Day: July 1, 2021

ದೋಳ್ಪಾಡಿ : ಯುವತಿ ನಾಪತ್ತೆ, ಎಡಮಂಗಲದ ಯುವಕನೊಂದಿಗೆ ಪರಾರಿ ಶಂಕೆ

ಕಡಬ : ಕಾಣಿಯೂರು ಗ್ರಾ.ಪಂ.ವ್ಯಾಪ್ತಿಯ ದೋಳ್ಪಾಡಿ ಗ್ರಾಮದ ಕೋರೇಲು ನಿವಾಸಿ ಯುವತಿಯೋರ್ವಳು ನಾಪತ್ತೆಯಾಗಿದ್ದು,ಆಕೆ ಎಡಮಂಗಲದ ಯುವಕನೊಂದಿಗೆ ಪರಾರಿಯಾಗಿರುವ ಶಂಕೆ ವ್ಯಕ್ತಪಡಿಸಿ ಯುವತಿಯ ಅಣ್ಣ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೋರೊಲು ನಿವಾಸಿ ಲಲಿತಾ(30ವ.) ಎಂಬ ಯುವತಿಯು ಮನೆಮಂದಿ ಹೊರಗಡೆ ಹೋಗಿದ್ದ ಸಮಯದಲ್ಲಿ ಮನೆಗೆ ಬೀಗಹಾಕಿ ನಾಪತ್ತೆಯಾಗಿದ್ದು,ಆಕೆಯು ಮನೆಗೆ ಕೆಲ ಸಮಯಗಳಿಂದ ಬರುತ್ತಿದ್ದ ಎಡಮಂಗಲದ ಶಿವರಾಮ ಎಂಬಾತನ ಜತೆ ಪರಾರಿಯಾಗಿರುವ ಕುರಿತು ಶಂಕೆ ವ್ಯಕ್ತಪಡಿಸಿ ಆಕೆಯ ಅಣ್ಣ ಕೊರಗಪ್ಪ ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ.

ಉಪ್ಪಿನಂಗಡಿ ಆಟೋ ಕಳವು ಪ್ರಕರಣ: ಇಬ್ಬರ ಬಂಧನ

ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಟೋ ರಿಕ್ಷಾ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕಿನ ಬಿಳಿನೆಲೆ ಸಮೀಪದ ಬಿಳಿನೆಲೆ ಬೈಲು ನಿವಾಸಿ ಸಂತೋಷ್(18 ವ) ಹಾಗೂ ಕೇರಳದ ಪಾತೂರು ಗ್ರಾಮದ ಸೀಂತೂರು ನಿವಾಸಿ 19 ವರ್ಷದಯತಿರಾಜ್ ಕಳವು ಆರೋಪದಲ್ಲಿ ಬಂಧನಕ್ಕೊಳಗಾದವರು. ಉಪ್ಪಿನಂಗಡಿಯ ನಟ್ಟಿಬೈಲ್ ನಿವಾಸಿ ನವೀನ್ ಎಂಬವರು ತನ್ನ ಮನೆಯ ಶೆಡ್ ನಲ್ಲಿ ಜೂ.18ರಂದು ತನ್ನ ಅಟೋ ರಿಕ್ಷಾವನ್ನು ನಿಲ್ಲಿಸಿದ್ದರು. ಆದರೆ ಅದು ಜೂ.19ರಂದು ಬೆಳಗ್ಗೆ ಕಳವಾದ ಬಗ್ಗೆ‌ ಬೆಳಕಿಗೆ ಬಂದಿತ್ತು. …

ಉಪ್ಪಿನಂಗಡಿ ಆಟೋ ಕಳವು ಪ್ರಕರಣ: ಇಬ್ಬರ ಬಂಧನ Read More »

ದ.ಕ.ನಾಳೆಯಿಂದ ಸಂಜೆ 5 ರವರೆಗೆ ಅಂಗಡಿ ತೆರೆಯಲು ಅವಕಾಶ,ಶನಿವಾರ ಆದಿತ್ಯವಾರ ವೀಕೆಂಡ್ ಕರ್ಫ್ಯೂ

ದ.ಕ.ದಲ್ಲಿ ನಾಳೆಯಿಂದ ಸಂಜೆ 5 ರವರೆಗೆ ಅಂಗಡಿ ತೆರೆಯಲು ಅವಕಾಶ ಇದ್ದು,ಶನಿವಾರ ಆದಿತ್ಯವಾರ ವೀಕೆಂಡ್ ಕರ್ಫ್ಯೂ ಇರಲಿದೆ. ಕರ್ನಾಟಕ ಸರಕಾರದ ಮುಖ್ಯಕಾರ್ಯದರ್ಶಿಯವರ ಆದೇಶದಂತೆ ಜು.5 ರ ತನಕ ದಕ್ಷಿಣ ಕನ್ನಡ ಜಿಲ್ಲೆಗೆ 1ನೇ category ಯಲ್ಲಿರುವ ಜಿಲ್ಲೆಗಳಂತೆಯೇ ವಿನಾಯಿತಿ ಇರಲಿದ್ದು,ಇದರಿಂದಾಗಿ ಶುಕ್ರವಾರ ಸಂಜೆ 5 ರ ತನಕ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಇರಲಿದೆ.ಶನಿವಾರ, ಆದಿತ್ಯವಾರ ವಾರಾಂತ್ಯ ಕರ್ಫ್ಯೂ ಇರಲಿದೆ. ಕೆಲ ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಗಣನೀಯವಾಗಿ ಕಡಿಮೆಯಾಗಿದೆ. ಈ ಹಿನ್ನೆಲೆ ಇಂದು ನೂತನ …

ದ.ಕ.ನಾಳೆಯಿಂದ ಸಂಜೆ 5 ರವರೆಗೆ ಅಂಗಡಿ ತೆರೆಯಲು ಅವಕಾಶ,ಶನಿವಾರ ಆದಿತ್ಯವಾರ ವೀಕೆಂಡ್ ಕರ್ಫ್ಯೂ Read More »

ಕಡಬ: ಬಲ್ಯ ಸಮೀಪ ಸ್ಕೂಟಿ- ಓಮ್ನಿ ಡಿಕ್ಕಿ | ಬೈಕ್ ಸವಾರರಿಗೆ ಗಾಯ

ಕಡಬ: ಕುಟ್ರುಪ್ಪಾಡಿ ಗ್ರಾ.ಪಂ‌ ವ್ಯಾಪ್ತಿಯ ಬಲ್ಯ ಸಮೀಪ ಓಮಿನಿ ಕಾರು ಮತ್ತು ಸ್ಕೂಟಿ ನಡುವೆ ಅಪಘಾತ ನಡೆದು ಸ್ಕೂಟಿ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಅಪಘಾತದಿಂದ ಸ್ಕೂಟಿ ನಜ್ಜುಗುಜ್ಜಾಗಿದ್ದು ಓಮ್ನಿಯ ಅಡಿಗೆ ಸಿಲುಕಿಕೊಂಡಿದೆ.ಅಲಂಕಾರಿನಿಂದ ಕಡಬಕ್ಕೆ ಬರುತ್ತಿದ್ದ ಸ್ಕೂಟಿಗೆ ಕಡಬ ಕಡೆಯಿಂದ ಹೋಗುತ್ತಿದ್ದ ಓಮ್ನಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರರಿಬ್ಬರಿಗೂ ಗಾಯಗಳಾಗಿದ್ದು ಬೈಕ್ ಸವಾರರನ್ನು ಪ್ರಾಥಮಿಕ ಚಿಕಿತ್ಸೆಗೆ ಕಡಬ ಸರ್ಕಾರಿ ಆಸ್ಪತ್ರಗೆ ಕರೆದೊಯ್ಯಲಾಗಿದೆ.

ಚಾರ್ಮಾಡಿ ಘಾಟ್ ನ ತಿರುವಿನಲ್ಲಿ ತಡೆಗೋಡೆಗೆ ಡಿಕ್ಕಿಯಾದ ಕಾರು, ಇಬ್ಬರಿಗೆ ಗಾಯ

ಚಾರ್ಮಾಡಿ ಘಾಟಿಯಲ್ಲಿತಡೆಗೋಡೆಗೆ ಕಾರು ಡಿಕ್ಕಿಯಾದ ಪರಿಣಾಮಇಬ್ಬರಿಗೆ ಗಾಯಗಳಾದ ಬಗ್ಗೆ ವರದಿಯಾಗಿದೆ. ಮಂಗಳೂರಿನಿಂದ ಕಳಸಕ್ಕೆ ಹೋಗುತ್ತಿದ್ದಾಗ ಚಾರ್ಮಾಡಿ ಘಾಟ್ ನ ತಿರುವಿನಲ್ಲಿ ತಡೆಗೋಡೆಗೆ ಕಾರು ಅಪ್ಪಳಿಸಿದೆ. ಕಾರಿನಲ್ಲಿದ್ದ ಕಳಸ ಮೂಲದ ಇಬ್ಬರಿಗೆ ಗಾಯಗಳಾಗಿದ್ದು ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ಕಿಂಗ್‌ಪಿನ್, ಎಸ್‌ಡಿಪಿಐ ನಾಗವಾರ ಘಟಕ ಅಧ್ಯಕ್ಷ ಸೈಯದ್ ಅಬ್ಬಾಸ್ ಅರೆಸ್ಟ್ | ಗಲಭೆಯ ಹಿಂದಿನ ಎಸ್‌ಡಿಪಿಐ ಪಾತ್ರ ಬಯಲು !

ಬೆಂಗಳೂರು: ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ಕಿಂಗ್‌ಪಿನ್, ಎಸ್‌ಡಿಪಿಐ ನಾಗವಾರ ಘಟಕ ಅಧ್ಯಕ್ಷ ಸೈಯದ್ ಅಬ್ಬಾಸ್ (38) ಎಂಬಾತನನ್ನು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಬಂಧಿಸಿದೆ. ಅಂದು ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹೋದರ ಸಂಬಂಧಿ ನವೀನ್ ಎಂಬಾತ ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಹೇಳಿಕೆ ಅಪ್‌ಲೋಡ್ ಮಾಡಿದ್ದ. ಈ ಹಿನ್ನೆಲೆಯಲ್ಲಿ 2020ರ ಆಗಸ್ಟ್ 11ರಂದು ಹಳ್ಳಿ, ಕೆಜಿ ಹಳ್ಳಿ ಠಾಣೆ ಹಾಗೂ ಶಾಸಕರ ಮನೆಗೆ ಬೆಂಕಿ ಹಚ್ಚಲು.ಆ ತಂಡ ಬಂದಿತ್ತು. ಅಲ್ಲಿ …

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ಕಿಂಗ್‌ಪಿನ್, ಎಸ್‌ಡಿಪಿಐ ನಾಗವಾರ ಘಟಕ ಅಧ್ಯಕ್ಷ ಸೈಯದ್ ಅಬ್ಬಾಸ್ ಅರೆಸ್ಟ್ | ಗಲಭೆಯ ಹಿಂದಿನ ಎಸ್‌ಡಿಪಿಐ ಪಾತ್ರ ಬಯಲು ! Read More »

ಹೆಂಡತಿಯನ್ನು 30 ಕೆ.ಜಿ ಕಬ್ಬಿಣದ ಚೈನ್ ನಿಂದ ಕಟ್ಟಿಹಾಕಿದ ಪತಿರಾಯ

ದಂಪತಿಗಳ ನಡುವೆ ಅನುಮಾನ ಸಲ್ಲದು ಎನ್ನುತ್ತಾರೆ. ಆದರೆ ಕೈ ಹಿಡಿದ ಹೆಂಡತಿ ಮೇಲೇ ಅನುಮಾನ ಬೆಳೆಸಿಕೊಂಡ ಗಂಡನೊಬ್ಬ ಆಕೆಯನ್ನು 30 ಕೆಜಿ ತೂಕದ ಕಬ್ಬಿಣದ ಚೈನ್‌ನಿಂದ ಕಟ್ಟಿಟ್ಟಿದ್ದ ಘಟನೆ ರಾಜಸ್ಥಾನದಲ್ಲಿ ಬಯಲಾಗಿದೆ. ರಾಜಸ್ಥಾನದ ಪ್ರತಾಪ್‌ಗಢ ಜಿಲ್ಲೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಜೀವಾ ಬಾಯ್ ಹೆಸರಿನ ಮಹಿಳೆಗೆ ಮದುವೆಯಾಗಿ ಒಬ್ಬ ಮಗ ಕೂಡ ಇದ್ದಾನೆ. ಆಕೆಯ ತಾಯಿ ಮನೆಯಲ್ಲಿ ಒಬ್ಬಂಟಿಯಾಗಿದ್ದು, ಆಕೆಯ ಸಹಾಯಕ್ಕೆಂದು ಜೀವಾ ಆಗಾಗ ತಾಯಿ ಮನೆಗೆ ಹೋಗಿ ಬರುತ್ತಿದ್ದಳು. ಇದೇ ಕಾರಣಕ್ಕಾಗಿ ಗಂಡನಿಗೆ ಆಕೆಯ ಮೇಲೆ …

ಹೆಂಡತಿಯನ್ನು 30 ಕೆ.ಜಿ ಕಬ್ಬಿಣದ ಚೈನ್ ನಿಂದ ಕಟ್ಟಿಹಾಕಿದ ಪತಿರಾಯ Read More »

ಮಾರುಕಟ್ಟೆಗೆ ಬರಲಿದೆ ಬ್ಯಾಗ್ ಗಳಲ್ಲಿ ‘ಮರಳು’..ಸಚಿವ ನಿರಾಣಿ ಪ್ರಯತ್ನಕ್ಕೆ ಸಿಗಲಿದೆಯೇ ರಾಜ್ಯದ ಜನತೆಯ ಸ್ಪಂದನೆ

ಒಂದು ಕಾಲದಲ್ಲಿ ಹೇರಳವಾಗಿ ಸಿಗುತ್ತಿದ್ದ ಮರಳಿಗೆ ಇಂದು ಸಂಚಾಕಾರ ಬಂದಿದೆ. ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಮರಳು ದಂಧೆಗಳಿಗೆ ತಕ್ಕಮಟ್ಟಿಗೆ ಬ್ರೇಕ್ ಬಿದ್ದ ಕಾರಣ ಮರಳು ಸಿಗುವುದು ಸ್ವಲ್ಪ ಕಷ್ಟ ಎಂದುಕೊಳ್ಳುತ್ತಿರುವ ಜನತೆಗೆ ಒಂದು ಹೊಸ ಸುದ್ದಿ ಖುಷಿಯುಂಟು ಮಾಡಿದೆ. ಹೌದು, ಇನ್ನೂ ಮುಂದೆ ಬ್ಯಾಗ್ ಗಳಲ್ಲಿ ಸಿಗಲಿದೆಯಂತೆ ಮರಳು. ಸಿಮೆಂಟ್ ಸಿಗುವ ಹಾಗೆಯೇ ಮರಳು ಕೂಡಾ ಮಾರುಕಟ್ಟೆಯಲ್ಲಿ 50 ಕೆಜಿ ಬ್ಯಾಗ್ ಗಳಲ್ಲಿ ಸಿಗಲಿದೆ, ಅತೀ ಕಡಿಮೆ ಬೆಲೆಯಲ್ಲಿ ಎ, ಬಿ, ಸಿ ಎಂದು ವಿಂಗಡಿಸಿ ಮೂರು …

ಮಾರುಕಟ್ಟೆಗೆ ಬರಲಿದೆ ಬ್ಯಾಗ್ ಗಳಲ್ಲಿ ‘ಮರಳು’..ಸಚಿವ ನಿರಾಣಿ ಪ್ರಯತ್ನಕ್ಕೆ ಸಿಗಲಿದೆಯೇ ರಾಜ್ಯದ ಜನತೆಯ ಸ್ಪಂದನೆ Read More »

ಸದ್ಯದಲ್ಲೇ ಬರಲಿದೆ 12 ವರ್ಷ ಮೇಲ್ಪಟ್ಟವರಿಗೆ “ಸೂಜಿ ಮುಕ್ತ” ಕೊರೋನ ಲಸಿಕೆ | ಭಾರತದ ಐದನೇ ಲಸಿಕೆಯಾಗಿ ಲಗ್ಗೆ ಇಡುತ್ತಿದೆ ವಿಶ್ವದ ಮೊದಲ ಪ್ಲಾಸ್ಮಿಡ್ ಡಿಎನ್ಎ ಲಸಿಕೆ

ಭಾರತದಲ್ಲಿ ಶೀಘ್ರದಲ್ಲೇ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೊರೋನಾ ಲಸಿಕೆ ಲಭ್ಯವಾಗುವ ಸಾಧ್ಯತೆಯಿದೆ. ಬೆಂಗಳೂರು ಮೂಲದ ಔಷಧೀಯ ಕಂಪನಿ ಜೈಡಸ್ ಕ್ಯಾಡಿಲಾ ತನ್ನ ಲಸಿಕೆಯನ್ನು 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ತುರ್ತು ಬಳಕೆಗಾಗಿ ಅನುಮತಿ ನೀಡುವಂತೆ ಕೋರಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಅರ್ಜಿ ಸಲ್ಲಿಸಿದೆ. ಜೈಡಸ್ ಕ್ಯಾಡಿಲಾ ತನ್ನ ZyCoV-D 3-ಡೋಸ್ ಕೋವಿಡ್ ಶಾಟ್‌ಗಾಗಿ ತುರ್ತು ಬಳಕೆಯ ಅನುಮೋದನೆಯನ್ನು ಕೋರಿದ್ದಾರೆ. ಅದು “ವಿಶ್ವದ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಲಸಿಕೆ” ಆಗಿದೆ. …

ಸದ್ಯದಲ್ಲೇ ಬರಲಿದೆ 12 ವರ್ಷ ಮೇಲ್ಪಟ್ಟವರಿಗೆ “ಸೂಜಿ ಮುಕ್ತ” ಕೊರೋನ ಲಸಿಕೆ | ಭಾರತದ ಐದನೇ ಲಸಿಕೆಯಾಗಿ ಲಗ್ಗೆ ಇಡುತ್ತಿದೆ ವಿಶ್ವದ ಮೊದಲ ಪ್ಲಾಸ್ಮಿಡ್ ಡಿಎನ್ಎ ಲಸಿಕೆ Read More »

6 ತಿಂಗಳಲ್ಲಿ 1,242 ಸಹಾಯಕ ಪ್ರಾಧ್ಯಾಪಕರು ಹಾಗೂ 310 ಪ್ರಾಂಶುಪಾಲರ ನೇರ ನೇಮಕಾತಿ | ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಇನ್ನು ಆರು ತಿಂಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 1,242 ಸಹಾಯಕ ಪ್ರಾಧ್ಯಾಪಕರು ಹಾಗೂ 310 ಪ್ರಾಂಶುಪಾಲರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.  ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಸ್ತಾವನೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ಆರು ತಿಂಗಳ ಒಳಗಾಗಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಲ್ಲದೇ, ಎಲ್ಲ ಪ್ರಕ್ರಿಯೆ …

6 ತಿಂಗಳಲ್ಲಿ 1,242 ಸಹಾಯಕ ಪ್ರಾಧ್ಯಾಪಕರು ಹಾಗೂ 310 ಪ್ರಾಂಶುಪಾಲರ ನೇರ ನೇಮಕಾತಿ | ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ Read More »

error: Content is protected !!
Scroll to Top