ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಪಂಚಾಯತ್ ಚುನಾವಣಾ ಕ್ಷೇತ್ರಗಳ ಸ್ಥಾನ ಮೀಸಲಾತಿ ಪಟ್ಟಿ ಪ್ರಕಟ

ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಪಂಚಾಯತ್‌ಗಳಿಗೆ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸ್ಥಾನವನ್ನು ಮೀಸಲಿರಿಸಿ ಸರ್ಕಾರ ನೂತನ ಕರಡು ಅಧಿಸೂಚನೆ ಹೊರಡಿಸಿದೆ.

ಈ ಕುರಿತು ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಲಾಗಿದ್ದು, ರಾಜ್ಯದಲ್ಲಿ ಹೊಸದಾಗಿ ಒಟ್ಟು 56 ತಾಲೂಕುಗಳು ರಚನೆಯಾಗಿರುವುದರಿಂದ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ನಿಗದಿಪಡಿಸಲಾಗಿದ್ದ ಪ್ರತಿ 10,000 ಜನ ಸಂಖ್ಯೆಗೆ ಬದಲಾಗಿ ಪ್ರತಿ 12,500 ರಿಂದ 15,000 ಜನಸಂಖ್ಯೆಗೆ ಒಂದು ಸ್ಥಾನವನ್ನು ನಿಗದಿಪಡಿಸಲಾಗಿದೆ.

ದ.ಕ. ಜಿಲ್ಲೆಯ ಮೀಸಲಾತಿ ಪ್ರಕಟ ಕ್ಷೇತ್ರಗಳ ವಿವರ :
ಮಂಗಳೂರು ತಾಲೂಕಿನ 12 ಕ್ಷೇತ್ರಗಳು, ಮೂಲ್ಕಿ ತಾಲೂಕಿನ 11 ಕ್ಷೇತ್ರಗಳು, ಉಳ್ಳಾಲ ತಾಲೂಕು ಪಂಚಾಯತ್‌ನ 10 ಕ್ಷೇತ್ರಗಳು, ಬಂಟ್ವಾಳದ 24 ಕ್ಷೇತ್ರಗಳು, ಮೂಡಬಿದಿರೆಯ 11 ಕ್ಷೇತ್ರಗಳು, ಪುತ್ತೂರಿನ 11 ಕ್ಷೇತ್ರಗಳು, ಸುಳ್ಯ ತಾಲೂಕಿನ 9 ಕ್ಷೇತ್ರಗಳು, ಬೆಳ್ತಂಗಡಿ ತಾಲೂಕಿನ 21 ಕ್ಷೇತ್ರಗಳು ಹಾಗೂ ಕಡಬ ತಾಲೂಕಿನ 9 ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ.

ಈ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 01-07-2021 ರಿಂದ ಏಳು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಒಂದು ವೇಳೆ ಆಕ್ಷೇಪಣೆಗಳನ್ನು ಸಲ್ಲಿಸುವುದಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ದಿನಾಂಕ 08-07-2021 ರೊಳಗೆ ಚುನಾವಣಾ ಆಯೋಗಕ್ಕೆ ತಲುಪುವಂತೆ ಸಲ್ಲಿಸತಕ್ಕದ್ದು ಎಂದು ತಿಳಿಸಲಾಗಿದೆ.

Leave A Reply

Your email address will not be published.