ಹರೀಶ್ ಬಂಗೇರ ಸೌದಿ ಜೈಲಿನಿಂದ ಬಿಡುಗಡೆ ಗೊಂಡು ಭಾರತ ಪ್ರಯಾಣಕ್ಕೆ ಕ್ಷಣಗಣನೆ

ವೃದ್ಧ ತಾಯಿ, ಪುಟ್ಟ ಮಗು ಹಾಗೂ ಪ್ರೀತಿಸುವ ಮಡದಿ ಇರುವ ಪುಟ್ಟ ಸಂಸಾರ. ಈ ಸಂಸಾರದ ಬಂಡಿ ಸಾಗಲು ದುಡಿಮೆ ಅಗತ್ಯ, ಈ ದುಡಿಮೆಗಾಗಿ ಪತಿ ವಿದೇಶಕ್ಕೆ ತೆರಳುತ್ತಾರೆ. ಆ ಬಳಿಕದ ಬದಲಾವಣೆ ಹೇಗಿದ್ದೀರಬಹುದು.?ವಿದೇಶಕ್ಕೆ ಮರಳಿದ ಪತಿಯು ಪೊಲೀಸರ ಕೈಯಲ್ಲಿ ಬಂಧಿಯಾಗಿ ಶಿಕ್ಷೆಗೆ ಒಳಗಾಗಿದ್ದಾರೆ ಎಂಬ ಸುದ್ದಿ ಇತ್ತ ಮಡತಿಗೆ ತಿಳಿಯುತ್ತದೆ. ತಕ್ಷಣವೇ ಆ ಆರೋಪದ ವಿರುದ್ಧ ಅಂದಿನಿಂದ ಇಂದಿನ ವರೆಗೆ ಸಿಕ್ಕ ಸಿಕ್ಕ ಜನಪ್ರತಿನಿಧಿಗಳಲ್ಲಿ ಬೇಡಿ,ಪೊಲೀಸರಿಗೆ ದೂರು ನೀಡಿ ತಾನು ನಡೆಸಿದ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ ಎಂದು ಆನಂದಭಾಷ್ಪ ಸುರಿಸುತ್ತಿರುವ ಪತ್ನಿ.

ಹೌದು,ಯಾರೋ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಮಾಡಿದ ತಪ್ಪಿಗೆ ತಾನು ಶಿಕ್ಷೆ ಅನುಭವಿಸುತ್ತಿದ್ದ ಕುಂದಾಪುರ ನಿವಾಸಿ ಹರೀಶ್ ಬಂಗೇರ ಸೌದಿಯ ಜೈಲಿನಲ್ಲಿ ಶಿಕ್ಷೆ ಅನುಭವಿಸಿ,ಸದ್ಯ ಸೌದಿ ಜೈಲಿನಿಂದ ಬಿಡುಗಡೆ ಗೊಂಡು ಅತೀ ಶೀಘ್ರದಲ್ಲಿ ತನ್ನ ತಾಯಿನಾಡಿಗೆ ಬರಲಿದ್ದಾರೆ ಎಂದು ಮಂಗಳೂರು ಅಷೋಷಿಯೇಷನ್ ಸೌದಿ ಅರೇಬಿಯಾ(MASA) ಇದರ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಅವರು ತಿಳಿಸಿದ್ದಾರೆ.

ಹರೀಶ್ ಅವರ ವಿಮಾನ ಪ್ರಯಾಣದ ವೆಚ್ಚವನ್ನು ಕೂಡಾ ಮಂಗಳೂರು ಅಷೋಷಿಯೇಷನ್ ನ ಪರವಾಗಿ ಜೈಲು ಅಧಿಕಾರಿಗಳಿಗೆ ನೀಡಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.ಹರಿಶ್ ಬಿಡುಗಡೆಗೊಂದು ಮರಳಿ ಊರಿಗೆ ಆಗಮಿಸುವ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದ ಭಾಂದವರ ಖುಷಿಗೆ ಪಾರವೇ ಇಲ್ಲ. ಇವರ ಬಿಡುಗಡೆಯ ಎಲ್ಲಾ ಧಾಖಲೆ ಪತ್ರ ಪೂರ್ಣವಾಗಿದ್ದು ಅವರು ಭಾರತ ಪ್ರಯಾಣದ ಕೊನೆಯ ಹಂತದಲ್ಲಿ ಇದ್ದಾರೆ ಎಂದು ತಿಳಿದು ಬಂದಿದ್ದು,ಅದಕ್ಕೆ ಸಹಕರಿಸಿದ, ಭಾರತ ವಿದೇಶಾಂಗ (Indian embassy), IOF ( Indian overseas forum ) ಸಂಸ್ಥೆ , ಮನಿಕಂಠನ್, ಮಹಮ್ಮದ್ ಶರೀಫ್ ದಮ್ಮಾಮ್ ,ಪ್ರಸನ್ನ ಭಟ್ ರಿಯಾದ್ , ಪ್ರಕಾಶ್ ಪೂಜಾರಿ ರಿಯಾದ್ , ಕಮಾಲಾಕ್ಷ ಅಡ್ಯಾರ್ ಅಲ್ , ಕೋಬರ್ ,ಜೋಯಿಸನ್ ಅಲ್ ಅಸಾ, ಹಾಗೂ ಅವರ ಬಿಡುಗಡೆಗೆ ಪ್ರಾರ್ಥಿಸಿದ ಮತ್ತು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಬಂದು ಮಿತ್ರರಿಗೂ ಈ ಶುಭ ಸಂದೇಶದ ಮೂಲಕ ಅಭಿನಂದನೆಗಳು/ ಧನ್ಯವಾದಗಳು ಈ ಕೇಸಿಗೆ ಸಂಬಂದ ಪಟ್ಟ ಇಬ್ಬರು ಆರೋಪಿಗಳನ್ನು ಈಗಾಗಲೆ ಉಡುಪಿ ಪೊಲೀಸರು ಬಂಧಿಸಿದ್ದು ಜಾಮಿನು ಮುಖಾಂತರ ಬಿಡುಗಡೆ ಗೊಂಡಿದ್ದಾರೆ.
ಅದೇನೇ ಇರಲಿ,ಮನೆಯ ಆಧಾರಸ್ಥಂಭ ಕಳಚಿ ಬಿದ್ದಂತಾಗಿ, ಪುಟ್ಟ ಮಗುವಿನ ಭವಿಷ್ಯಕ್ಕೆ ದಾರಿ ತೋರಿಸಬೇಕಾದ ಪತಿಯೇ ಮನೆಯಲ್ಲಿ ಇಲ್ಲವೆಂದು ಕೊರಗಿದ ಆ ಜೀವಕ್ಕೆ ಈಗ ಹೊಸ ಧೈರ್ಯ ಬಂದಿದೆ. ತನ್ನ ಪತಿಯು ಮರಳಿ ನಾಡಿಗೆ ಬರುವಲ್ಲಿ ಸಹಕರಿಸಿದ ಎಲ್ಲರಿಗೂ ಖುಷಿಯಿಂದ ಧನ್ಯವಾದಗಳನ್ನು ಸಲ್ಲಿಸುತ್ತಿದ್ದಾರೆ ಹರೀಶ್ ಬಂಗೇರ ಅವರ ಪತ್ನಿ.

Leave A Reply

Your email address will not be published.