ಉಜಿರೆ | ವಾಹನ ತಪಾಸಣೆ ವೇಳೆ ಕಾರು – ಸ್ಕೂಟರ್ ಡಿಕ್ಕಿ

ವಾಹನ ತಪಾಸಣೆ ವೇಳೆ ಕಾರು ಮತ್ತು ಸ್ಕೂಟರ್ ಡಿಕ್ಕಿಯಾದ ಘಟನೆ ಉಜಿರೆಯ ಸಿದ್ಧವನ ಬಳಿ ಇಂದು ಮಧ್ಯಾಹ್ನ ನಡೆದಿದೆ.

ಪೊಲೀಸರು ತಪಾಸಣೆಗೆಂದು ವಾಹನ ನಿಲ್ಲಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ‌ ಎಂದು ತಿಳಿದುಬಂದಿದೆ.

ಪೊಲೀಸರು ತಡೆದು ನಿಲ್ಲಿಸಿದ ವಾಹನದ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಸ್ಕೂಟರ್, ಮಳೆಯ ಕಾರಣ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ಎದುರಿನಿಂದ ಬರುತ್ತಿದ್ದ ಕಾರ್‌ಗೆ ಡಿಕ್ಕಿಯಾಗಿದೆ.

ಇನ್ನು ಡಿಕ್ಕಿಯ ತೀವ್ರತೆಗೆ ಸ್ಕೂಟರ್ ಜಖಂ ಆಗಿದ್ದು, ಸವಾರ ಅಪಾಯದಿಂದ ಪಾರಾಗಿದ್ದಾರೆ.

Leave A Reply

Your email address will not be published.