Day: July 17, 2021

ವಿಶ್ವಹಿಂದು ಪರಿಷತ್ ನ ನೂತನ ರಾಷ್ಟ್ರಾಧ್ಯಕ್ಷರಾಗಿ ಖ್ಯಾತ ಮೂಳೆ ಶಸ್ತ್ರಚಿಕಿತ್ಸಾ ತಜ್ಞ ರವೀಂದ್ರ ನಾರಾಯಿಣ್ ಸಿಂಗ್ ಆಯ್ಕೆ

ಖ್ಯಾತ ಮೂಳೆ ಶಸ್ತ್ರಚಿಕಿತ್ಸ ತಜ್ಞ ರವೀಂದ್ರ ನಾರಾಯಿಣ್ ಸಿಂಗ್ ಅವರು ಜು.17 ರಂದು ವಿಶ್ವಹಿಂದು ಪರಿಷತ್ ನ ನೂತನ ರಾಷ್ಟ್ರಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಿಹಾರದ ಮೂಲದವರಾದ ಸಿಂಗ್ ಅವರು ಪದ್ಮ ಶ್ರೀ ಪ್ರಶಸ್ತಿಗೂ ಭಾಜಾನರಾಗಿದ್ದು ಈ ವರೆಗೂ ಸಂಘಟನೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿತ್ತಿದ್ದರು. ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿನ ಅವರ ಸಾಧನೆಗೆ 2010ರಲ್ಲಿ ಪದ್ಮಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. “ಸಿಂಗ್ ಅವರನ್ನು ಸಂಘಟನೆಯ ರಾಷ್ಟ್ರಧ್ಯಕ್ಷರನ್ನಾಗಿ ಟ್ರಸ್ಟಿಗಳ ಮಂಡಳಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ವಿಹೆಚ್ ಪಿಯ ಜಂಟಿ ಪ್ರಧಾನ ಕಾಯದರ್ಶಿ ಸುರೇಂದ್ರ ಜೈನ್ …

ವಿಶ್ವಹಿಂದು ಪರಿಷತ್ ನ ನೂತನ ರಾಷ್ಟ್ರಾಧ್ಯಕ್ಷರಾಗಿ ಖ್ಯಾತ ಮೂಳೆ ಶಸ್ತ್ರಚಿಕಿತ್ಸಾ ತಜ್ಞ ರವೀಂದ್ರ ನಾರಾಯಿಣ್ ಸಿಂಗ್ ಆಯ್ಕೆ Read More »

ವಿಟ್ಲ : ತೋಡಿಗೆ ಬಿದ್ದು ವ್ಯಕ್ತಿ ಸಾವು

ವಿಟ್ಲ ಕಸಬಾ ಗ್ರಾಮದ ನಡುವಡ್ಕ ಎಂಬಲ್ಲಿ ನಾಯ್ತೊಟ್ಟು ತೋಡಿಗೆ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ವಿಟ್ಲ ಬಳಂತಿಮೊಗರು ನಿವಾಸಿ ವಸಂತ ನಾಯ್ಕ ಎಂದು ಗುರುತಿಸಲಾಗಿದೆ ಸ್ಥಳಕ್ಕೆ ಕಂದಾಯ ಇಲಾಖೆ,ಪೊಲೀಸ್ ಇಲಾಖೆಯವರು ಬೇಟಿ ನೀಡಿದ್ದಾರೆ.

ಕಂಬಳದ ಓಟದ ವೀರ, ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸಗೌಡರಿಗೆ ನಿಂದನೆ, ಕೊಲೆ ಬೆದರಿಕೆ ಹಾಕಿದ್ದ ಎನ್ನಲಾದ ಪ್ರಶಾಂತ್ ಬಂಗೇರ ಅರೆಸ್ಟ್

ಮೂಡಬಿದಿರೆ: ಕಂಬಳದ ದೊರೆ, ಕಂಬಳದ ಉಸೇನ್ ಬೋಲ್ಟ್ ಹೆಸರಿನಿಂದ ಜನಪ್ರಿಯವಾಗಿರುವ ಮತ್ತು ‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿ ವಿಜೇತ ಅಶ್ವತ್ ಪುರ ಶ್ರೀನಿವಾಸ್ ಗೌಡ ಅವರ ಮೊಬೈಲಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಲ್ಲದೆ, ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಶ್ರೀರಾಮ ಸೇನೆಯ ಕಾರ್ಯಕರ್ತ ಪ್ರಶಾಂತ್ ಬಂಗೇರ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈಗ ಬಂಧಿಯಾಗಿರುವ ಪ್ರಶಾಂತ್ ಬಂಗೇರ, ಶ್ರೀನಿವಾಸ ಗೌಡರಿಗೆ ಕಾರ್ ಸ್ಟ್ರೀಟ್ ಮಂಗಳೂರಿನಲ್ಲಿರುವ ರಿಯಲ್ ಎಸ್ಟೇಟ್ ಕಚೇರಿಗೆ ಆಹ್ವಾನಿಸಿದ್ದರು. ಅಲ್ಲಿಗೆ ಬಂದು ಕಂಬಳದ ಇತಿಹಾಸವನ್ನು …

ಕಂಬಳದ ಓಟದ ವೀರ, ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸಗೌಡರಿಗೆ ನಿಂದನೆ, ಕೊಲೆ ಬೆದರಿಕೆ ಹಾಕಿದ್ದ ಎನ್ನಲಾದ ಪ್ರಶಾಂತ್ ಬಂಗೇರ ಅರೆಸ್ಟ್ Read More »

ಬೆಳ್ಳಾರೆ ಮತ್ತು ಬಾಳಿಲ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಸಹಾಯ

ಬೆಳ್ಳಾರೆ ಮತ್ತು ಬಾಳಿಲ ವಿದ್ಯಾರ್ಥಿಗಳ ಪೋಷಕ ಮಿತ್ರರೇ,ಕೋವಿಡ್ ಸಂಕಷ್ಟದ ನಡುವೆ ಈ ವರ್ಷವೂ ಅನೇಕ ಸವಾಲುಗಳ ಮಧ್ಯೆ ಕರ್ನಾಟಕ ಸರಕಾರವು ಅತ್ಯಂತ ಸುರಕ್ಷಿತ ಮುಂಜಾಗ್ರತಾ ಕ್ರಮಗಳೊಂದಿಗೆ ಈ ಬಾರಿಯ S S L C ಪರೀಕ್ಷೆಯನ್ನು ಇದೇ ದಿನಾಂಕ 19 ಮತ್ತು 22 ರಂದು ನಡೆಸಲು ತೀರ್ಮಾನಿಸಿದೆ ಹಾಗೂ ಪರೀಕ್ಷೆ ಕೇಂದ್ರಕ್ಕೆ ತೆರಳಲು ವಿದ್ಯಾರ್ಥಿ ಗಳಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಒಂದು ವೇಳೆ ದೂರದಿಂದ ಕಾಲ್ನಡಿಗೆಯಲ್ಲಿ ಬಂದು ಆಕಸ್ಮಿಕವಾಗಿ ಬಸ್ ತಪ್ಪಿ ಹೋದ ಸಂದರ್ಭದಲ್ಲಿ …

ಬೆಳ್ಳಾರೆ ಮತ್ತು ಬಾಳಿಲ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಸಹಾಯ Read More »

‘ ಮಂಡ್ಯದ ಮಾದೇಗೌಡ’ ಎಂದೇ ಕರೆಸಿಕೊಳ್ಳುತ್ತಿದ್ದ ಮಾಜಿ ಕಾಂಗ್ರೆಸ್ ಸಂಸದ, ನೇರನುಡಿಯ ಹಿರಿಯಜ್ಜ ಇನ್ನಿಲ್ಲ !

ಮಂಡ್ಯ: ಮಾಜಿ ಸಂಸದ, ಕಾವೇರಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹೋರಾಟಗಾರ ಜಿ.ಮಾದೇಗೌಡ (92) ವಿಧಿವಶರಾಗಿದ್ದಾರೆ. ಕಳೆದ ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನೇರನುಡಿಯ, ಗಾಂಧಿ ತತ್ವದಲ್ಲಿ ನಂಬಿಕೆ ಇಟ್ಟಿದ್ದ, ಯಾವುದೇ ಕಾರಣಕ್ಕೂ ಭ್ರಷ್ಟರಾಗದೆ ಉಳಿದ ಹಳೆಯ ಕೊಂಡಿಯೊಂದು ಕಳಚಿ ಬಿದ್ದಿದೆ. ಒಂದು ಕಾಲದಲ್ಲಿ ಮಂಡ್ಯ ಅಂದರೆ ಅದು ಮಾದೇಗೌಡ ಅನ್ನುವಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಮತ್ತು ಪ್ರಭಾವವನ್ನು ಅವರು ಗಳಿಸಿದ್ದರು. 1980ರ …

‘ ಮಂಡ್ಯದ ಮಾದೇಗೌಡ’ ಎಂದೇ ಕರೆಸಿಕೊಳ್ಳುತ್ತಿದ್ದ ಮಾಜಿ ಕಾಂಗ್ರೆಸ್ ಸಂಸದ, ನೇರನುಡಿಯ ಹಿರಿಯಜ್ಜ ಇನ್ನಿಲ್ಲ ! Read More »

ಕೈಯಿಟ್ಟರೆ ಕೋಳಿ ಕಚ್ಚುತ್ತಿದೆ | ಬೆಂಗಳೂರಿನಲ್ಲಿ ಕೋಳಿ ಕೆ.ಜಿಗೆ 270 ರೂಪಾಯಿ, ದಕ್ಷಿಣ ಕನ್ನಡ ಉಡುಪಿಯಲ್ಲಿ ಕಿಲೋಗೆ 220 ರೂಪಾಯಿ !!

ಲಾಕ್ಡೌನ್ ವೇಳೆ ವ್ಯಾಪಾರ ಇಲ್ಲದೆ ಕುಸಿತ ಕಂಡಿದ್ದ ಕೋಳಿ ಮಾಂಸದ ಬೆಲೆ ಇದೀಗ ಅನ್ ಲಾಕ್ ಆಗಿರುವ ಹಿನ್ನೆಲೆಯಲ್ಲಿ ಹಾಗೆಯೇ ಬಕ್ರೀದ್ ಹಬ್ಬದಿಂದಾಗಿ ಜಬರ್ದಸ್ತ್ ಆಗಿ ಹೋಗುತ್ತಿದೆ.ಲಾಕ್ಡೌನ್ ಆಗಿರುವ ಕಾರಣದಿಂದ ಕೋಳಿ ಫಾರಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಿಗಳನ್ನು ಸಾಕುತ್ತಿರಲಿಲ್ಲ. ದೊಡ್ಡಮಟ್ಟದಲ್ಲಿ ಕೋಳಿ ಫಾರಂ ಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಹಾಗಾಗಿ ಈಗ ಪೌಲ್ಟ್ರಿಗಳಲ್ಲಿ ಪೂರೈಕೆಯ ಕೊರತೆ ಎದುರಾಗಿದೆ. ಇದೀಗ ಕೋಳಿ ಮಾಂಸಕ್ಕೆ ಬೇಡಿಕೆ ತುಂಬಾ ಹೆಚ್ಚಾಗಿದ್ದು, ಪೂರೈಕೆ ಕಡಿಮೆ ಆಗಿರುವುದರಿಂದ ಮಾಂಸದ ದರ ವಿಪರೀತ ಏರಿಕೆಯಾಗಿದೆ. ಪ್ರತಿ ಕೆಜಿ ಕೋಳಿ …

ಕೈಯಿಟ್ಟರೆ ಕೋಳಿ ಕಚ್ಚುತ್ತಿದೆ | ಬೆಂಗಳೂರಿನಲ್ಲಿ ಕೋಳಿ ಕೆ.ಜಿಗೆ 270 ರೂಪಾಯಿ, ದಕ್ಷಿಣ ಕನ್ನಡ ಉಡುಪಿಯಲ್ಲಿ ಕಿಲೋಗೆ 220 ರೂಪಾಯಿ !! Read More »

ತಾ.ಪಂ, ಜಿ.ಪಂ.ಮೀಸಲಾತಿ ಕರಡು ಪಟ್ಟಿಗೆ 2500 ಆಕ್ಷೇಪಣೆಗಳು ಸಲ್ಲಿಕೆ | ಕಾನೂನು ರೀತಿಯಲ್ಲಿ ಪರಿಶೀಲನೆ, ಮುಂದಿನ ವಾರ ಅಂತಿಮ ಪಟ್ಟಿ ಪ್ರಕಟ ಸಾಧ್ಯತೆ

ರಾಜ್ಯದ ಜಿಲ್ಲಾ ಹಾಗೂ ತಾಲೂಕುಪಂಚಾಯಿತಿಗಳಿಗೆ ಮೀಸಲಾತಿ ಕರಡು ಪಟ್ಟಿ ಪ್ರಕಟಿಸಿದ್ದು, ಈಕರಡು ಪಟ್ಡಿಗೆ ಸುಮಾರು 2500 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.ರಾಜ್ಯ ಚುನಾವಣಾ ಆಯೋಗ ಇತ್ತೀಚೆಗೆ ರಾಜ್ಯದ 3285ತಾಲೂಕು ಪಂಚಾಯಿತಿ ಹಾಗೂ 1191 ಜಿಲ್ಲಾಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ಕರಡು ಅಧಿಸೂಚನೆಪ್ರಕಟಿಸಿತ್ತು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿಸ್ಥಾನಗಳನ್ನು ಮೀಸಲಿಡುವ) ನಿಯಮ 2021ರ ಅನ್ವಯಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಪತ್ರದಲ್ಲಿಪ್ರಕಟಗೊಂಡ ದಿನಾಂಕದಿಂದ ಏಳು ದಿನ ಕಾಲಾವಕಾಶನೀಡಿತ್ತು. ಸುಮಾರು 2500 ಆಕ್ಷೇಪಣೆಗಳು ಆಯೋಗಕ್ಕೆಸಲ್ಲಿಕೆಯಾಗಿದ್ದು, ಪರಿಶೀಲನಾ ಕಾರ್ಯ …

ತಾ.ಪಂ, ಜಿ.ಪಂ.ಮೀಸಲಾತಿ ಕರಡು ಪಟ್ಟಿಗೆ 2500 ಆಕ್ಷೇಪಣೆಗಳು ಸಲ್ಲಿಕೆ | ಕಾನೂನು ರೀತಿಯಲ್ಲಿ ಪರಿಶೀಲನೆ, ಮುಂದಿನ ವಾರ ಅಂತಿಮ ಪಟ್ಟಿ ಪ್ರಕಟ ಸಾಧ್ಯತೆ Read More »

ಒಕ್ಕಲಿಗರ ಅಭಿವೃದ್ಧಿ ನಿಗಮ ರಚಿಸಿ ಸರಕಾರದ ಆದೇಶ

ಕರ್ನಾಟಕ ಸರಕಾರ ಒಕ್ಕಲಿಗರ ಅಭಿವದ್ಧಿ ನಿಗಮ ರಚಿಸಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿರುವ ಒಕ್ಕಲಿಗರಲ್ಲಿ ಕುಂಚಟಿಗ ಒಕ್ಕಲಿಗ, ದಾಸ ಒಕ್ಕಲಿಗ, ಮರಸು ಒಕ್ಕಲಿಗ, ನಾಮಧಾರಿ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಗಂಗಡಕಾರ ಒಕ್ಕಲಿಗ ಮತ್ತಿತರ ಹಲವಾರು ವರ್ಗಗಳಿದ್ದು ಈ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಮೀಸಲಾತಿ ವಿಭಾಗದಲ್ಲಿ ಮೀಸಲಾತಿ ನೀಡಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರಕಾರ ಒಕ್ಕಲಿಗರ ಅಭಿವೃದ್ದಿ ನಿಗಮವನ್ನು ರಚಿಸಿ ಆದೇಶ ಮಾಡಿರುವುದು ಒಕ್ಕಲಿಗ ಸಮುದಾಯದಲ್ಲಿ ಸಂಭ್ರಮ ಮನೆ ಮಾಡಿದೆ .

ಕಂಟ್ರಿ ಗಂಗಸರ ಕುಡಿದು 16 ಮಂದಿ ಬಲಿ

ನಕಲಿ ಮದ್ಯ ಸೇವಿಸಿ 16 ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದ ಚಂಪಾರನ್‌ನಲ್ಲಿ ನಡೆದಿದೆ. ಪಶ್ಚಿಮ ಚಂಪಾರನ್ ಜಿಲ್ಲೆಯ ಲೌರಿಯಾ ಬ್ಲಾಕ್‌ನ ಕೆಲವು ಹಳ್ಳಿಗಳಲ್ಲಿ ನಕಲಿ ಮದ್ಯ ಸೇವಿಸಿ ಕಳೆದೆರಡು ದಿನಗಳಲ್ಲಿ 16 ಮಂದಿ ಸಾವನ್ನಪ್ಪಿದ್ದು, ಇನ್ನೂ ಅನೇಕರು ಸಾವು-ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಪರಿಸ್ಥಿತಿಯನ್ನು ಬಿಹಾರ ಸರ್ಕಾರ ಮೇಲ್ವಿಚಾರಣೆ ಮಾಡುತ್ತಿದೆ. ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡ ಇದರ ಮೇಲೆ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯರು ಘಟನೆ ಬಗ್ಗೆ ನಿಜ …

ಕಂಟ್ರಿ ಗಂಗಸರ ಕುಡಿದು 16 ಮಂದಿ ಬಲಿ Read More »

ದರ್ಶನ್-ಇಂದ್ರಜಿತ್ ಜಟಾಪಟಿ | ಆಣೆ ಪ್ರಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬನ್ನಿ | ದರ್ಶನ್‌ಗೆ ಇಂದ್ರಜಿತ್ ಸವಾಲು

ನಟ ದರ್ಶನ್ ಹಾಗೂ ಇಂದ್ರಜಿತ್ ಲಂಕೇಶ್ ಅವರ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಅದು ಧರ್ಮಸ್ಥಳಕ್ಕೂ ತಲುಪಿದೆ. ನನಗೂ ಸಂಸ್ಕಾರ ಸಂಸ್ಕೃತಿ ಇದೆ. ದರ್ಶನ್‌ ವಿಚಲಿತರಾಗಿದ್ದಾರೆ. ನೀವು ನಿಮ್ಮ ತಂದೆಗೆ ಹುಟ್ಟಿದ್ದರೆ ಧರ್ಮಸ್ಥಳಕ್ಕೆ ಬನ್ನಿ. ಅಲ್ಲಿಯೇ ಆಣೆ ಪ್ರಮಾಣ ಮಾಡೋಣಾ ಎಂದು ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ನಟ ದರ್ಶನ್‌ ತೂಗುದೀಪ್‌ ಅವರಿಗೆ ಪ್ರತಿ ಸವಾಲು ಹಾಕಿದ್ದಾರೆ. ಬೆಂಗಳೂರಲ್ಲಿಂದು ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌, ನಟ ದರ್ಶನ್‌ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸ್ಕಾರ, ಸಂಸ್ಕೃತಿ, ಹಿನ್ನೆಲೆ ಭಾಷೆಯಲ್ಲಿ …

ದರ್ಶನ್-ಇಂದ್ರಜಿತ್ ಜಟಾಪಟಿ | ಆಣೆ ಪ್ರಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬನ್ನಿ | ದರ್ಶನ್‌ಗೆ ಇಂದ್ರಜಿತ್ ಸವಾಲು Read More »

error: Content is protected !!
Scroll to Top