ಮಹಿಳೆಯೊಂದಿಗೆ ಪರಾರಿಯಾದ ಯುವಕ | ರೊಚ್ಚಿಗೆದ್ದ ಮಹಿಳೆಯ ಕುಟುಂಬದ ಎಂಟು ಮಂದಿಯಿಂದ ಯುವಕನ ಸಹೋದರಿಯ ಅತ್ಯಾಚಾರ

ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.ಕಾನೂನು ಅದೆಷ್ಟೇ ಬಲಿಷ್ಠವಾಗಿದ್ದರೂ ಕಾಮುಕರ ಅಟ್ಟಹಾಸ ಮಾತ್ರ ನಿಲ್ಲುತ್ತಿಲ್ಲ.ಈ ನಡುವೆ 16 ವರ್ಷದ ಬಾಲಕಿ ಮೇಲೆ 8 ಮಂದಿ ಕಾಮುಕರಿಂದ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣ ಉತ್ತರಪ್ರದೇಶದ ಅಮೋಹ ರೈಲು ನಿಲ್ದಾಣದ ಸಮೀಪ ಮನೆಯೊಂದರಲ್ಲಿ ನಡೆದಿದೆ. ಬಾಲಕಿಯ ಸಹೋದರ ಆರೋಪಿಗಳ ಕುಟುಂಬದ ಓರ್ವ ಮಹಿಳೆಯೊಂದಿಗೆ ಪರಾರಿಯಾಗಿದ್ದು, ಇದೇ ಸೇಡು ತೀರಿಸಿಕೊಳ್ಳಲು ಪೋಷಕರ ಎದುರಲ್ಲೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ವಿವರ: ಆರೋಪಿಗಳ ಕುಟುಂಬದ ಓರ್ವ ಮಹಿಳೆಯೊಂದಿಗೆ ಬಾಲಕಿಯ ಸಹೋದರ ಪರಾರಿಯಾಗಿದ್ದ. ಇಲ್ಲಿಗೇ ಎರಡೂ ಕುಟುಂಬದ ಅನ್ಯೋನ್ಯತೆ ಮುರಿದು ಬಿದ್ದಿದ್ದು, ರೊಚ್ಚಿಗೆದ್ದ ಮಹಿಳೆಯ ಕುಟುಂಬದ ಕೆಲವರು ಈರ್ವರೂ ಪರಾರಿಯಾದ ದಿನದಿಂದ ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾದರೂ, ಆರೋಪಿಗಳಿಗೆ ಅವರಿಬ್ಬರ ಪತ್ತೆಯಾಗಿರಲಿಲ್ಲ. ಇದೇ ಕಾರಣಕ್ಕಾಗಿ ಜೂನ್ 28 ರಂದು ಆರೋಪಿಗಳು ಪೋಷಕರೊಂದಿಗೆ ಬಾಲಕಿಯನ್ನು ಎಳೆದುಕೊಂಡು ಹೋಗಿ ಪೋಷಕರ ಎದುರಲ್ಲೇ ಪರಾರಿಯಾಗಿದ್ದ ಮಹಿಳೆಯ ಸಹೋದರರು, ತಂದೆ ಮತ್ತು ಚಿಕ್ಕಪ್ಪಂದಿರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳಲ್ಲಿ ಒಬ್ಬ ಒಪ್ಪಿಗೆ ಇಲ್ಲದೆ ಆಕೆಯನ್ನು ಮದುವೆಯಾಗಿದ್ದ.

ಅದಾದ ಬಳಿಕ ಜೂನ್ 29 ರಂದು ಮನೆಯಿಂದ ಅವರನ್ನು ಹೊರಗೆ ಕಳುಹಿಸಿದ್ದು, ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದರು,ನಂತರ ಕುಟುಂಬದವರು ಪೊಲೀಸರನ್ನು ಸಂಪರ್ಕಿಸಿದರೂ ದೂರು ದಾಖಲಿಸಿರಲಿಲ್ಲ. ಬಳಿಕ ಬಾಲಕಿ ಹೇಳಿಕೆಯನ್ನು ಆಧರಿಸಿ ಎಫ್‌ಐಆರ್‌ ದಾಖಲಿಸಲಾಗಿದೆ. ಆರೋಪಿಗಳು ಪ್ರಭಾವಿಗಳಾಗಿದ್ದು, ನಮ್ಮ ಕಟುಂಬದ ಬೇರೆ ಹುಡುಗಿಯರಿಗೂ ಇದೇ ರೀತಿ ಮಾಡಬಹುದೆಂದು ಆತಂಕದಲ್ಲಿದ್ದೇವೆ ಎಂದು ಬಾಲಕಿಯ ಚಿಕ್ಕಮ್ಮ ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave A Reply

Your email address will not be published.