Day: July 7, 2021

ಬೆಳ್ಳಾರೆ : ನಾಪತ್ತೆಯಾಗಿದ್ದ ಯುವತಿ ಪತ್ತೆ, ಚೆನ್ನೈಗೆ ತೆರಳಿದ್ದ ಯುವತಿ ವಾಪಾಸ್ ಮನೆಗೆ

ಸುಳ್ಯ : ಬೆಳ್ಳಾರೆಗೆ ಬ್ಯೂಟಿಪಾರ್ಲರ್‌ಗೆ ಹೋಗುವುದಾಗಿ‌ ಮನೆಯಿಂದ ಹೋಗಿ ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದ ಯುವತಿ ಪತ್ತೆಯಾಗಿದ್ದಾಳೆ. ಐವರ್ನಾಡು ಗ್ರಾಮದ ಕೊಯಿಲ ನಿವಾಸಿ ಶ್ರೀಕಲಾ ಆಗಿದ್ದು ಈಕೆ ತನ್ನ ಮನೆಯಲ್ಲಿ ಬೆಳ್ಳಾರೆಯ ಬ್ಯೂಟಿ ಪಾರ್ಲರ್ ಗೆ ಹೋಗಿ ಬರುವುದಾಗಿ ಮನೆಯಿಂದ ಹೊರಹೋದವು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಈ ಕುರಿತು ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಆಧ್ಯಾತ್ಮಿಕತೆಯ ಬಗ್ಗೆ ಒಲವು ಹೊಂದಿದ್ದ ಶ್ರೀಕಲಾ ಅವರು ಮನೆಯಲ್ಲಿ ಹೇಳದೆ ಚೆನೈ ನ ಈಶ ಆಧ್ಯಾತ್ಮಿಕ ಸಂಸ್ಥೆಗೆ ಸೇರಲು …

ಬೆಳ್ಳಾರೆ : ನಾಪತ್ತೆಯಾಗಿದ್ದ ಯುವತಿ ಪತ್ತೆ, ಚೆನ್ನೈಗೆ ತೆರಳಿದ್ದ ಯುವತಿ ವಾಪಾಸ್ ಮನೆಗೆ Read More »

ಕುದ್ಮಾರು : ಅಡಿಕೆ ಗಿಡ ಕಿತ್ತು ದಬ್ಬಾಳಿಕೆ ನಡೆಸಿದ ಗೇರು ನಿಗಮ ಅಧಿಕಾರಿಗಳು

ಕಡಬ ತಾಲೂಕಿನ ಕುದ್ಮಾರು ಗ್ರಾಮದ ಕೆಡೆಂಜಿ ಎಂಬಲ್ಲಿ ಕೃಷಿಕರೋರ್ವರು ನಾಟಿ ಮಾಡಿದ ಅಡಿಕೆಗಳನ್ನು ಗೇರು ನಿಗಮದ ಅಧಿಕಾರಿಗಳು ಕಿತ್ತು ದಬ್ಬಾಳಿಕೆ ನಡೆಸಿದ್ದಾರೆ. ಕುದ್ಮಾರು ಗ್ರಾಮದ ಕೆಡೆಂಜಿ ಎಂಬಲ್ಲಿ ನಾಗೇಶ್ ಎಂಬವರು ತಮ್ಮ ಜಾಗದ ಪಕ್ಕದಲ್ಲಿರುವ ಭೂಮಿಯನ್ನು ಕಳೆದ ಹಲವಾರು ವರ್ಷಗಳಿಂದ ಅನುಭವಿಸಿಕೊಂಡು ಬರುತ್ತಿದ್ದು,ಎರಡು ವರ್ಷದ ಹಿಂದೆ ಅಡಿಕೆ ಗಿಡ ನಾಟಿ ಮಾಡಿದ್ದರು. ಆದರೆ ಗೇರುನಿಗಮದ ಅಧಿಕಾರಿ ಬಾಲಕೃಷ್ಣ ಹಾಗೂ ಸಿಬ್ಬಂದಿಗಳು ನಿಗಮದ ಹೆಸರಲ್ಲಿ ಜಾಗವಿಲ್ಲದಿದ್ದರೂ ಅಕ್ರಮವಾಗಿ ಪ್ರವೇಶಮಾಡಿ ನೆಟ್ಟ ಅಡಿಕೆ ಗಿಡವನ್ನು ಕಿತ್ತು ದಬ್ಬಾಳಿಕೆ ಮಾಡಿದ್ದಾರೆ.ಅಲ್ಲದೆ ಮನೆಯಲ್ಲಿ …

ಕುದ್ಮಾರು : ಅಡಿಕೆ ಗಿಡ ಕಿತ್ತು ದಬ್ಬಾಳಿಕೆ ನಡೆಸಿದ ಗೇರು ನಿಗಮ ಅಧಿಕಾರಿಗಳು Read More »

ಪರಿಸರ ಹೋರಾಟಗಾರ್ತಿಯಿಂದ ಕೇಂದ್ರ ಸಚಿವರ ತನಕ ಏರಿದ ಚಾರ್ವಾಕದ ಶೋಭಾ ಕರಂದ್ಲಾಜೆ

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಕಡಬ ತಾಲೂಕು ಚಾರ್ವಾಕ ಗ್ರಾಮದ ಶೋಭಾ ಕರಂದ್ಲಾಜೆ ಅವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸೇರಿದ್ದಾರೆ. ತಾನೆಷ್ಟೇ ದೊಡ್ಡ ಸ್ಥಾನಕ್ಕೆ ಏರಿದರೂ ಹುಟ್ಟೂರಿನ ಅಭಿಮಾನ ಹಾಗೂ ಸಂಪರ್ಕವನ್ನು ಇಂದಿಗೂ ಇರಿಸಿಕೊಂಡಿದ್ದಾರೆ. ಪ್ರತೀ ಬಾರಿಯೂ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ಮುನ್ನ ತನ್ನ ಊರಿನ ದೇವಸ್ಥಾನಗಳಿಗೆ ಬೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಮುಂದಿನ ಕಾರ್ಯ ನಡೆಸುವುದು ವಾಡಿಕೆ ಮಾಡಿಕೊಂಡವರು. ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೂ ಸಕ್ರಿಯವಾಗಿ ಗುರುತಿಸಿಕೊಂಡ ಶೋಭಾ …

ಪರಿಸರ ಹೋರಾಟಗಾರ್ತಿಯಿಂದ ಕೇಂದ್ರ ಸಚಿವರ ತನಕ ಏರಿದ ಚಾರ್ವಾಕದ ಶೋಭಾ ಕರಂದ್ಲಾಜೆ Read More »

ಕಡಬ : ಇಲಿ ಜ್ವರಕ್ಕೆ ಐತ್ತೂರಿನ ಯುವಕ ಬಲಿ

ಕಡಬ: ಕಡಬ ತಾಲೂಕು ಐತ್ತೂರು ಗ್ರಾಮದ ಪಂಜೋಡಿ ನಿವಾಸಿ ಶಿವಪ್ಪ ಗೌಡರ ಪುತ್ರ ಮೋಹಿತ್ (19) ಇಲಿ ಜ್ವರದಿಂದ ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಕೆಲವು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.ಮೃತ ಮೋಹಿತ್ ತಾಯಿ ಸುಶೀಲಾ, ಸಹೋದರಿ ಗೀತಾ ಅವರನ್ನು ಅಗಲಿದ್ದಾರೆ

ಭಾರತದಲ್ಲಿ ಶೀಘ್ರದಲ್ಲೇ ಬರಲಿದೆ 299 ರೂ. ಗೆ ಕೋವಿಡ್-19 RT-PCR ಪರೀಕ್ಷೆ

ಫ್ರಾನ್ಸ್ ಮೂಲದ ಕಂಪನಿ ಪಾತ್ ಸ್ಟೋರ್ ಭಾರತದಲ್ಲಿ ಕೇವಲ 299 ರೂ. ಬೆಲೆಗೆ ಕೋವಿಡ್-19 RT-PCR ಪರೀಕ್ಷೆಯನ್ನು ಮಾಡುವುದಾಗಿ ಘೋಷಿಸಿದ್ದು, ಅಗ್ಗ ದರದಲ್ಲಿ ಕೊರೋನ ಟೆಸ್ಟ್ ದೇಶದಲ್ಲಿ ಅತಿಶೀಘ್ರದಲ್ಲೇ ದೊರೆಯಲಿದೆ. ದೇಶಾದ್ಯಂತ ಕೊವಿಡ್-19 ಮೂರನೇ ಅಲೆಯ ಸಾಧ್ಯತೆಗಳ ಹಿನ್ನೆಲೆ, ಅಗ್ಗದ ಬೆಲೆಯ ಈ ಟೆಸ್ಟಿಂಗ್ ಜನರಿಗೆ ತುಂಬಾ ಸಹಾಯಕವಾಗಲಿದೆ. ಇದರಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟಿಂಗ್ ಪ್ರಕ್ರಿಯೆಯನ್ನು ಕೂಡ ನಡೆಸಬಹುದಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಕಂಪನಿ, ಈ ಅಗ್ಗದ ಬೆಲೆಯ ಟೆಸ್ಟ್ ಪ್ರವಾಸೋದ್ಯಮ, ಔದ್ಯೋಗಿಕ ಹಾಗೂ …

ಭಾರತದಲ್ಲಿ ಶೀಘ್ರದಲ್ಲೇ ಬರಲಿದೆ 299 ರೂ. ಗೆ ಕೋವಿಡ್-19 RT-PCR ಪರೀಕ್ಷೆ Read More »

ಡಿ.ಕೆ.ಶಿಗೆ ತುಳುನಾಡಿನ ದೈವಗಳ ಆಯುಧ ( ಕಡ್ತಲೆ) ನೀಡಿ ಉಡುಪಿ ಕಾಂಗ್ರೆಸ್ ನಾಯಕರ ಯಡವಟ್ಟು | ತುಳುವರಿಂದ ವ್ಯಾಪಕ ಆಕ್ರೋಶ !

ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಡುಪಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ತುಳುನಾಡಿನ ದೈವಗಳ ಕಡ್ತಲೆಯನ್ನು ಉಡುಗೂರೆಯಾಗಿ ನೀಡಿ ಎಡವಟ್ಟು ಮಾಡಿಕೊಂಡಿದ್ದು, ಇದಕ್ಕೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಉಡುಪಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ ವೇಳೆ ಕಾಂಗ್ರೆಸ್ ಮುಖಂಡರು ಬೆಳ್ಳಿಯದೈವದ ಕಡ್ತಲೆ (ಕತ್ತಿ) ನೀಡಿ ಸ್ವಾಗತ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರ ಈ ಕಾರ್ಯಕ್ಕೆ ತುಳುವರು ಉರಿದು ಬಿದ್ದಿದ್ದಾರೆ. ಕರಾವಳಿ ಜನರು ಶ್ರದ್ಧಾ ಭಕ್ತಿಯಿಂದ ಆರಾಧಿಸುವ ದೈವಗಳ ಆಯುಧ ಸಾಮಾನ್ಯವಾಗಿ …

ಡಿ.ಕೆ.ಶಿಗೆ ತುಳುನಾಡಿನ ದೈವಗಳ ಆಯುಧ ( ಕಡ್ತಲೆ) ನೀಡಿ ಉಡುಪಿ ಕಾಂಗ್ರೆಸ್ ನಾಯಕರ ಯಡವಟ್ಟು | ತುಳುವರಿಂದ ವ್ಯಾಪಕ ಆಕ್ರೋಶ ! Read More »

ಕಳ್ಳತನ ಮಾಡಿ ವಾಪಸ್ಸು ಹೋಗುವಾಗ ‘ ಸ್ಸಾರಿ ಫ್ರೆಂಡ್ ‘ ಎಂದು ಬರೆದಿಟ್ಟು ಹೋದ ಕಳ್ಳ | ದುಡ್ಡು ಆದಾಗ ಹಣ ವಾಪಾಸ್ ಮಾಡುವ ಭರವಸೆ ಬೇರೆ !

ಭೋಪಾಲ್: ಕಳ್ಳತನ ಮಾಡುವುದು ಹೇಯ ಕೆಲಸ. ಅದಕ್ಕೆ ಕ್ಷಮೆ ಇಲ್ಲ. ಅಂತವರ ಮೇಲೆ ಒಂದಿಷ್ಟು ಕರುಣೆ ಕೂಡ ಹುಟ್ಟುವುದಿಲ್ಲ. ಆದರೆ ಇಲ್ಲೊಬ್ಬ ಕಳ್ಳ, ತಾನು ಹೊಕ್ಕ ಮನೆಯಿಂದ ನಗನಾಣ್ಯಗಳನ್ನು ದೋಚಿದ್ದರೂ,ತನ್ನ ಮೇಲೆ ಒಂದಷ್ಟು ಕರುಣೆ ಮೂಡುವಂತೆ ಮಾಡಿದ್ದಾನೆ. ಪೊಲೀಸ್ ಅಧಿಕಾರಿಯ ಮನೆಯಲ್ಲಿ ಬೆಲೆಬಾಳುವ ವಸ್ತು ಕಳ್ಳತನ ಮಾಡಿದ ಕಳ್ಳ ಕ್ಷಮಾಪಣ ಪತ್ರ ಬರೆದಿಟ್ಟಿರುವ ಘಟನೆ ಮಧ್ಯಪ್ರದೇಶದ ಭಿಂದ್ ನಗರದಲ್ಲಿ ನಡೆದಿದೆ. ಕೊತ್ವಾಲ್ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ (ಎಎಸ್‍ಐ) ಕಮಲೇಶ್ ಕಟಾರೆ, ಛತ್ತೀಸ್‍ಗಢದಲ್ಲಿ ಕೆಲಸ ಮಾಡುತ್ತಿದ್ದಾರೆ. …

ಕಳ್ಳತನ ಮಾಡಿ ವಾಪಸ್ಸು ಹೋಗುವಾಗ ‘ ಸ್ಸಾರಿ ಫ್ರೆಂಡ್ ‘ ಎಂದು ಬರೆದಿಟ್ಟು ಹೋದ ಕಳ್ಳ | ದುಡ್ಡು ಆದಾಗ ಹಣ ವಾಪಾಸ್ ಮಾಡುವ ಭರವಸೆ ಬೇರೆ ! Read More »

ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ

ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಯುವತಿಯೊಬ್ಬಳ ಶವವು ಕಾಸರಗೋಡು ನಗರ ಪೊಲೀಸ್ ಠಾಣಾ ವ್ಯಾಪ್ತಿಯಿಂದ ವರದಿಯಾಗಿದೆ. ಕಸಬಾ ತೀರದ ಪುಷ್ಪಾ-ಅಶೋಕನ್ ಅವರ ಪುತ್ರಿ ಅಶ್ವತ್ಥಿ ಎಂಬಾಕೆಯೇ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವತಿ. ಅವರ ಮನೆಯ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು, ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಮೃತಶರೀರವನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ಕೊಂಡೊಯ್ದಿದ್ದು,ಮರಣೋತ್ತರ ಪರೀಕ್ಷೆಯ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ಗೋಲಿಬಾರ್ : ಫೇಸ್‌ಬುಕ್‌‌ನಲ್ಲಿ ಪ್ರಚೋದನಕಾರಿ ಪೋಸ್ಟ್ | ಆರೋಪಿಯ ಬಂಧನ

2019ರ ಮಂಗಳೂರು ಗೋಲಿಬಾರ್‌ ವೇಳೆ ಫೇಸ್‌ಬುಕ್‌ನಲ್ಲಿ ಪೊಲೀಸರ ಮನೆಗೆ ನುಗ್ಗಿ ಅವರ ಮನೆಯ ಹೆಂಗಸರನ್ನು ಅತ್ಯಾಚಾರ ಮಾಡಿ ಸುಟ್ಟು ಹಾಕಬೇಕು ಎಂಬ ಬರವಣಿಗೆ ಇರುವ ಪೋಸ್ಟ್‌ ಹಾಕಿ ಪ್ರಸಾರ ಮಾಡಿ ಅಪರಾಧ ಕೃತ್ಯಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಚಿತ್ರದುರ್ಗದ ಯೋಗೇಶ್‌ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಎನ್‌ಆರ್‌ಸಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ಗೋಲಿಬಾರ್‌ ನಡೆದು ಇಬ್ಬರು ಮೃತರಾಗಿದ್ದರು.

ಕೇಂದ್ರ ಸಚಿವ ಸ್ಥಾನಕ್ಕೆ ಡಿ.ವಿ.ಸದಾನಂದ ಗೌಡ ರಾಜಿನಾಮೆ

ನರೇಂದ್ರ ಮೋದಿ ನೇತೃತ್ವದ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯುತ್ತಿದ್ದು,ಈ ಕಾರಣದಿಂದ ಸಚಿವ ಡಿ.ವಿ.ಸದಾನಂದ ಗೌಡ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಪಕ್ಷದ ಉನ್ನತ ಮೂಲಗಳು ತಿಳಿಸಿದ್ದು ಅದರಂತೆ ಸದಾನಂದಗೌಡ ಅವರು ರಾಜೀನಾಮೆ ನೀಡಿದ್ದಾರೆ. ಡಿವಿ ಸದಾನಂದ ಗೌಡರ ಖಾತೆ ನಿರ್ವಹಣೆ ಮೇಲೆ ಮೋದಿಯವರಿಗೆ ಸಮಾಧಾನ ತಂದಿರಲಿಲ್ಲ. ಪೂರ್ ಪರ್ಫಾರ್ಮೆನ್ಸ್ ಆಧಾರದ ಮೇಲೆ ಡಿವಿಎಸ್ ರಾಜೀನಾಮೆ ನೀಡಬೇಕಾಗಿ ಬಂದಿದೆ ಎನ್ನಲಾಗಿದೆ. ಡಿವಿ ಸದಾನಂದಗೌಡ ರಾಜಿನಾಮೆಯಿಂದ ಶೋಭಾ ಕರಂದ್ಲಾಜೆಯವರಿಗೆ ಒಳ್ಳೆಯ ಅವಕಾಶ ದಕ್ಕಿದ್ದು …

ಕೇಂದ್ರ ಸಚಿವ ಸ್ಥಾನಕ್ಕೆ ಡಿ.ವಿ.ಸದಾನಂದ ಗೌಡ ರಾಜಿನಾಮೆ Read More »

error: Content is protected !!
Scroll to Top