ಮೊಬೈಲ್‌ನ ಬ್ಯಾಟರಿ ಸ್ಪೋಟ | ಬಾಲಕನ 3 ಬೆರಳು ತುಂಡು, ಮುಖಕ್ಕೆ ಗಾಯ

ಬಾಲಕನೊಬ್ಬ ಆಟವಾಡುತ್ತಿದ್ದ ವೇಳೆ ಮೊಬೈಲ್‌ನ ಹಳೆಯ ಬ್ಯಾಟರಿ ಸ್ಫೋಟಗೊಂಡು 10 ವರ್ಷದ ಬಾಲಕನ 3 ಬೆರಳು ತುಂಡರಿಸಿದ್ದು, ಮುಖಕ್ಕೂ ಗಾಯಗಳಾಗಿವೆ.

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಕಾರ್ತಿಕ್ ಕಲಾದಗಿ ಗಾಯಗೊಂಡ ಬಾಲಕ. ಮನೆಯ ಪಕ್ಕದಲ್ಲಿ ಎಸೆದಿದ್ದ ಹಾಳಾದ ಮೊಬೈಲ್ ಬ್ಯಾಟರಿ ಹಿಡಿದು ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಬಾಲಕ ಕಾರ್ತಿಕನಿಗೆ ಸವಣೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Leave A Reply

Your email address will not be published.