ತಾ.ಪಂ, ಜಿ.ಪಂ.ಮೀಸಲಾತಿ ಕರಡು ಪಟ್ಟಿಗೆ 2500 ಆಕ್ಷೇಪಣೆಗಳು ಸಲ್ಲಿಕೆ | ಕಾನೂನು ರೀತಿಯಲ್ಲಿ ಪರಿಶೀಲನೆ, ಮುಂದಿನ ವಾರ ಅಂತಿಮ ಪಟ್ಟಿ ಪ್ರಕಟ ಸಾಧ್ಯತೆ

ರಾಜ್ಯದ ಜಿಲ್ಲಾ ಹಾಗೂ ತಾಲೂಕು
ಪಂಚಾಯಿತಿಗಳಿಗೆ ಮೀಸಲಾತಿ ಕರಡು ಪಟ್ಟಿ ಪ್ರಕಟಿಸಿದ್ದು, ಈ
ಕರಡು ಪಟ್ಡಿಗೆ ಸುಮಾರು 2500 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.
ರಾಜ್ಯ ಚುನಾವಣಾ ಆಯೋಗ ಇತ್ತೀಚೆಗೆ ರಾಜ್ಯದ 3285
ತಾಲೂಕು ಪಂಚಾಯಿತಿ ಹಾಗೂ 1191 ಜಿಲ್ಲಾ
ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ಕರಡು ಅಧಿಸೂಚನೆ
ಪ್ರಕಟಿಸಿತ್ತು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾ
ಯತ್ ರಾಜ್(ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ
ಸ್ಥಾನಗಳನ್ನು ಮೀಸಲಿಡುವ) ನಿಯಮ 2021ರ ಅನ್ವಯ
ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಪತ್ರದಲ್ಲಿ
ಪ್ರಕಟಗೊಂಡ ದಿನಾಂಕದಿಂದ ಏಳು ದಿನ ಕಾಲಾವಕಾಶ
ನೀಡಿತ್ತು.

ಸುಮಾರು 2500 ಆಕ್ಷೇಪಣೆಗಳು ಆಯೋಗಕ್ಕೆ
ಸಲ್ಲಿಕೆಯಾಗಿದ್ದು, ಪರಿಶೀಲನಾ ಕಾರ್ಯ ನಡೆಯುತ್ತಿದೆ.

ಏನೇನು ಆಕ್ಷೇಪಣೆ?: ತಮ್ಮ ಕ್ಷೇತ್ರದಲ್ಲಿ ಈ ಹಿಂದೆ
ಇದೇ ಮೀಸಲಾತಿ ಬಂದಿತ್ತು, ಇಂತಹ ಸಮುದಾಯದ
ಜನಸಂಖ್ಯೆಯೇ ಕ್ಷೇತ್ರದಲ್ಲಿ ಹೆಚ್ಚಿದೆ. ಹಾಗಾಗಿ ಅದೇ
ಸಮುದಾಯಕ್ಕೆ ಮೀಸಲಾತಿ ನಿಗದಿಪಡಿಸಬೇಕು ಎಂಬ
ಕೋರಿಕೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆಯೋಗಕ್ಕೆ ಬಂದಿವೆ
ಎಂದು ಮೂಲಗಳು ತಿಳಿಸಿವೆ.

ಮುಂದಿನ ವಾರ ಅಂತಿಮ ಪಟ್ಟಿ: ಸಲ್ಲಿಕೆಯಾದ ಎಲ್ಲ
ಆಕ್ಷೇಪಣೆಗಳನ್ನು ಆಯೋಗ ಕಾನೂನು ರೀತಿಯಲ್ಲಿ
ಪರಿಶೀಲಿಸಿ ಮೀಸಲಾತಿ ಅಂತಿಮ ಪಟ್ಟಿಯನ್ನು ಮುಂದಿನ
ವಾರ ಪ್ರಕಟಿಸುವ ಸಾಧ್ಯತೆಗಳಿವೆ.

ಮೀಸಲಾತಿ ಅಂತಿಮ
ಪಟ್ಟಿ ಪ್ರಕಟಗೊಂಡ 45 ದಿನಗಳ ತರುವಾಯ
ಪರಿಸ್ಥಿತಿಯನ್ನು ನೋಡಿಕೊಂಡು ಚುನಾವಣೆ ಘೋಷಿಸುವ
ಅಧಿಕಾರ ರಾಜ್ಯ ಚುನಾವಣಾ ಆಯೋಗಕ್ಕಿದೆ.

Leave A Reply

Your email address will not be published.