ಉಜಿರೆಯಲ್ಲಿ ನ್ಯೂಟ್ರಲ್ ನಲ್ಲಿ ನಿಲ್ಲಿಸಿದ್ದ ಓಮ್ನಿ ನುಗ್ಗಿ ಎಬ್ಬಿಸಿತ್ತು ದಾಂಧಲೆ : ಸ್ವಲ್ಪದರಲ್ಲಿ ತಪ್ಪಿದ ಪ್ರಾಣಾಪಾಯ

ವ್ಯಕ್ತಿಯೊಬ್ಬರು ತರಕಾರಿ ಅಂಗಡಿಯೆದುರು ನಿಲ್ಲಿಸಿದ್ದ ಓಮ್ನಿ ಕಾರೊಂದು ಏಕಾಏಕಿ ಮುಂದಕ್ಕೆ ಚಲಿಸಿ ಅಂಗಡಿಗೆ ನುಗ್ಗಿದ ಘಟನೆ ಉಜಿರೆಯಲ್ಲಿ ನಡೆದಿದೆ.

ಉಜಿರೆಯ ಕಾಲೇಜು ರಸ್ತೆಯಲ್ಲಿ ಇರುವ ತರಕಾರಿ ಅಂಗಡಿ ಎದುರು ವ್ಯಕ್ತಿಯೊಬ್ಬರು ತನ್ನ ಓಮ್ನಿ ಕಾರನ್ನು ನಿಲ್ಲಿಸಿ ಬೇರೆಡೆಗೆ ತೆರಳಿದ್ದರು.ಕಾರು ನಿಲ್ಲಿಸಿದ್ದ ಜಾಗ ಸ್ವಲ್ಪ ಎತ್ತರ ಪ್ರದೇಶವಾಗಿದ್ದರಿಂದ ಹಠಾತ್ತನೇ ಕಾರು ಮುಂದಕ್ಕೆ ಚಲಿಸಿ ಅಂಗಡಿಗೆ ನುಗ್ಗಿದೆ. ಆರ್ ಅಡಿಗಳ ಕೆಳಗೆ ಬರುವ ಮೆಟ್ಟಲುಗಳನ್ನು ದಾಟಿ ಒಮ್ಮೆಲೆ ಬಂದು ತರಕಾರಿ ಅಂಗಡಿಗೆ ನುಗ್ಗಿದೆ. ಅಲ್ಲಿ ತರಕಾರಿ ಆಯ್ದುಕೊಳ್ಳುತ್ತಿರುವ ಮಹಿಳೆಯರಿಬ್ಬರು ಎಚ್ಚೆತ್ತುಕೊಂಡು ಪಕ್ಕಕ್ಕೆ ಸರಿದು ಜೀವ ಉಳಿಸಿಕೊಂಡರು.

ಕಾರು ಚಲಿಸುವುದನ್ನು ಗಮನಿಸಿದ ಅಂಗಡಿಯಲ್ಲಿದ್ದ ಕೆಲವರು ತಕ್ಷಣವೇ ಅಪಾಯವನ್ನರಿತು ತಪ್ಪಿಸಿಕೊಂಡಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Leave A Reply

Your email address will not be published.