಿಂದ ಆಯೋಜಿಸಲಾಗಿರುವ ನಾರಾವಿ ಹಾಗೂ ಪಡಂಗಡಿ ಮಹಾಶಕ್ತಿ ಕೇಂದ್ರ ಮಟ್ಟದ ಪಂಚಾಯತ್ ಸದಸ್ಯರ ಅಭ್ಯಾಸ ವರ್ಗವನ್ನು ಅಳದಂಗಡಿ ಸ್ವರಾಜ್ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜ ರವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸುದರ್ಶನ್ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀ ಜಯಂತ್ ಕೋಟ್ಯಾನ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ರಾವ್ ಧರ್ಮಸ್ಥಳ ಮತ್ತು ಗಣೇಶ್ ನಾವೂರು ಮಹಾಶಕ್ತಿ ಕೇಂದ್ರದ …

ಬಿಜೆಪಿ ವತಿಯಿಂದ ನಾರಾವಿ ಹಾಗೂ ಪಡಂಗಡಿ ಮಹಾಶಕ್ತಿ ಕೇಂದ್ರದ ಪಂಚಾಯತ್ ಸದಸ್ಯರ ಅಭ್ಯಾಸ ವರ್ಗ ಉದ್ಘಾಟನೆ Read More »

error: Content is protected !!
Scroll to Top