ಕೊರೋನಾದ ಎಲ್ಲಾ ರೂಪಾಂತರಿಗಳಿಗೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಪರಿಣಾಮಕಾರಿ | ಕೇಂದ್ರ ಸಚಿವಾಲಯ ಮಾಹಿತಿ

ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳು ಕೊರೋನಾ ರೂಪಾಂತರಿಗಳಾದ ಆಲ್ಫಾ, ಬೀಟಾ, ಗಾಮಾ ಹಾಗೂ ಡೆಲ್ಟಾಗಳ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐಸಿಎಂಆರ್ ನಿರ್ದೇಶಕ ಡಾ. ಬಲರಾಂ ಭಾರ್ಗವ, ಕೊರೊನಾ ವೈರಸ್ ಸೋಂಕಿಗೆ ನಾಲ್ಕು ರೂಪಾಂತರವಿದೆ. ಅವು ಯಾವುವೆಂದರೆ ಆಲ್ಫಾ, ಬೀಟಾ, ಗಾಮಾ ಹಾಗೂ ಡೆಲ್ಟಾ. ಈಗ ದೇಶದಲ್ಲಿ ಬರುತ್ತಿರುವ ಡೆಲ್ಟಾ ಪ್ಲಸ್ ರೂಪಾಂತರಿಯು ಡೆಲ್ಟಾದ ವಂಶಾವಳಿಯಾಗಿದೆ.

ಕೊರೊನಾದ ವಿವಿಧ ರೂಪಾಂತರಿಗಳ ತೀವ್ರತೆಯನ್ನು ಕಡಿಮೆ ಮಾಡುವ ಸಾಮರ್ಥ್ಯ ಕೊರೊನಾ ಲಸಿಕೆಗಳಿಗಿದೆ. ಕೊವ್ಯಾಕ್ಸಿನ್ ಆಲ್ಫಾ ರೂಪಾಂತರದೊಂದಿಗೆ ಬದಲಾಗೋದಿಲ್ಲ. ಅದು ತನ್ನ ಸ್ಥಿತಿಯಲ್ಲೇ ಇರಲಿದೆ ಎಂದು ಹೇಳಿದ್ದಾರೆ.

ಕೋವಿಶೀಲ್ಡ್ ಆಲ್ಫಾದೊಂದಿಗೆ ಕೊಂಚ ಅಂದರೆ 2.5 ಪಟ್ಟು ಕಡಿಮೆಯಾಗುತ್ತದೆ. ಡೆಲ್ಟಾ ರೂಪಾಂತರಿಗಳ ವಿರುದ್ಧ ಲಸಿಕೆಯು ಪರಿಣಾಮಕಾರಿಯಾಗಿದೆ ಎಂದರು.

ಇನ್ನು ಡೆಲ್ಟಾ ಪ್ಲಸ್ ರೂಪಾಂತರಿಯ ಬಗ್ಗೆ ಇದೇ ವೇಳೆ ಮಾತನಾಡಿದ ಅವರು, ಪ್ರಸ್ತುತ 12 ದೇಶಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಕಂಡು ಬಂದಿದೆ. ಭಾರತದ 10 ರಾಜ್ಯಗಳಲ್ಲಿ ಸದ್ಯ 48 ಇಂತಹ ಕೇಸುಗಳು ವರದಿಯಾಗಿದೆ. ಅವುಗಳನ್ನ ಸ್ಥಳೀಕರಿಸಲಾಗಿದೆ ಹಾಗೂ ಅವರನ್ನು ಪ್ರತ್ಯೇಕಿಸಲಾಗಿದೆ ಎಂದು ಹೇಳಿದರು.

ಸುಮ್ಮನೆ ಲಸಿಕೆಗಳ ವಿರುದ್ಧ ಬೇಡದ ವಿಚಾರಗಳಿಗೆ ಕಿವಿಗೊಡದೆ, ಎಲ್ಲರೂ ಲಸಿಕೆ ಪಡೆದುಕೊಂಡರೆ ಕೊರೋನಾ ವಿರುದ್ಧದ ಹೋರಾಟದಲ್ಲಿ ಜಯ ನಿಶ್ಚಿತ.

Leave A Reply

Your email address will not be published.