ಅಪಾಯದ ಮುನ್ಸೂಚನೆ ಕೊಟ್ಟ ಶೌರ್ಯ ವಿಪತ್ತು ನಿರ್ವಹಣಾ ಘಟಕ, ಉಜಿರೆ ಪಂಚಾಯತ್ ಉಪಾಧ್ಯಕ್ಷರ ಜೊತೆ ಸೇರಿ ತಾತ್ಕಾಲಿಕ ರಕ್ಷಣಾ ವ್ಯವಸ್ಥೆ.

ಜೂ, 30, ಧರ್ಮಸ್ಥಳ : ಧರ್ಮಸ್ಥಳ-ಉಜಿರೆ ರಾಜ್ಯ ಹೆದ್ದಾರಿಯಲ್ಲಿ ಸಣ್ಣದೊಂದು ಬಿರುಕು ಕಾಣಿಸಿಕೊಂಡಿದ್ದು ಒಳಭಾಗ ಪೂರ್ತಿಯಾಗಿ ಟೊಳ್ಳಾಗಿದ್ದು ದಿನನಿತ್ಯ ಸಾವಿರಾರು ವಾಹನಗಳು ಓಡಾಡುವ ಜಾಗವಾದ್ದರಿಂದ ಅಪಾಯದ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಸ್ಥಳೀಯ ಪಂಚಾಯತ್ ಗಮನಕ್ಕೆ ತಂದು ಸಮಯಪ್ರಜ್ಞೆ ಮೆರೆದರು.

ಘಟನೆಯ ವಿವರ : ನಡ-ಕನ್ಯಾಡಿ ಘಟಕದ ಶೌರ್ಯ ಸ್ವಯಂಸೇವಕ ಮಂಜುನಾಥ್ ಧರ್ಮಸ್ಥಳದಿಂದ ಉಜಿರೆ ಕಡೆ ತೆರಳುತ್ತಿದ್ದಾಗ ರಸ್ತೆಯ ಮಧ್ಯಭಾಗದಲ್ಲಿ ಸಣ್ಣ ಗುಳಿಯೊಂದನ್ನು ಗಮನಿಸಿದ್ದಾರೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಒಳಭಾಗ ಪೂರ್ತಿಯಾಗಿ ಟೊಳ್ಳಾಗಿದ್ದು ಅಪಾಯದ ಸ್ಥಿತಿಯಲ್ಲಿತ್ತು. ಕೂಡಲೆ ಈ ವಿಚಾರವನ್ನು ಧರ್ಮಸ್ಥಳ ಶೌರ್ಯ ತಂಡದ ಸಂಯೋಜಕ ಸ್ವಸ್ತಿಕ್ ಕನ್ಯಾಡಿ ಅವರಿಗೆ ಮಾಹಿತಿ ರವಾನಿಸಿದರು.

ಕೂಡಲೆ ಸ್ಥಳೀಯ ಶೌರ್ಯ ಸ್ವಯಂಸೇವಕರಾದ ಸಚಿನ್ ಕಲ್ಮಂಜ ಹಾಗೂ ಶಿವಪ್ರಸಾದ್ ಕಜೆ ಅವರೊಂದಿಗೆ ಸ್ಥಳಕ್ಕೆ ಭೇಟಿ ಕೊಟ್ಟಾಗ ತಳಭಾಗದಲ್ಲಿ ಮೋರಿ ಇರುವುದು ಕಂಡು ಬಂದಿದೆ.

ಕೂಡಲೆ ಈ ವಿಚಾರವನ್ನು ಸ್ಥಳೀಯ ಪಂಚಾಯತ್ (ಉಜಿರೆ ಗ್ರಾಮ ಪಂಚಾಯತ್ ) ಉಪಾಧ್ಯಕ್ಷ ರವಿ ಬರಮೇಲು ಅವರಿಗೆ ತಿಳಿಸಿದಾಗ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು ಮತ್ತು ಸ್ಥಳದಲ್ಲೇ ಶಾಸಕರ ಗಮನಕ್ಕೂ ತಂದರು. ಸದ್ಯ ಉಜಿರೆ ಪಂಚಾಯತ್ ನಿಂದ ಎರಡೂ ಬದಿಗಳಿಗೆ ಬ್ಯಾರಿಕೇಡ್ ಅಳವಡಿಸಲಾಗಿದೆ.

ಇದೇ ಮಾರ್ಗವಾಗಿ ಸಾಗುತ್ತಿದ್ದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿಗಳಾದ ಜಯಕರ್ ಶೆಟ್ಟಿ ಹಾಗೂ ಸತೀಶ್ ಅವರೂ ಸ್ಥಳವನ್ನು ಪರಿಶೀಲಿಸಿದರು.

ವರದಿ : ಸ್ವಸ್ತಿಕ್ ಕನ್ಯಾಡಿ

Leave A Reply

Your email address will not be published.