LPG ಹಣ ನಿಮ್ಮ ಖಾತೆಗೆ ಬರುತ್ತಿದೆಯೇ ಇಲ್ಲವೇ ಎಂದು ಮನೆಯಲ್ಲೇ ಕೂತು ಹೀಗೆ ಚೆಕ್ ಮಾಡಿ

ಎಲ್‌ಪಿಜಿ ಸಬ್ಸಿಡಿ ನಿಮ್ಮ ಖಾತೆಗೆ ಬರುತ್ತದೆಯೋ ಇಲ್ಲವೋ? ಎನ್ನುವುದನ್ನು ತಿಳಿದುಕೊಳ್ಳಲು ಸುಲಭ ಉಪಾಯವಿದೆ. ಇದನ್ನು ಮನೆಯಲ್ಲಿ ಕುಳಿತುಕೊಂಡೆ ಸುಲಭವಾಗಿ ಪರಿಶೀಲಿಸಬಹುದು. ನಿಮಿಷಗಳಲ್ಲಿ ಈ ಕೆಲಸವನ್ನು ಸುಲಭವಾಗಿ ಮಾಡಬಹುದು.

ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ಸಬ್ಸಿಡಿಯ ಮಾಹಿತಿಯನ್ನು ಪಡೆಯಬಹುದು:

*ಮೊದಲನೆಯದಾಗಿ www.mylpg.in ವೆಬ್ ಸೈಟ್ ತೆರೆಯಿರಿ.
*ಈಗ ನೀವು ಸ್ಕ್ರೀನ್ ಬಲಭಾಗದಲ್ಲಿ ಅನಿಲ ಕಂಪನಿಗಳ ಗ್ಯಾಸ್ ಸಿಲಿಂಡರ್‌ಗಳ ಫೋಟೋ ಕಾಣಿಸುತ್ತದೆ.
*ಇಲ್ಲಿ ನಿಮ್ಮ ಸೇವಾ ಪೂರೈಕೆದಾರರ ಗ್ಯಾಸ್ ಸಿಲಿಂಡರ್‌ನ ಫೋಟೋ ಮೇಲೆ ಕ್ಲಿಕ್ ಮಾಡಿ.
*ಇದರ ನಂತರ ಸ್ಕ್ರೀನ್ ಮೇಲೆ ಹೊಸ ಪುಟ ತೆರೆಯುತ್ತದೆ. ಅದರಲ್ಲಿ ಗ್ಯಾಸ್ ಪೂರೈಕೆದಾರರ ಫೋಟೋ ಕಾಣಿಸುತ್ತದೆ.
*ಈಗ ಮೇಳೆ ಬಲಭಾಗದಲ್ಲಿರುವ ಸೈನ್-ಇನ್ ಮತ್ತು ನ್ಯೂ ಯುಸರ್ ಆಯ್ಕೆಯನ್ನು ಟ್ಯಾಪ್ ಮಾಡಿ.
*ನೀವು ಈಗಾಗಲೇ ನಿಮ್ಮ ID ಯನ್ನು ಇಲ್ಲಿ ರಚಿಸಿದ್ದರೆ, ನಂತರ ಸೈನ್ ಇನ್ ಮಾಡಿ. ನಿಮ್ಮ ಬಳಿ ಐಡಿ ಇಲ್ಲದಿದ್ದರೆ, ನ್ಯೂ ಯುಸರ್ ಮೇಲೆ ಟ್ಯಾಪ್ ಮಾಡುವ ಮೂಲಕ ವೆಬ್‌ಸೈಟ್‌ಗೆ ಲಾಗಿನ್ ಮಾಡಬಹುದು.
*ಈಗ ನಿಮ್ಮ ಮುಂದೆ ಪುಟ ತೆರೆಯುತ್ತದೆ, ಇದರಲ್ಲಿ ಬಲಭಾಗದಲ್ಲಿರುವ ವ್ಯೂ ಸಿಲಿಂಡರ್ ಬುಕಿಂಗ್ ಹಿಸ್ಟರಿ ಮೇಲೆ ಟ್ಯಾಪ್ ಮಾಡಿ.
*ನಿಮಗೆ ಯಾವ ಸಿಲಿಂಡರ್‌ಗೆ ಸಬ್ಸಿಡಿ ನೀಡಲಾಗಿದೆ ಮತ್ತು ಯಾವಾಗ ನೀಡಲಾಗಿದೆ ಎಂಬ ಮಾಹಿತಿಯನ್ನು ಇಲ್ಲಿ ಪಡೆಯಬಹುದು.
*ಇದರೊಂದಿಗೆ, ನೀವು ಗ್ಯಾಸ್ ಬುಕ್ ಮಾಡಿದ್ದರೆ ಮತ್ತು ನೀವು ಸಬ್ಸಿಡಿ ಹಣವನ್ನು ಸ್ವೀಕರಿಸದಿದ್ದರೆ ಫೀಡ್ ಬ್ಯಾಕ್ ಬಟನ್ ಕ್ಲಿಕ್ ಮಾಡಿ.
*ಈಗ ನೀವು ಸಬ್ಸಿಡಿ ಹಣವನ್ನು ಸ್ವೀಕರಿಸದ ದೂರನ್ನು ಸಲ್ಲಿಸಬಹುದು.
*ಇದಲ್ಲದೆ, ಈ ಟೋಲ್ ಫ್ರೀ ಸಂಖ್ಯೆ 18002333555 ಗೆ ಉಚಿತವಾಗಿ ಕರೆ ಮಾಡಿ ಕೂಡಾ ದೂರು ದಾಖಲಿಸಬಹುದು.

ನಿಮ್ಮ ಸಬ್ಸಿಡಿ ಬರುತ್ತಿಲ್ಲವಾದರೆ, ಯಾಕೆ ಬರುತ್ತಿಲ್ಲ? ಎನ್ನುವುದಕ್ಕೆ ಕಾರಣ ತಿಳಿದುಕೊಳ್ಳುವುದು ಬಹಳ ಮುಖ್ಯ. ಎಲ್ಪಿಜಿ ಸಬ್ಸಿಡಿ ನಿಲ್ಲಿಸಲು ದೊಡ್ಡ ಕಾರಣವೆಂದರೆ ಎಲ್ಪಿಜಿ ಆಧಾರ್ ಲಿಂಕ್ ಆಗದೆ ಇರುವುದು ಆಗಿರಬಹುದು. ಇನ್ನೊಂದು ಗಮನಿಸಬೇಕಾದ ಅಂಶ ಎಂದರೆ ವಾರ್ಷಿಕ ಆದಾಯ 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ ಕೂಡಾ ಸಬ್ಸಿಡಿ ಸಿಗುವುದಿಲ್ಲ.

Leave A Reply

Your email address will not be published.