ಡಿವೈಎಸ್ಪಿ ಲಕ್ಷ್ಮೀ ಅನುಮಾನಾಸ್ಪದ ಸಾವು | ವರದಿಯಿಂದ ಕಾರಣ ಬಹಿರಂಗ

ಡಿ ವೈ ಎಸ್ಪಿ ಲಕ್ಷ್ಮೀ ಅವರ ಅನುಮಾನಾಸ್ಪದ ಸಾವಿನ ಕುರಿತಂತೆ ತನಿಖೆ ಪೂರ್ಣಗೊಂಡಿದ್ದು, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಕೃತ್ಯಕ್ಕೆ ಆಕೆಯ ಮಾನಸಿಕ ಒತ್ತಡವೇ ಪ್ರಮುಖ ಕಾರಣವೆಂದು ತನಿಖಾ ತಂಡಕ್ಕೆ ವೈದ್ಯರು ವರದಿ ನೀಡಿದ್ದಾರೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಗೆಳೆಯನ ಮನೆಯಲ್ಲಿ 2020ರ ಡಿಸೆಂಬರ್ 17ರಂದು ಡಿವೈಎಸ್ಪಿ ಲಕ್ಷ್ಮೀ ಅವರ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಡಿವೈಎಸ್ಪಿ ಲಕ್ಷ್ಮೀ ಅನುಮಾನಾಸ್ಪದ ಸಾವಿನ ಪ್ರಕರಣ ಕುರಿತಂತೆ ವೈದ್ಯರು ವರದಿಯನ್ನು ಪೊಲೀಸರಿಗೆ ಸಲ್ಲಿಸಿದ್ದು ಮಾನಸಿಕ ಒತ್ತಡವೇ ಆತ್ಮಹತ್ಯೆಗೆ ಕಾರಣ ಎಂದು ಉಲ್ಲೇಖಿಸಿದ್ದಾರೆ.

ಮಾನಸಿಕ ಒತ್ತಡದಿಂದ ಡಿವೈಎಸ್ಪಿ ಲಕ್ಷ್ಮೀ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ ಆಕೆಯನ್ನು ಕೊಲೆ ಮಾಡಿ ನೇಣು ಹಾಕಿರುವ ಬಗ್ಗೆ ಪುರಾವೆಗಳಿಲ್ಲ ಎನ್ನುವುದು ತನಿಖೆ ವೇಳೆ ಬಹಿರಂಗವಾಗಿದೆ.

Leave A Reply

Your email address will not be published.