ಮಹಿಳೆಗೆ ಪ್ಯಾಂಟ್ ಜಿಪ್ ಜಾರಿಸಿ ಮರ್ಮಾಂಗ ತೋರಿಸಿದ ಗ್ರೇಡ್ 2 ತಹಶೀಲ್ದಾರ್ | ಥರ್ಡ್ ಗ್ರೇಡ್ ಕೃತ್ಯಕ್ಕೆ ಹೊರಕ್ಕೆ ಓಡೋಡಿ ಬಂದ ಮಹಿಳೆ !!

ವಿಧವಾ ವೇತನ ಕೇಳಲು ಬಂದ ವಿಧವೆಗೆ ಗ್ರೇಡ್ 2 ತಹಶೀಲ್ದಾರನೋರ್ವ ತನ್ನ ಮರ್ಮಾಂಗವನ್ನು ತೋರಿಸಿ ಅಶ್ಲೀಲವಾಗಿ ನಡೆದುಕೊಂಡ ಗಂಭೀರ ಆರೋಪ ಕೇಳಿ ಬಂದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಹಶೀಲ್ದಾರ್ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ಡಿ.ಎಸ್. ಜಮಾದಾರ ಈ ಕೃತ್ಯ ಎಸಗಿದ್ದಾನೆ ಎಂದು ವಿಧವೆ ಮಹಿಳೆ ಹಾಗೂ ಆಕೆಯ ಪುತ್ರ ಆರೋಪ ಮಾಡಿದ್ದಾರೆ.

ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಮಹಿಳೆಯ ಪತಿ ಕೆಲ ದಿನಗಳ ಹಿಂದೆ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದರು. ಹೀಗಾಗಿ ಮಗ ತಾಯಿಗೆ ವಿಧವಾ ವೇತನ ಮಂಜೂರು ಮಾಡಿಸಲು ಕಳೆದ ಎರಡು ವಾರಗಳಿಂದ ಚಿಕ್ಕೋಡಿ ಗ್ರೇಡ್ 2 ತಹಶೀಲ್ದಾರ್ ಬಳಿ ಅಲೆದಾಡುತ್ತಿದ್ದರು. ಇದನ್ನು ಗಮನಿಸಿದ ಗ್ರೇಡ್ 2 ತಹಶೀಲ್ದಾರ್ ಜಮಾದಾರ , ‘ನೀನೇಕೆ ಕಚೇರಿಗೆ ಬರುತ್ತಿರುವೆ, ನಿನ್ನ ತಾಯಿಯನ್ನು ಕರೆದುಕೊಂಡು ಬಾ’ ಎಂದು ಸೂಚಿಸಿದ್ದಾನೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಹಾಗಾಗಿ, ಇಂದು ವಿಧವಾ ವೇತನಕ್ಕಾಗಿ ತನ್ನ ತಾಯಿ ಜೊತೆಗೆ ಬಂದ ಸಂದರ್ಭದಲ್ಲಿ ಮಗನನ್ನು ಹೊರಗೆ ನಿಲ್ಲಿಸಿ ತಾಯಿಯನ್ನು ಮಾತ್ರ ಒಳಗೆ ಕಳಿಸಲು ಹೇಳಿದ್ದಾನೆ. ಏಕಾಂಗಿಯಾಗಿ ವಿಧವಾ ವೇತನ ಕೇಳಲು ಬಂದ ವಿಧವೆ ಎದುರು ಪ್ಯಾಂಟ್ ಕಳಚಿ, ಕಾಮುಕ ತನ್ನ ವಿಕೃತಿಯನ್ನು ಪ್ರದರ್ಶನ ಮಾಡುವುದರ ಜೊತೆಗೆ ಅಶ್ಲೀಲವಾಗಿ ಮಾತನಾಡಿದ್ದಾನೆ.

ಕಾಮುಕ ತಹಶೀಲ್ದಾರನನ್ನು ನೋಡಿ ಮಹಿಳೆ ಚೀರುತ್ತಾ ಹೊರ ಬಂದಿದ್ದಾರೆ. ನಂತರ ಅಲ್ಲಿ ನಡೆದ ಘಟನೆಯನ್ನು ತಾಯಿ ನನಗೆ ವಿವರಿಸಿದರು ಎಂದು ಪುತ್ರ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ.

ಕೆಲ ಸಮಯ ಗಲಾಟೆ ನಡೆದ ನಂತರ, ಚಿಕ್ಕೋಡಿ ತಹಶೀಲ್ದಾರ್, ಪ್ರೀತಂ ಜೈನ್ ಎದುರು ಬಂದು ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.

ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಪತ್ರಕರ್ತರು ಈತ ಇಂತಹ ಘಟನೆಗಳನ್ನು ಪುನರಾವರ್ತನೆ ಮಾಡುತ್ತಿದ್ದಾನೆ. ಕಳೆದ ಬಾರಿಯೂ ಈತ ಸಿಬ್ಬಂದಿಗೆ ಮರ್ಮಾಂಗ ತೋರಿಸಿ ಇಂತಹ ಕೃತ್ಯ ಎಸಗಿದ್ದ. ಹೀಗಾಗಿ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: