ಬ್ಯಾಟರಿ ನುಂಗಿ ಹೆಣ್ಣು ಮಗು ಸಾವು..ಎಚ್ಚರವಿರಲಿ ಪೋಷಕರೇ!ಆಕೆಗೆ ಅರಿವಿರಲಿಲ್ಲ ಬ್ಯಾಟರಿ ತನ್ನ ಜೀವ ನುಂಗುವುದೆಂದು!

ಮಕ್ಕಳ ಬಗೆಗೆ ಗಮನಹರಿಸುವುದು ಪೋಷಕರ ಕರ್ತವ್ಯ, ಅದರಲ್ಲೂ ಸಣ್ಣ ಮಕ್ಕಳಿದ್ದರೆ ಇನ್ನೂ ಹೆಚ್ಚು ಗಮನಹರಿಸುವುದು ಉತ್ತಮ. ಪೋಷಕರ ನಿರ್ಲಕ್ಷ್ಯಕ್ಕೆ ಜಗವನ್ನೇ ಅರಿಯದ ಕಂದಮ್ಮಗಳು ತಮ್ಮ ಜೀವವನ್ನು ತೆತ್ತರೆ? ಹೌದು. ಇಂತಹದೊಂದು ಘಟನೆ ವಿದೇಶದಲ್ಲಿ ನಡೆದಿದೆ.

ಇಂಗ್ಲೆಂಡ್ ನ ಸ್ಟೋಕ್ ಆನ್ ಟ್ರೆಂಟ್‌ನಲ್ಲಿ ವಾಸಿಸುವ ಎರಡು ವರ್ಷದ ಹಾರ್ಪರ್ ಎಂಬ ಹೆಸರಿನ ಮುದ್ದಾದ ಹೆಣ್ಣು ಮಗು ಹೆತ್ತವರ ನಿರ್ಲಕ್ಷ್ಯದಿಂದಾಗಿಯೇ ರಿಮೋಟ್ ಬ್ಯಾಟರಿಯನ್ನು ನುಂಗಿ ಸಾವನ್ನಪ್ಪಿದೆ.

ಆಕೆ ಬ್ಯಾಟರಿ ನುಂಗಿದ್ದಾಳೆಂದು ಗೊತ್ತಾಗಿದೆ. ಆ ಬಳಿಕ ಮಗುವಿನ ಸ್ಥಿತಿ ಹದಗೆಡುತ್ತಾ ಬಂದಿದೆ. ತಕ್ಷಣ ಆಸ್ಪತ್ರೆ ಸಾಗಿಸಿದರು ಮಗುವಿನ ಜೀವ ಉಳಿಸಲಾಗಲಿಲ್ಲ.

ಮಗು ಕೋಣೆಯೊಳಗೆ ಒಬ್ಬಳೇ ತನ್ನ ಪಾಡಿಗೆ ತಾನು ಆಟವಾಡುತ್ತಿತ್ತು. ಮಗುವಿನ ಚಲನವಲನದಲ್ಲಿ ವ್ಯತ್ಯಾಸ ಕಂಡುಕೊಂಡ ಪೋಷಕರು ಬಂದು ನೋಡಿದಾಗ ಏನನ್ನೋ ನುಂಗಿದ್ದಾಳೆಂದು ಧೃಢಪಡಿಸುವಷ್ಟರಲ್ಲೇ ಆಕೆಯ ತಲೆ ಹಿಂದಕ್ಕೆ ವಾಲಿತು. ಬಾಯಿಯಿಂದ ರಕ್ತ ಬರಲು ಪ್ರಾರಂಭಿಸಿತು. ಗಾಬರಿಯಿಂದ ಕೆಲವೇ ನಿಮಿಷದಲ್ಲಿ ಆಸ್ಪತ್ರೆಗೆ ದಾಖಲಿಸಿದರಾದರೂ,ಅಷ್ಟರಲ್ಲಿ ಮಗುವಿನ ಅನ್ನನಾಳವೇ ಸುಟ್ಟು ಹೋಗಿ, ವೈದ್ಯರು ಮಗು ಮೃತಪಟ್ಟಿದೆ ಎಂದು ವರದಿ ನೀಡಿದರು.

ಎಚ್ಚರವಿರಲಿ ಪೋಷಕರೇ, ತನಗೆ ಅರಿವಿಲ್ಲದೆಯೇ ಆ ಬಾಲೆ ಬ್ಯಾಟರಿ ನುಂಗಿ ಇಹಲೋಕ ತ್ಯಜಿಸಿದೆ. ಇತ್ತ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಕಳೆದು ಹೋದ ಜೀವ ಮತ್ತೆ ಬಾರದು, ಇನ್ನೆಂದಿಗೂ ಇಂತಹ ನಿರ್ಲಕ್ಷ್ಯ ಯಾವ ಪೋಷಕರೂ ತೋರದಿರಲಿ ಎಂಬುವುದೇ ಈ ವರದಿಯ ಆಶಯ.

Leave A Reply

Your email address will not be published.