‘ಎಚ್ಚರ’ ಕಿರುಚಿತ್ರದ ಪೋಸ್ಟರ್ ಬಿಡುಗಡೆ

ಕನಸು ಕ್ರಿಯೇಷನ್ಸ್ ಅರ್ಪಿಸುವ ದೀಕ್ಷಿತ್ ಪೂಜಾರಿ ಇವರ ನಿರ್ಮಾಣ ಹಾಗೂ ಸಹ ನಿರ್ದೇಶನದ, ಕೀರ್ತನ್ ಶೆಟ್ಟಿ ಸುಳ್ಯ ಇವರ ರಚನೆ ಹಾಗೂ ನಿರ್ದೇಶನದ, ಲೋಹಿತ್ ಪೂಜಾರಿ ಇವರ ಸಹ ನಿರ್ದೇಶನದ “ಎಚ್ಚರ ” ಎಂಬ ಕನ್ನಡ ಕಿರು ಚಿತ್ರದ ಪೋಸ್ಟರನ್ನು ಜೀ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿ ಖ್ಯಾತಿಯ ಸೂರಜ್ ಮಂಗಳೂರು ಅವರು ಜು.12 ರಂದು ಬಿಡುಗಡೆಗೊಳಿಸಿ ಪ್ರೋತ್ಸಾಹಿಸಿದರು.

ಈ ಕಿರು ಚಿತ್ರದ ಚಿತ್ರೀಕರಣ ಪೂರ್ಣ ಗೊಂಡಿದ್ದು, ಅತೀ ಶೀಘ್ರದಲ್ಲೆ ಬಿಡುಗಡೆಗೊಳ್ಳಲಿದೆ.

ಈ ಕಿರು ಚಿತ್ರದಲ್ಲಿ ಹಿರಿಯ ರಂಗ ಭೂಮಿ ಕಲಾವಿದ ಹಾಗೂ ಚಲನ ಚಿತ್ರ ನಟ ಶಿವಕುಮಾರ್ ರೈ ಹಾಗೂ ರಂಗ ಭೂಮಿ ಕಲಾವಿದ ಹಾಗೂ ಚಲನಚಿತ್ರ ನಟ ಅನಿಲ್ ರೈ ಪೆರಿಗೇರಿ ಹಾಗೂ ತುಳು, ಕನ್ನಡ, ಅರೆಭಾಷೆ ರಂಗಭೂಮಿ ಕಲಾವಿದೆ ಸುಶ್ಮಿತಾ ಶೈನಿ ಹಾಗೂ ಕರ್ನಾಟಕದಲ್ಲೇ ಮನೆ ಮಾತಾಗಿರುವ “ಧ್ವನಿ ಮಾಯೆ” ಕಲಾವಿದೆ ಸಾಯಿ ಶ್ರುತಿ ಹಾಗೂ ರಂಗ ಭೂಮಿ ಹಾಗೂ ಚಲನಚಿತ್ರ ನಟ ನಾಗೇಶ್ ಹಾಗೂ ವಿನೋದ್ ರೈ ಗುತ್ತು, ಶ್ರೇಯಸ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದು ಸುಮಾರು 25 ಇತರೆ ಕಲಾವಿದರು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Leave A Reply

Your email address will not be published.