ವಿನಂತಿ ಹರಿಕಾಂತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಪ್ರಶಸ್ತಿ

ಮಂಗಳೂರು: ವಿನಂತಿ ಹರಿಕಾಂತ ತನ್ನ 5 ನೇ ವಯಸ್ಸಿನಲ್ಲಿ ಪುಟ್ಟ ಬಾಲಕಿಯ ಅಭೂತಪೂರ್ವ ಸಾಧನೆ. ಈಕೆ ಯೋಗಾಸನದಲ್ಲಿ ಆಸಕ್ತಿ ಹೊಂದಿದ್ದು 100 ಕ್ಕಿಂತ ಹೆಚ್ಚಿನ ಯೋಗಾಸನ ಭಂಗಿಗಳನ್ನು ಸರಾಗವಾಗಿ ಮಾಡುವ ಇವಳು
ಉಷ್ಟ್ರಾಸನ ಭಂಗಿ” ಯಲ್ಲಿ ದೀರ್ಘ ಕಾಲದ ವರೆಗೆ ( 5 ನಿಮಿಷ, 13 ಸೆಕೆಂಡ್) ತಟಸ್ಥವಾಗಿ ಹಿಡಿದು ಅದ್ಭುತ ಸಾಧನೆ ಯನ್ನು ಮಾಡಿದ್ದಾಳೆ.

ಈಕೆಯ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನ ಗರಿಮೆಯ ಕಿರಿಟ ಮುಡಿಗೇರಿದೆ .
ಈಕೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ 20 ವರ್ಷ ಗಳಿಂದ ಮಂಗಳೂರಿನ ಕೆ.ಎಸ್.ಆರ್.ಪಿ 7 ನೇ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಈಶ್ವರ ಹರಿಕಾಂತ ಹಾಗೂ ಆರತಿ ಹರಿಕಾಂತ ದಂಪತಿಗಳ ಪುತ್ರಿ .


ಈಕೆ ಯೋಗಾಸನದಲ್ಲಿ ಮಾತ್ರ ಅಲ್ಲದೆ ನೃತ್ಯ, ಸಂಗೀತ, ಚಿತ್ರ ಕಲೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆಯಾಗಿರುತ್ತಾಳೆ

Leave A Reply

Your email address will not be published.