ಬೆಳ್ತಂಗಡಿ, ಉಜಿರೆ | ಆತ್ಮಹತ್ಯೆಗೆ ಶರಣಾದ ಉಜಿರೆ ಪದವಿ ಕಾಲೇಜಿನ ವಿದ್ಯಾರ್ಥಿ

ಯುವಕನೋರ್ವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ತಾಲೂಕಿನ ಹಾರೋದ್ದು ಸಮೀಪ ನಡೆದಿದೆ.

ರತ್ನಾಕರ ಮತ್ತು ರತ್ನಾ ದಂಪತಿ ಪುತ್ರ ಕೊಕ್ರಾಡಿ ಗ್ರಾಮದ ಜಂತಿಗೋಳಿ ಬಳಿಯ ಹಾರೋದ್ದು ನಿವಾಸಿ ರಕ್ಷಿತ್ ಆತ್ಮಹತ್ಯೆ ಮಾಡಿಕೊಂಡ ಯುವಕ.

ಮೃತ ಯುವಕ ಉಜಿರೆ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಈತ‌ ತನ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಎಂದಿನಂತೆ ಮನೆಯವರು ಕೆಲಸದಲ್ಲಿ ತೊಡಗಿದ್ದ ವೇಳೆ, ರಕ್ಷಿತ್‌ ಮನೆಯ ಕೋಣೆಯೊಂದರಲ್ಲಿ ಮೊಬೈಲ್ ನಲ್ಲಿ ಆನ್‌ಲೈನ್ ತರಗತಿ ಆಲಿಸುತ್ತಿದ್ದರು. ಮಧ್ಯಾಹ್ನದ ವೇಳೆ ಊಟಕ್ಕೆಂದು ಯುವಕನ ತಾಯಿ ಕೋಣೆಯ ಬಾಗಿಲು ಬಡಿದು ಮಗನನ್ನು ಕರೆದಿದ್ದರು.

ಆದರೆ ಕರೆಗೆ ಮಗ ಓಗೊಡದೆ ಇದ್ದಿದನ್ನು ಗಮನಿಸಿದ ತಾಯಿ, ಗಾಬರಿಗೊಂಡು ಆತನ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆ ವೇಳೆಗೆ ಫೋನ್ ಸ್ವಿಚ್ ಆಫ್ ಆಗಿತ್ತು. ಕೂಡಲೇ ಕೋಣೆಯ ಕಿಟಕಿಯನ್ನು ತೆರೆದು ನೋಡಿದಾಗ ರಕ್ಷಿತ್ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ತಕ್ಷಣವೇ ಅವರನ್ನು ನಾರಾವಿ ಆಸ್ಪತ್ರೆಗೆ ಸಾಗಿಸಿ, ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾದರೂ, ಯುವಕ ಮೃತಪಟ್ಟಿರುವುದನ್ನು ವೈದ್ಯರು ಧೃಢೀಕರಿಸಿದ್ದಾರೆ.

ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕ ರಕ್ಷಿತ್ ನ ಆತ್ಮಹತ್ಯೆಗೆ ಕಾರಣಗಳು ಏನೇಂಬುದು ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ.

Leave A Reply

Your email address will not be published.