Day: July 8, 2021

ಬೆಳ್ತಂಗಡಿ | ನಡ ಪರಿಸರದಲ್ಲಿ ಶುರುವಾಗಿದೆ ‘ಕರಡಿ’ ಕಾಟ

ಬೆಳ್ತಂಗಡಿ: ತಾಲೂಕಿನ ನಡ ಗ್ರಾಮದ ಕೂಡೇಲು,ಅಗಳಿ ಕಿಂಡಾಜೆ ಮೊದಲಾದ ಪರಿಸರಗಳಲ್ಲಿ ಕಳೆದ ಕೆಲವು ದಿನಗಳಿಂದ ಕರಡಿಗಳು ಕಂಡು ಬರುತ್ತಿರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಸಮೀಪ ಇರುವ ಈ ಪ್ರದೇಶದಲ್ಲಿ ಬೆರಳೆಣಿಕೆಯ ಕೆಲವು ಮನೆಗಳಿವೆ. ಮನೆಗಳು ಅರಣ್ಯಕ್ಕೆ ಹತ್ತಿರವಿದ್ದು, ಇಲ್ಲಿ ಸಂಜೆ ಹಾಗೂ ರಾತ್ರಿ ವೇಳೆ 2 ಕರಡಿಗಳು ಕಾಣಿಸುತ್ತಿವೆ. ಇದರಿಂದ ಸಂಜೆಯ ಬಳಿಕ ಜನಸಂಚಾರಕ್ಕೆ ಭಯಪಡುವಂತಾಗಿದೆ. ಕರಡಿಗಳು ರಸ್ತೆ ದಾಟುವುದನ್ನು ಹಾಗೂ ತೋಟ ಪ್ರದೇಶದಲ್ಲಿ ಇರುವುದನ್ನು ಕಂಡಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ಆದರೆ …

ಬೆಳ್ತಂಗಡಿ | ನಡ ಪರಿಸರದಲ್ಲಿ ಶುರುವಾಗಿದೆ ‘ಕರಡಿ’ ಕಾಟ Read More »

ಆರ್‌ಎಸ್‌ಎಸ್ ಮಾಜಿ ಗ್ರಾಮಾಂತರ ಸಂಘಚಾಲಕರಾದ ಹಿರಣ್ಯ ಗಣಪತಿ ಭಟ್ ಇನ್ನಿಲ್ಲ

ಮುಂಡೂರು: ಮುಂಡೂರು ಮೃತ್ಯುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಜಿ ಗ್ರಾಮಾಂತರ ಸಂಘಚಾಲಕರು ಹಾಗೂ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಹಿರಣ್ಯ ಗಣಪತಿ ಭಟ್ ರವರು ವಯೋಸಹಜತೆಯಿಂದ ಜು.8 ರಂದು ನಿಧನರಾದರು.

ಪುತ್ತೂರು ಟಿಎಚ್‌ಓ ಡಾ.ದೀಪಕ್ ರೈ ನೇಮಕದ ಡಿ.ಸಿ.ಆದೇಶಕ್ಕೆ ಇಲಾಖಾ ಘಟನೋತ್ತರ ಮಂಜೂರಾತಿ

ತಾಲೂಕು ಆರೋಗ್ಯಾಧಿಕಾರಿಯಾಗಿದ್ದ ಡಾ.ಅಶೋಕ್ ಕುಮಾರ್ ರೈ ಅವರು ಕೋವಿಡ್ ಸಮಯದಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ತನ್ನ ಅಧಿಕಾರ ಚಲಾಯಿಸಿ ಡಾ.ಅಶೋಕ್ ರೈ ಅವರನ್ನು ಹುದ್ದೆಯಿಂದ ಬದಲಾಯಿಸಿ ಡಾ.ದೀಪಕ್ ರೈ ಅವರನ್ನು ತಾಲೂಕು ಆರೋಗ್ಯಾಧಿಕಾರಿಯಾಗಿ ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಡಾ.ಅಶೋಕ್ ರೈ ಅವರು ಕೆಎಟಿಗೆ ಮೊರೆ ಹೋಗಿದ್ದು,ಇದೀಗ ಡಾ.ದೀಪಕ್ ರೈ ನೇಮಕದ ಡಿ.ಸಿ.ಆದೇಶಕ್ಕೆ ಇಲಾಖಾ ಘಟನೋತ್ತರ ಮಂಜೂರಾತಿ ದೊರಕಿದ್ದು,ಡಾ.ದೀಪಕ್ ರೈ ಅವರಿಗೆ ಅಧಿಕಾರ ದೊರಕಿದೆ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈಯವರಿಗೆ …

ಪುತ್ತೂರು ಟಿಎಚ್‌ಓ ಡಾ.ದೀಪಕ್ ರೈ ನೇಮಕದ ಡಿ.ಸಿ.ಆದೇಶಕ್ಕೆ ಇಲಾಖಾ ಘಟನೋತ್ತರ ಮಂಜೂರಾತಿ Read More »

ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಅಣ್ಣಾಮಲೈ ನೇಮಕ

ಚೆನ್ನೈ: ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷರಾಗಿರುವ ಎಲ್‌.ಮುರುಗನ್‌ ಅವರು ಬುಧವಾರ ಕೇಂದ್ರ ಸಂಪುಟದಲ್ಲಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ, ರಾಜ್ಯ ಘಟಕದ ಚುಕ್ಕಾಣಿ ಬದಲಾಗಿದ್ದು ಅಣ್ಣಾ ಮಲೈ ನೂತನ ರಾಜ್ಯಾದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಯ್ಕೆ ಮಾಡಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅವರು ಅರವಕುರಿಚಿ ಕ್ಷೇತ್ರದಿಂದ ಸ್ಪರ್ಧಿಸಿ, ಪರಾಭವಗೊಂಡಿದ್ದರು.

ಡಿವೈಎಸ್ಪಿ ಲಕ್ಷ್ಮೀ ಅನುಮಾನಾಸ್ಪದ ಸಾವು | ವರದಿಯಿಂದ ಕಾರಣ ಬಹಿರಂಗ

ಡಿ ವೈ ಎಸ್ಪಿ ಲಕ್ಷ್ಮೀ ಅವರ ಅನುಮಾನಾಸ್ಪದ ಸಾವಿನ ಕುರಿತಂತೆ ತನಿಖೆ ಪೂರ್ಣಗೊಂಡಿದ್ದು, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಕೃತ್ಯಕ್ಕೆ ಆಕೆಯ ಮಾನಸಿಕ ಒತ್ತಡವೇ ಪ್ರಮುಖ ಕಾರಣವೆಂದು ತನಿಖಾ ತಂಡಕ್ಕೆ ವೈದ್ಯರು ವರದಿ ನೀಡಿದ್ದಾರೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಗೆಳೆಯನ ಮನೆಯಲ್ಲಿ 2020ರ ಡಿಸೆಂಬರ್ 17ರಂದು ಡಿವೈಎಸ್ಪಿ ಲಕ್ಷ್ಮೀ ಅವರ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿವೈಎಸ್ಪಿ ಲಕ್ಷ್ಮೀ ಅನುಮಾನಾಸ್ಪದ ಸಾವಿನ ಪ್ರಕರಣ ಕುರಿತಂತೆ ವೈದ್ಯರು ವರದಿಯನ್ನು ಪೊಲೀಸರಿಗೆ ಸಲ್ಲಿಸಿದ್ದು …

ಡಿವೈಎಸ್ಪಿ ಲಕ್ಷ್ಮೀ ಅನುಮಾನಾಸ್ಪದ ಸಾವು | ವರದಿಯಿಂದ ಕಾರಣ ಬಹಿರಂಗ Read More »

ಐಎಂಎ ಬಹುಕೋಟಿ ಹಗರಣ ಮಾಜಿ ಸಚಿವ ರೋಷನ್ ಬೇಗ್ ಆಸ್ತಿ ಜಪ್ತಿ

ಹೈಕೋರ್ಟ್ ಸೂಚನೆಯಂತೆ ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಆರೋಪಿ ಮಾಜಿ ಸಚಿವ ರೋಷನ್ ಬೇಗ್ ಅವರ ಆಸ್ತಿಯನ್ನು ರಾಜ್ಯ ಸರಕಾರ ಬುಧವಾರ ಜಪ್ತಿ ಮಾಡಿದೆ. ರೋಷನ್ ಬೇಗ್‍ಗೆ ಸೇರಿದ ಸ್ಥಿರಾಸ್ತಿ, ಬ್ಯಾಂಕ್ ಅಕೌಂಟ್ ಜಪ್ತಿ ಮಾಡಲಾಗಿದ್ದು, ಎಷ್ಟು ಪ್ರಮಾಣದ ಆಸ್ತಿಯನ್ನು ಸರಕಾರ ಜಪ್ತಿ ಮಾಡಿದೆ ಎನ್ನುವುದು ತಿಳಿಯಬೇಕಿದೆ.ರೋಷನ್ ಬೇಗ್ ಆಸ್ತಿ ಜಪ್ತಿಗೆ ಹೈಕೋರ್ಟ್ ನ್ಯಾಯಪೀಠ ಸಾಕಷ್ಟು ಬಾರಿ ಆದೇಶ ನೀಡಿದ್ದರೂ ಸರಕಾರ ಆದೇಶವನ್ನು ಪಾಲಿಸಿರಲಿಲ್ಲ. ಹೀಗಾಗಿ, ನ್ಯಾಯಪೀಠ ಕೆಲ ದಿನಗಳ ಹಿಂದೆ ಸರಕಾರವು ಯಾಕೋ ಐಎಂಎ ಬಗ್ಗೆ …

ಐಎಂಎ ಬಹುಕೋಟಿ ಹಗರಣ ಮಾಜಿ ಸಚಿವ ರೋಷನ್ ಬೇಗ್ ಆಸ್ತಿ ಜಪ್ತಿ Read More »

ಮಹಿಳೆಯೊಂದಿಗೆ ಪರಾರಿಯಾದ ಯುವಕ | ರೊಚ್ಚಿಗೆದ್ದ ಮಹಿಳೆಯ ಕುಟುಂಬದ ಎಂಟು ಮಂದಿಯಿಂದ ಯುವಕನ ಸಹೋದರಿಯ ಅತ್ಯಾಚಾರ

ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.ಕಾನೂನು ಅದೆಷ್ಟೇ ಬಲಿಷ್ಠವಾಗಿದ್ದರೂ ಕಾಮುಕರ ಅಟ್ಟಹಾಸ ಮಾತ್ರ ನಿಲ್ಲುತ್ತಿಲ್ಲ.ಈ ನಡುವೆ 16 ವರ್ಷದ ಬಾಲಕಿ ಮೇಲೆ 8 ಮಂದಿ ಕಾಮುಕರಿಂದ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣ ಉತ್ತರಪ್ರದೇಶದ ಅಮೋಹ ರೈಲು ನಿಲ್ದಾಣದ ಸಮೀಪ ಮನೆಯೊಂದರಲ್ಲಿ ನಡೆದಿದೆ. ಬಾಲಕಿಯ ಸಹೋದರ ಆರೋಪಿಗಳ ಕುಟುಂಬದ ಓರ್ವ ಮಹಿಳೆಯೊಂದಿಗೆ ಪರಾರಿಯಾಗಿದ್ದು, ಇದೇ ಸೇಡು ತೀರಿಸಿಕೊಳ್ಳಲು ಪೋಷಕರ ಎದುರಲ್ಲೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ವಿವರ: ಆರೋಪಿಗಳ ಕುಟುಂಬದ ಓರ್ವ ಮಹಿಳೆಯೊಂದಿಗೆ …

ಮಹಿಳೆಯೊಂದಿಗೆ ಪರಾರಿಯಾದ ಯುವಕ | ರೊಚ್ಚಿಗೆದ್ದ ಮಹಿಳೆಯ ಕುಟುಂಬದ ಎಂಟು ಮಂದಿಯಿಂದ ಯುವಕನ ಸಹೋದರಿಯ ಅತ್ಯಾಚಾರ Read More »

ವಿದ್ಯುತ್ ಶಾಕ್ ಯುವಕ ಮೃತ್ಯು | ಟ್ರಾನ್ಸ್ ಫಾರ್ಮರ್ ಫ್ಯೂಸ್ ಹಾಕುವಾಗ ನಡೆದ ಅವಘಡ

ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಸಾವನ್ನಪ್ಪಿದ ಘಟನೆ ನಾಗರಹೊಳೆ ಕಾಡಂಚಿನ ಹುಣಸೂರಿನ ಮುದಗನೂರು ಗ್ರಾಮದಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ತಿತಿಮತಿ ಸಮೀಪದ ಕೋಣನಕುಂಟೆ ಗ್ರಾಮದ ಅನೀಶ್ (30) ಮೃತ ದುರ್ದೈವಿ. ಮೃತ ಅನೀಶ್ ಸೇರಿದಂತೆ ಕೊಡಗು ಜಿಲ್ಲೆಯ ನಾಲ್ಕು ಮಂದಿ ವ್ಯಕ್ತಿಗಳು ಕೋಣನಕುಂಟೆ ಗ್ರಾಮದ ಕೆಂಪೇಗೌಡರ ಜಮೀನಿನನ್ನು ಗುತ್ತಿಗೆ ಪಡೆದು ಬಾಳೆ ಬೆಳೆ ಬೆಳೆದಿದ್ದರು. ಜುಲೈ 08ರಂದು ಜಮೀನಿನಲ್ಲಿದ್ದ ಬೋರ್ವೆಲ್ ಪಂಪ್ ಸೆಟ್ ಗೆ ವಿದ್ಯುತ್ ಬಾರದ ಕಾರಣ ಬೆಳಿಗ್ಗೆ ಟ್ರಾನ್ಸ್ಫರ್ ನಲ್ಲಿ ಪ್ಯೂಸ್ ಹಾಕಲುಹೋಗಿದ್ದ ವೇಳೆ …

ವಿದ್ಯುತ್ ಶಾಕ್ ಯುವಕ ಮೃತ್ಯು | ಟ್ರಾನ್ಸ್ ಫಾರ್ಮರ್ ಫ್ಯೂಸ್ ಹಾಕುವಾಗ ನಡೆದ ಅವಘಡ Read More »

ಸಿಎಂ ಯಡಿಯೂರಪ್ಪಗೆ ರಿಲೀಫ್ |ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಸಲ್ಲಿಸಿದ್ದ ದೂರು ವಜಾ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಸಲ್ಲಿಸಲಾಗಿದ್ದ ಖಾಸಗಿ ದೂರನ್ನು ವಜಾಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ. ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಸಲ್ಲಿಸಿದ್ದ ದೂರನ್ನು ವಜಾಗೊಳಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಿದೆ. ಪ್ರಾಸಿಕ್ಯೂಷನ್​ಗೆ ಗವರ್ನರ್ ಪೂರ್ವಾನುಮತಿ ನೀಡದ ಹಿನ್ನೆಲೆಯಲ್ಲಿ ಖಾಸಗಿ ದೂರನ್ನು ವಜಾಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ ಎನ್ನಲಾಗಿದೆ. ಸಿಎಂ ಬಿಎಸ್ ವೈ ಮತ್ತು ಇತರರು ನಡೆಸಿದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಆದೇಶ ಕೋರಿ ಆಂಟಿ-ಗ್ರಾಫ್ಟ್ ಮತ್ತು ಎನ್ವಿರಾನ್ಮೆಂಟಲ್ ಫೋರಂ …

ಸಿಎಂ ಯಡಿಯೂರಪ್ಪಗೆ ರಿಲೀಫ್ |ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಸಲ್ಲಿಸಿದ್ದ ದೂರು ವಜಾ Read More »

ವಿಶ್ವದ ನಂ. 1 ಶ್ರೀಮಂತರಾದ ಅಮೆಜಾನ್ ಕಂಪನಿಯ ಎಕ್ಸಿಕ್ಯೂಟಿವ್ ಚೇರ್ ಮನ್ ಜೆಫ್ ಬೆಜೋಸ್

ಅಮೆಜಾನ್ ಕಂಪನಿಯ ಎಕ್ಸಿಕ್ಯೂಟಿವ್‌ ಚೇರ್‌ಮನ್‌ ಜೆಫ್ ಬೆಜೋಸ್ ವಿಶ್ವದ ನಂ .1 ಶ್ರೀಮಂತರಾಗಿದ್ದು, ಅವರ ಒಟ್ಟು ಆಸ್ತಿ ಮೌಲ್ಯ $211 ಬಿಲಿಯನ್ ಆಗಿದೆ. ಅಂದರೆ 1,56,98,97,00,00,000.00 ರೂ. ಆಸ್ತಿಹೊಂದಿದ್ದಾರೆ!! ಈ ಹಿಂದೆ ಜನವರಿಯಲ್ಲಿ ಬ್ಲೂಮ್‌ಬರ್ಗ್‌ ಪ್ರಕಟಿಸಿದ ವರದಿಯ ಪ್ರಕರ ಎಲೋನ್ ಮಸ್ಕ್ $210 ಬಿಲಿಯನ್ ಸಂಪತ್ತನ್ನು ಹೊಂದಿದ್ದರು. ಆದರೆ ಇದೀಗ ಜೆಫ್ ಬೆಜೋಸ್ $211 ಮೌಲ್ಯದ ಸಂಪತ್ತನ್ನು ಹೊಂದುವ ಮೂಲಕ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಅಮೆಜಾನ್ ಪ್ರತಿಸ್ಪರ್ಧಿ ಮೈಕ್ರೋಸಾಫ್ಟ್ ಕಂಪನಿಯೊಂದಿಗೆ ಕ್ಲೌಡ್-ಕಂಪ್ಯೂಟಿಂಗ್ ಒಪ್ಪಂದವನ್ನು …

ವಿಶ್ವದ ನಂ. 1 ಶ್ರೀಮಂತರಾದ ಅಮೆಜಾನ್ ಕಂಪನಿಯ ಎಕ್ಸಿಕ್ಯೂಟಿವ್ ಚೇರ್ ಮನ್ ಜೆಫ್ ಬೆಜೋಸ್ Read More »

error: Content is protected !!
Scroll to Top