ಕುಡುಕರಿಗೇ ಕೊಟ್ಟ ಪೈಪೋಟಿ |  ಫುಲ್ ಬಾಟಲ್ ವಿಸ್ಕಿ ಬಾಟಲ್ ಓಪನ್ ಮಾಡಿ ಎತ್ತಿ ಕುಡಿದ ಕೋತಿಯ ವಿಡಿಯೋ ವೈರಲ್ !

ಜುಲೈ,17: ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆ ಎಂಬುದು ಜನಪದರ ಹಳೇ ಗಾದೆ. ಮಂಗನ ಕೈಗೆ ಮದ್ಯ ಸಿಕ್ಕಿದಂತೆ ಎಂಬುದು ಹೊಸ ರಿಯಾಲಿಟಿ ಸ್ಟೋರಿ !

ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯಲ್ಲಿ ಕೋತಿಯೊಂದು ಮದ್ಯದಂಗಡಿಗೆ ಹೋಗಿ, ಅಲ್ಲಿ ಗಲ್ಲಾದ ಮೇಲೆ ಕುಳಿತುಕೊಂಡು ಲಿಕ್ಕರ್ ಏರಿಸಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ.

ಮಾಂಡ್ಲಾ ಬಳಿಯ ಮದ್ಯದಂಗಡಿಗೆ ನುಗ್ಗಿದ ಕೋತಿ ಅಲ್ಲಿದ್ದ ಫುಲ್ ಬಾಟಲ್ ಒಂದನ್ನು ಎತ್ತಿಕೊಂಡು ಅದರ ಮುಚ್ಚಳ ತೆಗೆಯಲು ಪ್ರಯತ್ನಿಸಿದೆ. ಮೊದಲು ಸೀಲ್ ಬಾಯಿಂದ ಹರಿದು ಹಾಕಿದೆ. ನಂತರ ಒಂದಷ್ಟು ಕಾಲ ಬಾಟಲಿಯ ಮುಚ್ಚಳ ತೆಗೆಯಲು ಒದ್ದಾಡಿದೆ. ಬಾಟಲಿ ತಿರುಗಿಸಿ ಕ್ಯಾಪ್ ತೆಗೆಯಲು ತಿಣುಕಾಡಿದ ಕೋತಿ ಕೊನೆಗೂ ಮುಚ್ಚಲ ತೆರೆಯಲು ಸರ್ವ ಪ್ರಯತ್ನ ನಡೆಸಿದೆ.

Ad Widget


Ad Widget


Ad Widget

Ad Widget


Ad Widget

ಕೊನೆಗೂ ಸತತ ಪ್ರಯತ್ನದ ನಂತರ ಆ ಬಾಟಲಿ ಓಪನ್ ಆಗಿದೆ. ಆ ಬಾಟಲಿಯನ್ನು ಮೇಲೆತ್ತಿ ನಿಧಾನವಾಗಿ ಸಿಪ್ ಮೇಲೆ ಸಿಪ್ ಮಾಡಿ ವಿಸ್ಕಿ ಹೀರಿದ್ದಾನೆ ಕಪಿರಾಯ. ಆ ಕಪಿಯು ವಿಸ್ಕಿ ಹೀರುತ್ತಿರುವಾಗ ಅದಕ್ಕೆ ನೆಂಜಿಕೊಳ್ಳಲು ಅಲ್ಲಿಯವರು ಬಿಸ್ಕೆಟ್ ನೀಡಿದ್ದರು ಆದರೂ ಇದ್ಯಾವುದರ ಪರಿವೆಯೂ ಇಲ್ಲದೆ ಕೇವಲ ರುಚಿ ನೋಡುವುದರಲ್ಲಿ ಮಗ್ನ.

ವಿಸ್ಕಿ ಕುಡಿಯುವ ಮಂಗನ ಆಸೆ ಮತ್ತು ಬಾಟಲ್ ತೆರೆಯುವ ಪ್ರಯತ್ನ ಮತ್ತು ಸವಿ ನೋಡಿ ಬಾಯಿ ಚಪ್ಪರಿಸುವ ಪರಿಯನ್ನು ಅಲ್ಲಿದವರು ವಿಡಿಯೋ ಮಾಡಿಕೊಂಡಿದ್ದಾರೆ. ಕೊನೆಗೂ ಒಂದಷ್ಟು ಮಧ್ಯ ಕುಡಿದ ಮಂಗವು ಬಾಟಲ್ ಅನ್ನು  ಬಿಟ್ಟುಹೋಗದೆ, ತನ್ನೊಂದಿಗೆ ಒಯ್ದಿದೆ. ಹೆಂಡ ಕುಡಿದ ಕೋತಿ ತೂರಾಡುತ್ತಾ ಆ ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡೇ ಅಂಗಡಿಯಿಂದ ಹೊರಗೆ ಹೋಗಿದೆ.

ಅಷ್ಟಕ್ಕೂ ಕೋತಿಗೂ, ಆಲ್ಕೋಹಾಲ್​ಗೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ಯೋಚನೆ ಮಾಡುತ್ತಿದ್ದೀರಾ? ಇದಕ್ಕೂ ಮೊದಲು ಆ ಅಂಗಡಿಯ ಬಳಿಯಿದ್ದ ಮರದಲ್ಲೇ ಓಡಾಡಿಕೊಂಡಿತ್ತು. ಆ ಮದ್ಯದಂಗಡಿಯವರು ಗ್ರಾಹಕರು ಕುಡಿದ ಮದ್ಯದ ಬಾಟಲ್ ಗಳನ್ನು ಅಲ್ಲೇ ಪಕ್ಕದಲ್ಲಿ ಎಸೆಯುತ್ತಿದ್ದರು. ಆವಾಗ ಆಹಾರ ಹುಡುಕಿಕೊಂಡು ಅಲ್ಲಿಗೆ ಬರುತ್ತಿದ್ದ ಈ ಮಂಗವು ಹೊರಗೆ  ಬಿಸಾಡುತ್ತಿದ್ದ ಬಾಟಲಿಗಳಲ್ಲಿ ಅಳಿದುಳಿದ ಚೂರು ಆಲ್ಕೋಹಾಲ್ ಕುಡಿಯುತ್ತಿತ್ತಂತೆ. ಅದರ ರುಚಿ ಮಂಗದ ತಲೆಗೂ ಹತ್ತಿತ್ತು. ಆ ಒಗರು ತಿಳಿದಿದ್ದ ಕಾರಣಕ್ಕೆ ಈಗ ಇಲ್ಲಿಗ್ ಬಂದು ಒಂದು ಫುಲ್ ಬಾಟಲಿ ವಿಸ್ಕಿಗೆ ಆಸೆ ಪಟ್ಟಿದ್ದು.

ವಿಚಿತ್ರವೆಂದರೆ, ಕೋತಿಯೊಂದು ಹೀಗೆ ಮದ್ಯದ ಬಾಟಲಿಯನ್ನು ಓಪನ್ ಮಾಡಿ ಕುಡಿಯುತ್ತಿದ್ದರೂ ಅಲ್ಲಿದ್ದವರು ಯಾರೂ ಅದನ್ನು ತಡೆಯಲು ಪ್ರಯತ್ನಿಸಿಲ್ಲ. ಈ ರೀತಿ ಕುಡಿದರೆ ಅದರ ಜೀವಕ್ಕೆ ಏನಾದರೂ ಅಪಾಯವಾಗಬಹುದು ಎಂಬುದನ್ನು ಕೂಡ ಯೋಚಿಸದೆ ಅಲ್ಲಿದ್ದವರು ಮಜಾ ತೆಗೆದುಕೊಂಡಿದ್ದಾರೆ. ಬುದ್ದಿ ಇರುವ ಮನುಷ್ಯರೆ, ನೀರು ಸೋಡಾ ಹಾಕಿ ಡೈಲ್ಯೂಟ್ ಮಾಡಿ ಕುಡಿದರೆ, ಆ ಮಂಗ ಸುಕ್ಕ ಎತ್ತಿದೆ. ಅದು ಅಲ್ಲಿಂದ ಹೋದ ಮೇಲೆ ಏನಾಯಿತೋ ದೇವ್ರೆ ಬಲ್ಲ. ಒಟ್ಟಾರೆ ಅಭ್ಯಾಸ ಮಾಡ್ಕೊಂಡ್ರೆ ಕಷ್ಟ : ಅದು ಮನುಷ್ಯ ಇರ್ಲಿ, ಮಂಗ ಇರ್ಲಿ. ಒಮ್ಮೆ ರೂಢಿ ಆದ್ರೆ, ಆಮೇಲೆ ಆಡಿಸೋನು ಪರಮಾತ್ಮ !!
ಎಲ್ಲವೂ ಮದ್ಯದ ಮಹಾತ್ಮೆ!

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: