ಶಿವನಂತೆ ಕುತ್ತಿಗೆಗೆ ಹಾವು ಸುತ್ತಿಕೊಂಡು ಪೇಟೆ ಸವಾರಿ ಹೊರಟ ಅಜ್ಜಪ್ಪ

ಈ ಜಗತ್ತಿನಲ್ಲಿ ವಿಭಿನ್ನ ರೀತಿಯ ವ್ಯಕ್ತಿಗಳು ಕಾಣಸಿಗುತ್ತಾರೆ. ಇಲ್ಲೊಬ್ಬ ವ್ಯಕ್ತಿ ಜೀವಂತ ಹಾವನ್ನೇ ತನ್ನ ಕುತ್ತಿಗೆಗೆ ಸುತ್ತಿಕೊಂಡು ಹೊರಟಿದ್ದಾನೆ. ಹಾವೆಂದರೆ ಮಾರುದ್ದ ದೂರ ಸರಿಯುವವರ ನಡುವೆ ಈ ವ್ಯಕ್ತಿಯ ಧೈರ್ಯ ಮಾತ್ರ ಮೆಚ್ಚುವಂಥದ್ದು.

ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಜೀವಂತ ಹಾವನ್ನು ತನ್ನ ಕುತ್ತಿಗೆಗೆ ಸುತ್ತಿಕೊಂಡು ಸೈಕಲ್ ಏರಿ ಹೋದ ವಿಡಿಯೋ ಹಾಗೂ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವ್ಯಕ್ತಿಯ ಮನೆ ಬಳಿ ನಿರುಪದ್ರವಿ ಹಾವೊಂದು ಬಂದಿತ್ತು. ಅದನ್ನು ಹಿಡಿದುಕೊಂಡ ವ್ಯಕ್ತಿ, ತನ್ನ ಕುತ್ತಿಗೆಗೆ ಸುತ್ತಿಕೊಂಡು ಸೈಕಲ್ ಏರಿ ಹೊಲದತ್ತ ತೆಗೆದುಕೊಂಡು ಹೋಗಿ ಬಿಟ್ಟಿರುವ ದೃಶ್ಯವನ್ನು ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾರೆ. ಇದು ಇದೀಗ ಭಾರೀ ಸದ್ದು ಮಾಡಿದೆ.

ನಿರುಪದ್ರವಿ ಹಾವು ಆದಕಾರಣ ಆತ ತನ್ನ ಕುತ್ತಿಗೆಗೆ ಸುತ್ತಿಕೊಂಡು ಸವಾರಿ ಹೊರಟಿದ್ದಾನೆ. ಒಂದು ವೇಳೆ ಅದು ವಿಷಪೂರಿತ ಹಾವಾಗಿದ್ದರೆ ಹೀಗೆ ಮಾಡುತ್ತಿರಲಿಲ್ಲ ಎಂಬ ಕಾಮೆಂಟ್ಸ್ ಗಳು ಇದಕ್ಕೆ ವ್ಯಕ್ತವಾಗುತ್ತಿದೆ.

Leave A Reply

Your email address will not be published.