ಸವಿಯಲು ಸಿದ್ದಗೊಂಡಿದೆ ವಿಷಾಮೃತ

ಹಳ್ಳಿ ಜೀವನ ಅದೇನೋ ಸೊಗಸು. ಅಲ್ಲಿನ ಪ್ರಕೃತಿ, ವಾತಾವರಣ ಅದೇನೋ ಚಂದ. ಬಡತನವಿದ್ದರೂ ಪ್ರೀತಿಯಲ್ಲಿ ಶ್ರೀಮಂತರವರು. ಇಡೀ ದೇಶಕ್ಕೆ ಬೆನ್ನೆಲುಬು ಇದೇ ಹಳ್ಳಿ ರೈತರು. ಕಷ್ಟ ಪಟ್ಟು ಬೆವರು ಸುರಿಸಿ ದುಡಿದು, ಎಲ್ಲರೂ ಒಟ್ಟಾಗಿ ಕುಳಿತು, ಸವಿಯುವ ಊಟದ ರುಚಿ ಹಳ್ಳಿಸಿದ್ದಗೊಂಡಿದೆ.ತ್ತು. ಹಿರಿಯರನ್ನು ಗೌರವದಿಂದ ಕಾಣುವುದು, ತಂದೆ ತಾಯಿಯನ್ನು ಕೊನೆಯವರೆಗೂ ದೇವರಂತೆ ಪೂಜಿಸುವುದು, ಹೀಗೆ ಸಾಕಷ್ಟು ಇದೆ. ಹಳ್ಳಿ ಎಂದರೆ ಹಸಿರಿನಿಂದ ಕೂಡಿರುವ ಪ್ರೀತಿಯನ್ನು ಉಣಬಡಿಸುವ ಅಮೃತ ಎಂದೇ ಹೇಳಬಹುದು.ಇಂಥ ಅಮೃತವನ್ನು ಹಂಚಲು ಕಿರುಚಿತ್ರ ಒಂದು ಸಿದ್ದಗೊಂಡಿದೆ ಅದೇ ವಿಷಾಮೃತ.
ಇಲ್ಲಿ ಅಮೃತ ಅಷ್ಟೇ ಅಲ್ಲ ವಿಷಾನು ಇದೆ. ಆ ವಿಷ ಯಾವುದು? ಆ ವಿಷ ದೇಶದ ಉಜ್ವಲ ಭವಿಷ್ಯದ
ಮೇಲೆ ಹೇಗೆ ದುಷ್ಪರಿಣಾಮ ಬೀರುತಿದೆ ಎಂಬುದನ್ನು ತೋರಿಸಲು ಹೊರಟಿದೆ ಈ ಕಿರುಚಿತ್ರ.
ದುಡ್ಡು ಮಾಡುವ ನೆಪದಲ್ಲಿ ಎಲ್ಲವನ್ನೂ ಮರೆಯುತ್ತಿರುವ, ನಮ್ಮೀ ಪೇಟೆ ಜನಗಳ ಮಧ್ಯೆ, ಮಾನವೀಯತೆ, ಗೌರವ, ಪ್ರೀತಿ ದೊಡ್ಡದೆಂದು ಬದುಕುವ ಒಬ್ಬ ಹಳ್ಳಿ ವೈದ್ಯನ ಕಥೆಯಾಗಿದೆ. ಆತ ನೀಡಿದ ಔಷಧಿ ಹೇಗೆ ವಿಷವಾಗಿ ಪರಿವರ್ತನೆಗೊಂಡಿತು ಅನ್ನೋದೇ ಕಥೆಹಂದರ.
ಇದೇ ಬರುವ ಆದಿತ್ಯವಾರದಂದು ಆರ್.ಕೆ ಆರ್ಟ್ಸ್ ವಿಟ್ಲ ಇದರ ಬ್ಯಾನರ್ ನಲ್ಲಿ ರಾಜೇಶ್ ವಿಟ್ಲ ನಿರ್ದೇಶನದಲ್ಲಿ, ಹರೀಶ್ ಪುತ್ತೂರು ಇವರ ಛಾಯಾಗ್ರಹಣದಲ್ಲಿ ಮುೂಡಿಬರಲಿದೆ “ವಿಷಾಮೃತ ” ಎಂಬ ಕನ್ನಡ ಕಿರುಚಿತ್ರ.
ಈ ಕಿರುಚಿತ್ರದ ಕಥೆ ಶಿವರಾಮ್ ಅಳಿಕೆ , ಚಿತ್ರಕಥೆಯನ್ನು ಕಾರ್ತಿಕ್ ಕುಮಾರ್, ಸಂಭಾಷಣೆ ಹಾಗೂ ಸಾಹಿತ್ಯ ವನ್ನು ಅನಿಲ್ ವಡಗೇರಿ ಬರೆದಿದ್ದಾರೆ. ಈಗಾಗಲೇ ಈ ಕಿರುಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು,ಸಾವಿರಾರು ಜನರ ವೀಕ್ಷಣೆ ಕೂಡ ಪಡೆದು ಜನರಲ್ಲಿ ಹೊಸದೊಂದು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಹಿರಿಯ ಕಿರಿಯ ಕಲಾವಿದರ ಸಮಾಗಮ ಈ ಕಿರುಚಿತ್ರದಲ್ಲಿ ಇದ್ದು ತುಳು ಹಾಗೂ ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿದ ರಂಗಭೂಮಿ ಕಲಾವಿದ ಯದು ವಿಟ್ಲ ಈ ಕಿರುಚಿತ್ರದಲ್ಲಿ ಗೌರವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ಕಲಾವಿದರು ಹಾಗೂ ಯುವ ಕಲಾವಿದರು ಅಭಿನಯಿಸಿದ ವಿಷಾಮೃತ,ಇದೇ ಜುಲೈ 11,ಆದಿತ್ಯವಾರದಂದು, ನಮ್ಮ ಜನ, ನಮ್ಮ ಹೆಮ್ಮೆ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ. ಎಲ್ಲರೂ ನೋಡಿ. ನಿಮ್ಮಲ್ಲರ ಪ್ರೀತಿ, ಸಹಕಾರದ ನಿರೀಕ್ಷೆಯಲ್ಲಿ ವಿಷಾಮೃತ ಕನ್ನಡ ಕಿರುಚಿತ್ರ ತಂಡ.

                               ✍ ತನುಶ್ರೀ ಬೆಳ್ಳಾರೆ
Leave A Reply

Your email address will not be published.