ಮದುವೆಯಾದ 2 ತಿಂಗಳಲ್ಲೇ ಗಂಡನ ಮೊಬೈಲ್ ಗೆ ಬಂತು ಪತ್ನಿಯ ಸೆಕ್ಸ್ ವಿಡಿಯೋ | ವಿದೇಶದಲ್ಲಿ ಕೂತು ಆತ ಮದುವೆ ಮುರಿದಿದ್ದ !!

ಇತ್ತೀಚೆಗಷ್ಟೇ ಬೇರೊಬ್ಬನೊಂದಿಗೆ ವಿವಾಹವಾಗಿದ್ದ ಮಾಜಿ ಪ್ರಿಯತಮೆಯ ನಗ್ನ ಹಾಗೂ ಅಶ್ಲೀಲ ಫೋಟೊಗಳನ್ನು ಪ್ರಿಯಕರ ಆಕೆಯ ಪತಿಗೆ ಕಳುಹಿಸುವ ಮೂಲಕ ಎರಡು ತಿಂಗಳ ಹಿಂದೆ ನಡೆದ ವಿವಾಹವೊಂದು ವಿಚ್ಛೇದನ ಹಂತ ತಲುಪಿದ್ದು, ಇದೀಗ ಯುವತಿಯೂ ಪ್ರಿಯಕರನ ಮೇಲೆ ಅತ್ಯಾಚಾರ ಎಸಗಿದ ಬಗ್ಗೆ ದೂರು ದಾಖಲಿಸಿರುವ ಆಶ್ಚರ್ಯಕರ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ.

ವಿಜೇಶ್ ಎಂಬಾತ ಈ ಸಂಸಾರದಲ್ಲಿ ಹುಳಿ ಹಿಂಡಿದಾತ. ಈತನ ಕಾರಣಕ್ಕಾಗಿ ಇದೀಗ ಕೇವಲ ಎರಡೇ ತಿಂಗಳಲ್ಲಿ ಮದುವೆ ಮುರಿದು ಬಿದ್ದಿದೆ. ಮದುವೆಯ ಐದು ವರ್ಷ ಹಿಂದೆ ನಡೆದಿದ್ದ ಆಟಕ್ಕೆ ಇದೀಗ ಡಿವೋರ್ಸ್ ಎಂಬ ಪ್ರತಿಫಲ ಯುವತಿಗೆ ದೊರಕಿದೆ.

ಘಟನೆಯ ವಿವರ :

Ad Widget


Ad Widget


Ad Widget

Ad Widget


Ad Widget

ವಿಜೇಶ್ ಹಾಗೂ ಯುವತಿ ಪರಸ್ಪರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ವಿಜೇಶ್ 2016 ರ ನವೆಂಬರ್ ನಲ್ಲಿ ಒಂದು ದಿನ ತನ್ನ ಪ್ರಿಯತಮೆಯನ್ನು ಚಹಾ ಕುಡಿಯಲು ಹೊಟೇಲ್ ಗೆ ಕರೆದಿದ್ದಾನೆ. ಪುತ್ತೂರಿನ ದರ್ಬೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಪ್ರಿಯಕರ ಕರೆದಿರುವುದಕ್ಕೆ ಬಂದಿದ್ದಾಳೆ.

ಆದರೆ ಪ್ರಿಯಕರ ವಿಜೇಶ್ ಕಾರ್ ನಲ್ಲಿ ಚಹಾ ಕುಡಿಯಲು ಹೊಟೇಲ್ ಗೆ ಕರೆದೊಯ್ಯದೆ, ಬಲವಂತವಾಗಿ ಸುರತ್ಕಲ್ ಬಳಿಯ ರೆಡ್ ರಾಕ್ ಲಾಡ್ಜ್ ಗೆ ನೇರವಾಗಿ ಕರೆತಂದಿದ್ದಾನೆ. ಅಲ್ಲಿ ಯುವತಿಗೆ ಇಷವಿಲ್ಲದಿದ್ದರೂ ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿದ್ದಾನೆ, ಎನ್ನುವುದು ಈಗ ಹುಡುಗಿ ಹೇಳುತ್ತಿರುವ ಕಥೆ. ಹುಡುಗಿಗೆ ಇಷ್ಟ ಇಲ್ಲದೇ ಹೋಗಿದ್ದರೆ ಆಕೆ ಆತನ ಜೊತೆಗೆ ಲಾಡ್ಜಿಗೆ ತೆರಳುತ್ತಿದ್ದಲಾ ?. ಇರಲಿ, ಆತ ಅತ್ಯಾಚಾರ ಮಾಡಿದ್ದಾನೆ ಇಲ್ಲವೋ ಗೊತ್ತಿಲ್ಲ. ಆದರೆ ಹುಡುಗಿಗೆ ಮಾತ್ರ ಅನ್ಯಾಯ ಆಗಿದೆ. ಆಕೆಯನ್ನು ಬಳಸಿಕೊಂಡದ್ದು ಮಾತ್ರವಲ್ಲದೆ ಆತ ಆಕೆಯ ನಗ್ನ ಫೋಟೋ ಹಾಗೂ ವೀಡಿಯೋ ಚಿತ್ರೀಕರಿಸಿ ಇಟ್ಟುಕೊಂಡಿದ್ದಾನೆ.

ಆದರೆ, ಇದೆಲ್ಲ ಆಗಿ ಈಗ ಐದಾರು ವರ್ಷವೇ ಕಳೆದಿದೆ. ಮೊನ್ನೆ, 2021ರ ಮೇ 3 ರಂದು ಬೇರೆ ಯುವಕನೊಂದಿಗೆ ಆಕೆಗೆ ವಿವಾಹವಾಗಿದೆ. ಅವರಿಬ್ಬರೂ ಯಾಕೆ ಮದುವೆಯಾಗಲಿಲ್ಲ ಎಂಬ ಬಗ್ಗೆ ಮಾಹಿತಿ ಇಲ್ಲ. ಹುಡುಗಿ ಒಪ್ಪಿಗೆ ನೀಡಿಲ್ಲವೇ ಅಥವಾ ಮನೆಯವರು ಸಮ್ಮತಿಸಿಲ್ಲ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಒಟ್ಟಾರೆ ಈ ಘಟನೆಯ ಮೂಲಕ ಹುಡುಗ ಮತ್ತು ಹುಡುಗಿಯ ಮಧ್ಯೆ ಮನಸ್ತಾಪ ಮೂಡಿದ್ದಂತೂ ಸತ್ಯ. ಇದರಿಂದ ವಿದೇಶದಲ್ಲಿ ಕೂತಿರುವ ವಿಜೇಶ್ ಕೋಪಗೊಂಡಿದ್ದ. ಬಹುಶಃ ಹುಡುಗಿ ಮದುವೆಯಾದ ಬಗ್ಗೆ ಆತನಿಗೆ ಅಸಮಾಧಾನವಿತ್ತು ಅನ್ನಿಸುತ್ತದೆ ಅಥವಾ ಇತ್ತೀಚೆಗೆ ಹುಡುಗಿ ಆತನನ್ನು ನಿರ್ಲಕ್ಷಿಸಿರಬಹುದು. ಆ ಕೋಪದ ಭರದಲ್ಲಿ, ಮಾಡುವೆ ಆಗಿ ಕೇವಲ 1 ತಿಂಗಳುಗಳ ಅಂತರದಲ್ಲಿ ಪ್ರಿಯಕರನಾದ ವಿಜೇಶ್, ಯುವತಿಯ ಪತಿಗೆ ಆಕೆಯೊಂದಿಗಿನ ಲೈಂಗಿಕ ಸಂಪರ್ಕದ ವೀಡಿಯೋ ಹಾಗೂ ಫೋಟೋವನ್ನು ರವಾನಿಸಿದ್ದಾನೆ. ಅಷ್ಟು ಸಾಕಿತ್ತು ಆಕೆಯ ಬದುಕು ಬರ್ಬಾದ್ ಆಗಲು !

ಯಾವ ಗಂಡ ತಾನೇ ತನ್ನ ಪತ್ನಿಯ ಈ ಹೀನ ಹಿನ್ನೆಲೆಯನ್ನು ತಾಲಿಕೊಳ್ಳಿಯಾನು ?! ಪತ್ನಿಯ ಸೆಕ್ಸ್ ವಿಚಾರ ಅರಿತ ನಂತರ ದಂಪತಿಗಳ ನಡುವೆ ಬಿರುಕು ಮೂಡಿದ್ದು, ಪತಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲು ಹತ್ತಿದ್ದಾನೆ. ಇತ್ತ ಅತಂತ್ರರಾದ ಪತ್ನಿ ಪ್ರಿಯಕರನ ಮೇಲೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಬಗ್ಗೆ ದೂರು ದಾಖಲಿಸಿದ್ದಾಳೆ.
ಸದ್ಯ ಆರೋಪಿ ವಿದೇಶದಲ್ಲಿರುವ ಮಾಹಿತಿ ಲಭ್ಯವಾಗಿದೆ.

ವಿದೇಶದಲ್ಲೇ ಕುಳಿತುಕೊಂಡು ವಿಜೇಶ್ ಈ ರೀತಿ ಮಾಡಿರುವ ಉದ್ದೇಶವಾದರೂ ಏನೆಂಬುದು ತಿಳಿಯದಾಗಿದೆ. ಒಂದೋ ಆತ ತನ್ನ ಪ್ರಿಯತಮೆ ಮರಳಿ ತನಗೆ ಸಿಗಬೇಕೆಂಬ ಉದ್ದೇಶದಿಂದ ಈ ಕೃತ್ಯ ಮಾಡಿರಬಹುದು ಅಥವಾ ಆಕೆಯ ಸುಂದರ ಸಂಸಾರವನ್ನು ಕಂಡು ಹೊಟ್ಟೆಕಿಚ್ಚಿನಿಂದ ದಾಂಪತ್ಯ ಒಡೆಯಲೆಂದೇ ಈ ರೀತಿ ಮಾಡಿರಬಹುದಾ ? ಈಗ ಎಲ್ಲವೂ ಊಹಾ ಪೋಹಗಳು. ಪೋಲೀಸರ ತನಿಖೆಯ ನಂತರ ಎಲ್ಲವೂ ಬಹಿರಂಗ ಆಗಲಿದೆ.

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: