ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ | ಪಿರಿಪಿರಿ ಮಳೆಯ ಮಧ್ಯೆ ಬೆಚ್ಚಗೆ ಕಂಬಳಿ ಹೊದ್ದು ಮಲಗಿದ್ದ ಭ್ರಷ್ಟರ ಚಳಿ ಬಿಡಿಸಿದ ಅಧಿಕಾರಿಗಳು

ಅಕ್ರಮ ಆಸ್ತಿ ಗಳಿಕೆ ಆರೋಪದಡಿ, ಬೆಳ್ಳಂಬೆಳಗ್ಗೆ 9 ಮಂದಿ ಭ್ರಷ್ಟ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಜಿಟಿಜಿಟಿ ಮಳೆಯ ನಡುವೆ ಕಂಬಳಿ ಹೊದ್ದು, ಬೆಚ್ಚಗೆ ಮಲಗಿದ್ದ ಭ್ರಷ್ಟರಿಗೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ.

ಈ ಕೆಳಗಿನ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆದಿದೆ :

1)ಜಿ. ಶ್ರೀಧರ್, ಇಇ ಜಿಲ್ಲಾ ನಗರಾಭಿವೃದ್ಧಿ ಕೋಶ ಡಿಸಿ ಕಚೇರಿ, ಮಂಗಳೂರು

2)ಕೃಷ್ಣ .ಎಸ್. ಹೆಬ್ಬರ್, ಇಇ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್, ಉಡುಪಿ

3)ಆರ್ ಪಿ ಕುಲಕರ್ಣಿ, ಸಿಇ ಕೆಆರ್ ಡಿಸಿಎಲ್

4)ಎಚ್ ಆರ್ ಕೃಷ್ಣಪ್ಪ, ಸಹಾಯಕ ನಿರ್ದೇಶಕ ಮಲ್ಲೂರು ನಗರ ಯೋಜನಾ ಪ್ರಾಧಿಕಾರ, ಕೋಲಾರ

5)ಸುರೇಶ್ ಮೊಕ್ರೆ, ಜೆಇ ಪಿಆರ್ ಇ ಬೀದರ್

6) ವೆಂಕಟೇಶ್ ಟಿ, ಡಿಸಿಎಫ್ ಸಾಮಾಜಿಕ ಅರಣ್ಯ ಮಂಡ್ಯ

7) ಸಿದ್ದರಾಮ ಮಲ್ಲಿಕಾರ್ಜುನ್ ಬಿರಾದಾರ, ಎಇಇ ಹೆಸ್ಕಾಮ್ ವಿಜಯಪುರ

8)ಕೃಷ್ಣಮೂರ್ತಿ, ಹಿರಿಯ ಮೋಟಾರು ವಾಹನ ನಿರೀಕ್ಷಕ, ಕೋರಮಂಗಲ

9)ಎ ಎನ್ ವಿಜಯ್ ಕುಮಾರ್, ಎಲೆಕ್ಟಿಕಲ್ ಇನ್ಸಪೆಕ್ಟರ್, ಬಳ್ಳಾರಿ

ಏಕಕಾಲಕ್ಕೆ 40 ಕಡೆ, ಒಟ್ಟು 300 ಅಧಿಕಾರಿಗಳಿಂದ ದಾಳಿ ನಡೆದಿದೆ. ಜಿಟಿಜಿಟಿ ಮಳೆಯ ನಡುವೆ ಬೆಚ್ಚಗೆ ಮಲಗಿದ್ದ ಭ್ರಷ್ಟರಿಗೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ. ನಿವಾಸ ಮತ್ತ ಕಚೇರಿ ಎರಡರ ಮೇಲೆಯೂ ದಾಳಿ ನಡೆದಿದ್ದು, ದಾಖಲೆಗಳನ್ನು ವಶಕ್ಕೆ ಪಡೆದು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿದ್ದ ವಿದೇಶಿ ಪ್ರಜೆಗಳ ಮನೆ ಮೇಲೆಯೂ ದಾಳಿ ನಡೆದಿದೆ. 6 ಎಸಿಪಿ, 20 ಇನ್ಸ್ ಪೆಕ್ಟರ್ ಮತ್ತು 100 ಮಂದಿ ಕಾನ್ಸ್‌ಟೇಬಲ್‌ಗಳಿಂದ ದಾಳಿ ನಡೆದಿದೆ.

ದಾಳಿ ವೇಳೆ ದಾಖಲಾತಿಗಳು ಹಾಗೂ ಪಾಸ್‌ಪೋರ್ಟ್‌ಗಳ ಪರಿಶೀಲನೆ ನಡೆಸಲಾಗಿದೆ. ವೀಸಾ ಅವಧಿ ಮುಕ್ತಾಯವಾಗಿದ್ರು ಅಕ್ರಮವಾಗಿ ಕೆಲ ವಿದೇಶಿಗರು ನೆಲೆಸಿರುವ ಮಾಹಿತಿ ಹಿನ್ನಲೆ ದಾಳಿ ಮಾಡಲಾಗಿದೆ.

ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿನ ಜಿಲ್ಲಾ ನಗರಾಭಿವೃದ್ಧಿ ಘಟಕದ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಿ. ಶ್ರೀಧರ್ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಮಂಗಳೂರಿನಲ್ಲಿ ಜಿ.ಶ್ರೀಧರ್ ಅವರಿಗೆ ಸೇರಿದ ಮನೆ ಹಾಗೂ ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿ ಘಟಕಕ್ಕೆ ದಾಳಿ ನಡೆಸಿದ ಅಧಿಕಾರಿಗಳು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಎಸಿಬಿ ಅಧಿಕಾರಿಗಳು ಶ್ರೀಧರ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಎಸಿಬಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.