ಗೋಸಂರಕ್ಷಣೆ, ಎರಡೇ ಮಕ್ಕಳ ಕಾಯ್ದೆ ಮತ್ತು ಲವ್ ಜಿಹಾದ್ ಗೆ ಕಠಿಣ ಕಾನೂನು | ಮುಸ್ಲಿಂ ಸಮುದಾಯಕ್ಕೆ ಏಟಿನ ಮೇಲೆ ಏಟು ಕೊಡಲಿದೆ ಅಸ್ಸಾಂ ಸರ್ಕಾರ !

ಗುವಾಹಟಿ: ದೇಶದೆಲ್ಲೆಡೆ ಲವ್ ಜಿಹಾದ್ ಪ್ರಕರಣಗಳ ಕುರಿತ ಚರ್ಚೆ ವ್ಯಾಪಕ ಸುದ್ದಿಯಲ್ಲಿರುವಾಗಲೇ ಅಸ್ಸಾಂ ಸರಕಾರ ಲವ್ ಜಿಹಾದ್ ಮಟ್ಟ ಹಾಕಲು ಶೀಘ್ರದಲ್ಲೇ ಕಾನೂನು ತರುತ್ತಿದೆ.

ನಮ್ಮ ಸರ್ಕಾರ ಬಂದು ಎರಡು ತಿಂಗಳಷ್ಟೇ ಆಗುತ್ತಿದೆ. ನಾವು ನಮ್ಮ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಮೊದಲು ಹಸು ಸಂರಕ್ಷಣಾ ಕಾನೂನನ್ನು ಜಾರಿ ತರುತ್ತೇವೆ. ಮುಂದಿನ ತಿಂಗಳು ಎರಡು ಮಕ್ಕಳು ನೀತಿಯನ್ನು ಅನುಷ್ಟಾನಗೊಳಿಸುತ್ತೇವೆ. ಬಳಿಕ ಲವ್ ಜಿಹಾದ್ ಕಾನೂನು ಜಾರಿ ತರುತ್ತೇವೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.

ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಗೆ ಮೋಸ ಮಾಡುವುದು ಮಾತ್ರ ಲವ್ ಜಿಹಾದ್ ಅಲ್ಲ. ಕಾನೂನು ರಚಿಸುವಾಗ ಸಮಾಜದ ಎಲ್ಲ ವರ್ಗವನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗುವುದು. ಕಾನೂನು ಧರ್ಮಾತೀತವಾಗಿದ್ದು, ಏಕ ರೂಪದಲ್ಲಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಕಾನೂನು ಮುಸಲ್ಮಾನರು ಸೇರಿದಂತೆ ಎಲ್ಲರಿಗೂ ಏಕರೂಪವಾಗಿರುತ್ತದೆ ಎಂದು ಹೇಳಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ಹಿಂದೂ ಯುವಕನೊಬ್ಬ ಹಿಂದೂ ಯುವತಿಗೆ ಪ್ರೀತಿ ಹೆಸರಲ್ಲಿ ತನ್ನ ಧರ್ಮ ಮತ್ತು ಇತರೆ ವೈಯಕ್ತಿಕ ಮಾಹಿತಿಗಳನ್ನು ಮರೆಮಾಚಿ ಮೋಸ ಮಾಡೋದು ಕೂಡ ತಪ್ಪು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಲವ್ ಜಿಹಾದ್ ಅನ್ನೋದು ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಯ ನಡುವಿನ ಸಂಬಂಧವನ್ನು ಗುರಿಯಾಗಿಸಿಕೊಂಡು ಬಲಪಂಥೀಯ ಗುಂಪುಗಳು ಬಳಸುವ ಪದವಾಗಿದ್ದು, ಇದು ಮಹಿಳೆಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡುವ ಹುನ್ನಾರವಾಗಿದ್ದು, ಅದನ್ನೇ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿ ಗೆದ್ದು ಬಂದಿತ್ತು ಅಲ್ಲಿನ ಬಿಜೆಪಿ ಸರ್ಕಾರ. ಈಗ ಅದನ್ನು ಸಾಧಿಸಲು ಹೊರಟಿದೆ. ಧರ್ಮಾಂಧರಿಗೆ ಇನ್ನು ಅಸ್ಸಾಂನಲ್ಲಿ ಬದುಕುವುದು ದುಸ್ತರವಾಗಲಿದೆ.

Leave A Reply

Your email address will not be published.