ಶಶಿಕುಮಾರ್ ಬಿ.ಎನ್.ಹೆಸರಿನಲ್ಲಿ ನಕಲಿ ಫೆಸ್‌ಬುಕ್ ಖಾತೆ ತೆರೆದು ಹಣಕ್ಕೆ ಬೇಡಿಕೆ

ಪೆರುವಾಜೆ ಗ್ರಾಮದ ಮುರ್ಕೆತ್ತಿ ನೆಲ್ಲಿಕುಮೇರ್ ನಿವಾಸಿ ಶಿಕ್ಷಕ ಶಶಿಕುಮಾರ್ ಬಿ.ಎನ್. ಅವರ ಫೇಸ್ಬುಕ್ ಅಕೌಂಟ್ ಅನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿ ಹಣದ ಬೇಡಿಕೆ ಇರಿಸಿದ್ದಾರೆ.

ಶಶಿಕುಮಾರ್ ಅವರ ಹೆಸರು,ಪೋಟೋ ಬಳಸಿ ಪೇಸ್ ಬುಕ್ ನಲ್ಲಿ ನಕಲಿ ಅಕೌಂಟ್ ತೆರೆದು ಹಲವರಿಗೆ ಸ್ನೇಹಿತರರಾಗಿ ರಿಕ್ವೆಸ್ಟ್ ಕಳುಹಿಸಿ ಹಣದ ಬೇಡಿಕೆ ಇರಿಸಿದ್ದಾರೆ. ಈ ಬಗ್ಗೆ ಗೆಳೆಯರಿಂದ ಮಾಹಿತಿ ಪಡೆದ ಶಶಿಕುಮಾರ್, ಇದೊಂದು ನಕಲಿಯಾಗಿ ಸೃಷ್ಟಿಸಿದ ಪೇಸುಬುಕ್ ಖಾತೆ ಆಗಿದ್ದು ಯಾರೂ ಕೂಡ ಹಣ ಕಳುಹಿಸಬೇಡಿ ಎಂದು ವಿನಂತಿಸಿದ್ದಾರೆ.
9675484582 ಈ ನಂಬರ್ ಗೆ Gpay ಮೂಲಕ ಹಣ ಪಾವತಿಸುವಂತೆ ಕೇಳಿಕೊಳ್ಳುತ್ತಿದ್ದು,ಯಾರೂ ಹಣ ಪಾವತಿಸದಂತೆ ಶಶಿಕುಮಾರ್ ವಿನಂತಿಸಿದ್ದಾರೆ.

Leave A Reply

Your email address will not be published.