ನನ್ನ ಅಪ್ಪನನ್ನು ಕೂಡಾ ನಾನು ನಂಬಲ್ಲ, ಅಪ್ಪನ ಜೊತೆಗೂ ನಾ ಒಬ್ಬಳೇ ಇರಲ್ಲ | ನಟಿ ಆರಾಧನಾ ಶರ್ಮಾ ಹಾಗೆಂದಿದ್ದು ಯಾಕೆ ಗೊತ್ತಾ ?!

ಮೀ ಟೂ ವಿಚಾರ ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಧ್ವನಿ ಮಾಡುತ್ತಿದೆ. ಅದೆಷ್ಟೋ ಕಲಾವಿದರು,ಖ್ಯಾತ ನಿರ್ದೇಶಕರು, ನಿರ್ಮಾಪಕರು ಹಾಗೂ ನಟರು ಸಾಮಾನ್ಯರಂತೆ ಕಂಡರೂ ಅವರಲ್ಲೂ ಅನೇಕ ಹೇಳಲಾರದ ನೋವುಗಳಿರುತ್ತದೆ. ಅದೆಷ್ಟೋ ನಟರು ಇಂದಿಗೂ ತಮ್ಮ ಅಳಲನ್ನು ಟಿವಿ ಮಾಧ್ಯಮ, ಸೋಶಿಯಲ್ ಮೀಡಿಯಾಗಳಲ್ಲಿ ಹೇಳಿಕೊಳುತ್ತಿದ್ದಾರೆ. ಈ ಅಭಿಯಾನ ಇನ್ನೂ ಕೊನೆಗೊಂಡಿಲ್ಲ. ಅದೇ ಸಾಲಿನಲ್ಲಿ ಇಂದು ಹಿಂದಿ ಕಿರುತೆರೆ ನಟಿ ಆರಾಧನಾ ಶರ್ಮಾ ರವರು ಹಿಂದೆ ನಡೆದ ಒಂದು ಕಹಿ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.

ನಟಿ ಆರಾಧನಾ ಶರ್ಮಾರವರು ತನಗಾದ ಆ ನೋವನ್ನು ಆಂಗ್ಲ ಮಾಧ್ಯಮವೊಂದರ ಜೊತೆ ಹೇಳುತ್ತಾ, ಆ ಘಟನೆಯನ್ನು ನಾನು ನನ್ನ ಜೀವನದಲ್ಲೇ ಮರೆಯುವುದಿಲ್ಲವೆಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದಿನ ಘಟನೆಯನ್ನು ತುಂಬಾ ನೋವಿನಿಂದ ಹೇಳಿದ್ದಾರೆ. ಆಗ ನಾನು ಪುಣೆಯಲ್ಲಿ ಓದುತ್ತಿದ್ದೆ. ಓದಿನ ಜೊತೆಗೆ ಮಾಡೆಲಿಂಗ್ ಕೂಡ ಮಾಡುತ್ತಿದ್ದೆ. ಈ ವೇಳೆ ನನ್ನ ಊರಾದ ರಾಂಚಿಯಲ್ಲಿ ವ್ಯಕ್ತಿಯೋರ್ವ ಯುವ ನಟ-ನಟಿಯರಿಗೆ ಅವಕಾಶ ಕೊಡಿಸುತ್ತಿದ್ದಾನೆ ಎನ್ನುವ ವಿಚಾರ ತಿಳಿಯಿತು. ಅವಕಾಶಕ್ಕಾಗಿ ನಾನು ರಾಂಚಿಗೆ ಹೋದೆ ಎಂದು ಅನುಭವವನ್ನು ತಿಳಿಸಲು ಪ್ರಾರಂಭಿಸುತ್ತಾರೆ.

ಕೆಲ ಪಾತ್ರಗಳಿಗೆ ನಾನು ಕಲಾವಿದರ ಆಯ್ಕೆ ಮಾಡುತ್ತಿದ್ದೇನೆ ಎಂದು ಆತ ಮೊದಲ ಭೇಟಿಯಲ್ಲಿ ಹೇಳಿದ. ಹಾಗೆಯೇ ನನ್ನನ್ನು ಒಂದು ರೂಮ್‌ಗೆ ಕರೆದ. ಸ್ಕ್ರಿಪ್ಟ್ ರೀಡಿಂಗ್ ಮಾಡಬೇಕು ಎಂದು ಹೇಳಿದ ಕಾರಣ ನಾನು ರೂಂಗೆ ತೆರಳಿದೆ. ಕೋಣೆಯಲ್ಲಿ ನಮ್ಮಿಬ್ಬರ ಹೊರತು ಬೇರಾರೂ ಇರಲಿಲ್ಲ. ಆಗ, ಆತ ನನ್ನನ್ನು ಮುಟ್ಟೋಕೆ ಆರಂಭಿಸಿದ, ಒಮ್ಮೆಲೆ ಮೈ ಜುಮ್ ಎಂದಿತು. ಏನಾಗುತ್ತಿದೆ ಎನ್ನುವುದು ತಕ್ಷಣಕ್ಕೆ ನನಗೆ ತಿಳಿಯಲಿಲ್ಲ. ನಂತರ ಆತನನ್ನು ದೂಡಿ ಅಲ್ಲಿಂದ ಓಡಿ ಬಂದೆ ಎನ್ನುತ್ತಾ, ಈವರೆಗೆ ನಾನು ಈ ಘಟನೆಯನ್ನು ಎಲ್ಲಿಯೂ ಹೇಳಿಕೊಂಡಿಲ್ಲ ಎಂದಿದ್ದಾರೆ ಅವರು.

ನಟಿಯ ಮೇಲೆ ಈ ಘಟನೆ ತುಂಬಾ ಪ್ರಭಾವ ಬೀರಿದೆಯಂತೆ. ಇದು ಅವರ ಜೀವನದಲ್ಲಿ ಅನೇಕ ರೀತಿಯ ಬದಲಾವಣೆ ತಂದಿದೆ ಎಂದೂ ಹೇಳಿಕೊಂಡಿದ್ದಾರೆ. ಹಾಗೆಯೇ ಪುರುಷರ ಮೇಲಿರುವ ನಂಬಿಕೆಯು ಹೊರಟು ಹೋಗಿದೆಯಂತೆ. ಅದೆಷ್ಟೇ ಪರಿಚಿತನಾದರೂ ಇವರಿಗೆ ಅವನೊಂದಿಗೆ ಒಬ್ಬರೇ ರೂಮ್ ನಲ್ಲಿ ಇರಲು ಭಯವಂತೆ. ಹಾಗೆಯೇ ತನ್ನ ತಂದೆಯೊಂದಿಗೂ ಒಬ್ಬರೇ ಇರಲು ಆಗುತ್ತಿಲ್ಲ. ಏಕೆಂದರೆ ಯಾರು ಮೇಲೂ ನಂಬಿಕೆಯೇ ಬರುತ್ತಿಲ್ಲ ಎಂದು ತಮ್ಮ ಅನುಭವ ವ್ಯಕ್ತ ಪಡಿಸಿದ್ದಾರೆ.

ಅವರು ಈ ವಿಷಯವನ್ನು ಮುಂಚೆಯೇ ಬಹಿರಂಗವಾಗಿ ಹೇಳಬೇಕೆಂದಿದ್ದರಂತೆ. ಆದರೆ , ಕುಟುಂಬದವರು ಇದಕ್ಕೆ ಅವಕಾಶ ನೀಡಲಿಲ್ಲವೆಂದು ತಿಳಿಸಿದ್ದಾರೆ.

Leave A Reply

Your email address will not be published.