ಕಡಬ: ಬಲ್ಯ ಸಮೀಪ ಸ್ಕೂಟಿ- ಓಮ್ನಿ ಡಿಕ್ಕಿ | ಬೈಕ್ ಸವಾರರಿಗೆ ಗಾಯ

ಕಡಬ: ಕುಟ್ರುಪ್ಪಾಡಿ ಗ್ರಾ.ಪಂ‌ ವ್ಯಾಪ್ತಿಯ ಬಲ್ಯ ಸಮೀಪ ಓಮಿನಿ ಕಾರು ಮತ್ತು ಸ್ಕೂಟಿ ನಡುವೆ ಅಪಘಾತ ನಡೆದು ಸ್ಕೂಟಿ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರ ನಡೆದಿದೆ.

ಅಪಘಾತದಿಂದ ಸ್ಕೂಟಿ ನಜ್ಜುಗುಜ್ಜಾಗಿದ್ದು ಓಮ್ನಿಯ ಅಡಿಗೆ ಸಿಲುಕಿಕೊಂಡಿದೆ.ಅಲಂಕಾರಿನಿಂದ ಕಡಬಕ್ಕೆ ಬರುತ್ತಿದ್ದ ಸ್ಕೂಟಿಗೆ ಕಡಬ ಕಡೆಯಿಂದ ಹೋಗುತ್ತಿದ್ದ ಓಮ್ನಿ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಬೈಕ್ ಸವಾರರಿಬ್ಬರಿಗೂ ಗಾಯಗಳಾಗಿದ್ದು ಬೈಕ್ ಸವಾರರನ್ನು ಪ್ರಾಥಮಿಕ ಚಿಕಿತ್ಸೆಗೆ ಕಡಬ ಸರ್ಕಾರಿ ಆಸ್ಪತ್ರಗೆ ಕರೆದೊಯ್ಯಲಾಗಿದೆ.

Leave A Reply

Your email address will not be published.