ದೋಳ್ಪಾಡಿ :ನಾಪತ್ತೆಯಾದ ಯುವತಿ ಎಡಮಂಗಲದ ಯುವಕನೊಂದಿಗೆ ವಿವಾಹವಾಗಿ ಕಡಬ ಠಾಣೆಗೆ ಹಾಜರ್

ಕಡಬ : ಕಾಣಿಯೂರು ಗ್ರಾ.ಪಂ.ವ್ಯಾಪ್ತಿಯ ದೋಳ್ಪಾಡಿ ಗ್ರಾಮದ ಕೋರೇಲು ನಿವಾಸಿ ಯುವತಿಯೋರ್ವಳು ನಾಪತ್ತೆಯಾಗಿದ್ದು,ಆಕೆ ಎಡಮಂಗಲದ ಯುವಕನೊಂದಿಗೆ ವಿವಾಹವಾಗಿ ಕಡಬ ಠಾಣೆಗೆ ಹಾಜರಾಗಿದ್ದಾರೆ.

ಯುವತಿ ನಾಪತ್ತೆ ಕುರಿತು ಯುವತಿಯ ಅಣ್ಣ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು‌.

ಕೋರೊಲು ನಿವಾಸಿ ಲಲಿತಾ(30ವ.) ಎಂಬ ಯುವತಿಯು ಮನೆಮಂದಿ ಹೊರಗಡೆ ಹೋಗಿದ್ದ ಸಮಯದಲ್ಲಿ ಮನೆಗೆ ಬೀಗಹಾಕಿ ನಾಪತ್ತೆಯಾಗಿದ್ದು,ಆಕೆಯು ಮನೆಗೆ ಕೆಲ ಸಮಯಗಳಿಂದ ಬರುತ್ತಿದ್ದ ಎಡಮಂಗಲದ ಶಿವರಾಮ ಎಂಬಾತನ ಜತೆ ಪರಾರಿಯಾಗಿರುವ ಕುರಿತು ಶಂಕೆ ವ್ಯಕ್ತಪಡಿಸಿ ಆಕೆಯ ಅಣ್ಣ ಕೊರಗಪ್ಪ ಕಡಬ ಪೊಲೀಸರಿಗೆ ದೂರು ನೀಡಿದ್ದರು.

ಇದೀಗ ಆಕೆ ವಿವಾಹವಾಗಿ ಕಡಬ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ

Leave A Reply

Your email address will not be published.