Day: June 22, 2021

ನಾಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಚರಿಸಲಿದೆ ಸರ್ಕಾರಿ, ಖಾಸಗಿ ಬಸ್ಸು…ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಹೊರಡಿಸಿದ ಹೊಸ ಮಾರ್ಗಸೂಚಿಯಲ್ಲೇನಿದೆ?

ಜಿಲ್ಲೆಯಾದ್ಯಂತ ನಾಳೆಯಿಂದ ಮಧ್ಯಾಹ್ನ 2ಗಂಟೆಯ ವರೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆಯಲು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅನುಮತಿಯ ಬೆನ್ನಲ್ಲೇ ಜಿಲ್ಲೆಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳ ಓಡಾಟಕ್ಕೆ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಅವರು ಅನುಮತಿ ನೀಡಿದ್ದು, ಹೊಸ ಮಾರ್ಗಸೂಚಿಯನ್ನು ರಚಿಸಿದ್ದಾರೆ. ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳ ಓಡಾಟಕ್ಕೆ ಈಗಾಗಲೇ ಅನುಮತಿ ನೀಡಿದ್ದು, ಸೋಮವಾರದಿಂದ ಶುಕ್ರವಾರ ದವರೆಗೆ ಜಿಲ್ಲೆಯಲ್ಲಿ ಸುಮಾರು 50%ನಷ್ಟು ಪ್ರಯಾಣಿಕರಿಗೆ, ಸಾಮಾಜಿಕ ಅಂತರವನ್ನು ಕಾಯಿದುಕೊಂಡು, ಮಾಸ್ಕ್ ಧರಿಸಿ ಬಸ್ಸಿನಲ್ಲಿ ಸಂಚಾರಕ್ಕೆ ಬೆಳಿಗ್ಗೆ …

ನಾಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಚರಿಸಲಿದೆ ಸರ್ಕಾರಿ, ಖಾಸಗಿ ಬಸ್ಸು…ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಹೊರಡಿಸಿದ ಹೊಸ ಮಾರ್ಗಸೂಚಿಯಲ್ಲೇನಿದೆ? Read More »

ಸದ್ಯಕ್ಕೆ ಕಾಲೇಜು ಮಾತ್ರ ಆರಂಭ | ಷರತ್ತುಗಳು ಅನ್ವಯ ಎಂದ ಸಿಎಂ ಯಡಿಯೂರಪ್ಪ

ಬೆಂಗಳೂರು : ರಾಜ್ಯದಲ್ಲಿ ಕಾಲೇಜುಗಳನ್ನು ಮಾತ್ರ ಆರಂಭಿಸಲು ಚಿಂತನೆ ನಡೆಸಲಾಗಿದ್ದು, 18 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಿದ ನಂತರ ಕಾಲೇಜುಗಳು ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಆದರೆ 18 ವರ್ಷದ ಕೆಳಿಗನ ಮಕ್ಕಳಿಗೆ ಲಸಿಕೆ ಬಾರದಿರುವುದರಿಂದ 10ನೇ ತರಗತಿಯವರೆಗೆ ಆರಂಭಿಸುವ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಡಾ.ದೇವಿ ಪ್ರಸಾದ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ವರದಿ ಸ್ವೀಕರಿಸಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ತಜ್ಞರ ಸಮಿತಿ ಹಲವಾರು ಸಲಹೆಗಳನ್ನು ನೀಡಿದೆ. 3ನೇ …

ಸದ್ಯಕ್ಕೆ ಕಾಲೇಜು ಮಾತ್ರ ಆರಂಭ | ಷರತ್ತುಗಳು ಅನ್ವಯ ಎಂದ ಸಿಎಂ ಯಡಿಯೂರಪ್ಪ Read More »

ಬಡ ಇಂಜಿನಿಯರಿಂಗ್ ವಿದ್ಯಾರ್ಥಿಯ ಬದುಕು ಬದಲಾಯಿಸಿದ ಸಾಮಾಜಿಕ ಜಾಲತಾಣ..ಸೈಕಲ್ನಲ್ಲಿ ಬರುತ್ತಿದ್ದ ಡೆಲಿವರಿ ಬಾಯ್ ಗೆ ಬೈಕ್ ಗಿಫ್ಟ್ ನೀಡಿದ ನೆಟ್ಟಿಗರು

ಹೈದರಬಾದ್: ಆತನ ಹೆಸರು ಮಹಮ್ಮದ್ ಅಖಿಲ್. ಡೆಲಿವರಿ ಬಾಯ್ ಆಗಿ ಪಾರ್ಟ್’ಟೈಮ್ ಕೆಲಸ ಮಾಡಿಕೊಂಡಿದ್ದಾನೆ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಆತನದ್ದು 7 ಜನರ ಕುಟುಂಬ. 7 ಜನರಿದ್ದರೂ ಕುಟುಂಬದ ಸಂಪೂರ್ಣ ಜವಾಬ್ದಾರಿ ಈತನ ಮೇಲಿದೆ. ಆರ್ಡರ್ ಬಂದಾಗ ಸೈಕಲ್’ನಲ್ಲಿ ತರಕಾರಿ ಹಾಗೂ ಆಹಾರ ವಸ್ತುಗಳನ್ನು ಡೆಲಿವರಿ ಮಾಡಿ ಜೀವನ ಸಾಗಿಸುತ್ತಿದ್ದ. ಇದೀಗ ಸಾಮಾಜಿಕ ಜಾಲತಾಣ ಆತನ ಜೀವನ ಬದಲಾಯಿಸಿದ್ದು ಸೈಕಲ್ ನಲ್ಲಿ ಡೆಲಿವರಿ ಕೊಡುತ್ತಿದ್ದ ಯುವಕ ದ್ವಿಚಕ್ರವಾಹನದಲ್ಲಿ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಆತನ ಬಾಳು ಹಸನಾಗಿ ಸಿದ್ದು ಒಂದು …

ಬಡ ಇಂಜಿನಿಯರಿಂಗ್ ವಿದ್ಯಾರ್ಥಿಯ ಬದುಕು ಬದಲಾಯಿಸಿದ ಸಾಮಾಜಿಕ ಜಾಲತಾಣ..ಸೈಕಲ್ನಲ್ಲಿ ಬರುತ್ತಿದ್ದ ಡೆಲಿವರಿ ಬಾಯ್ ಗೆ ಬೈಕ್ ಗಿಫ್ಟ್ ನೀಡಿದ ನೆಟ್ಟಿಗರು Read More »

ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲ್ಲಲೆತ್ನಿಸಿದ ಅಪ್ಪ | ಆರೋಪಿ ಸೆರೆ

ಸಾಕು ದನಗಳನ್ನು ಹೊರಗಡೆ ಕಟ್ಟಿ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿ ತಂದೆಯೇ ತನ್ನ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾದ ಘಟನೆ ಮಂಗಳೂರಿನ ಜಪ್ಪಿನಮೊಗರು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ. ಕೊಪ್ಪರಿಗೆಗುತ್ತು ನಿವಾಸಿ ಆರೋಪಿ ವಿಶ್ವನಾಥ ಶೆಟ್ಟಿ (52) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಾಮೀತ್ ಶೆಟ್ಟಿ (25) ಸುಟ್ಟ ಗಾಯಗೊಂದಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಾಕುದನಗಳನ್ನು ಹೊರಗಡೆ ಕಟ್ಟಿಹಾಕಿದ್ದ ಬಗ್ಗೆ ಸ್ವಾಮೀತ್ ಶೆಟ್ಟಿಯ ತಂದೆ ವಿಶ್ವನಾಥ ಶೆಟ್ಟಿ ತಕರಾರು ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ …

ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲ್ಲಲೆತ್ನಿಸಿದ ಅಪ್ಪ | ಆರೋಪಿ ಸೆರೆ Read More »

ಬಂಟ್ವಾಳ : ಕಟ್ಟತ್ತಿಲ ಹಿಂದು ರುದ್ರ ಭೂಮಿ ಸಮೀಪ ನೀರಿನ ಟ್ಯಾಂಕ್ ನಿರ್ಮಾಣ | ಸಾರ್ವಜನಿಕರಿಂದ ಆಕ್ಷೇಪ

ಬಂಟ್ವಾಳ ತಾಲೂಕಿನ ಕಟ್ಟತ್ತಿಲ ಪಾಲ್ತಾಜೆ ಎಂಬಲ್ಲಿಯ ಪ‌.ಜಾತಿ ಕಾಲೋನಿಯ ಸಮೀಪ ಅನಾದಿಕಾಲದಿಂದಲೂ ಕಾಲೋನಿಯ ಮೃತರ ಅಂತ್ಯಸಂಸ್ಕಾರಗಳನ್ನು ನಡೆಸಿಕೊಂಡು ಬರುತ್ತಿದ್ದು ಇದೀಗ ಸಾಲೆತ್ತೂರು ಗ್ರಾಮ ಪಂಚಾಯತ್ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಲು ಹೊರಟಿರುವುದನ್ನು ಆಕ್ಷೇಪಿಸಿ ಸ್ಥಳೀಯ ಗ್ರಾಮಸ್ಥರ ಸಹಿಯೊಂದಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಾಲೆತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹಸೈನಾರ್ ರವರಿಗೆ ಮನವಿಯನ್ನು ಸಲ್ಲಿಸಿ ಟ್ಯಾಂಕ್ ನಿರ್ಮಾಣದ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಪ.ಜಾತಿ ಕಾಲೋನಿಯ ಸಮೀಪವಿರುವ ಹಿಂದು ರುದ್ರ ಭೂಮಿ ಹತ್ತಿರ ಸಾರ್ವಜನಿಕ ಕುಡಿಯುವ ನೀರಿನ …

ಬಂಟ್ವಾಳ : ಕಟ್ಟತ್ತಿಲ ಹಿಂದು ರುದ್ರ ಭೂಮಿ ಸಮೀಪ ನೀರಿನ ಟ್ಯಾಂಕ್ ನಿರ್ಮಾಣ | ಸಾರ್ವಜನಿಕರಿಂದ ಆಕ್ಷೇಪ Read More »

ನಾಳೆಯಿಂದ(ಜೂ.23) ಎಲ್ಲಾ ಅಂಗಡಿಗಳು ಓಪನ್ – ಸಚಿವ ಕೋಟ ಶ್ರೀನಿವಾಸ ಪೂಜಾರಿ | ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅವಕಾಶ

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಜೂ. 23ರಿಂದ ಬೆಳಗ್ಗೆಯಿಂದ ಮಧ್ಯಾಹ್ನ 2ರವರೆಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ. ಜವಳಿ, ಝೆರಾಕ್ಸ್ , ಚಪ್ಪಲಿ  ಸೇರಿದಂರೆ ಇತರ ವ್ಯಾಪಾರಸ್ಥರು ಬದುಕು ಕಟ್ಟಿಕೊಳ್ಳಲು ಕಷ್ಟ ಎಂಬ ದೂರಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ ಕಾರಣ ನಾಳೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ‌. …

ನಾಳೆಯಿಂದ(ಜೂ.23) ಎಲ್ಲಾ ಅಂಗಡಿಗಳು ಓಪನ್ – ಸಚಿವ ಕೋಟ ಶ್ರೀನಿವಾಸ ಪೂಜಾರಿ | ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅವಕಾಶ Read More »

ಬೈಕ್’ಗೆ ಬೊಲೆರೋ ಡಿಕ್ಕಿ: ಬೈಕ್ ಸವಾರ ಸಾವು

ಬ್ರಹ್ಮಾವರ: ಬೊಲೆರೋ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ನಿನ್ನೆ ತಾಲೂಕಿನ ನಡೂರಿನಲ್ಲಿ ನಡೆದಿದೆ. ಕಾಡೂರಿನ ದಿನಸಿ ಅಂಗಡಿ ಮಾಲೀಕ, ನಡೂರು ನಿವಾಸಿ ಹರೀಶ (56) ಮೃತಪಟ್ಟವರು. ಇವರು ನಿನ್ನೆ ಮುಂಜಾನೆ ತನ್ನ ಅಂಗಡಿಯಿಂದ ಮನೆ ಕಡೆ ಬರುತ್ತಿದ್ದಾಗ ಬಾರ್ಕೂರಿನಿಂದ ಮಂದಾರ್ತಿಯಿಂದ ಬಂದ ಬೊಲೆರೋ ವಾಹನ ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿ ರಭಸಕ್ಕೆ ಕ್ಕೆ ಹರೀಶ್ ರಸ್ತೆಗೆ ಎನೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಬ್ರಹ್ಮಾವರ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಮೃತರ …

ಬೈಕ್’ಗೆ ಬೊಲೆರೋ ಡಿಕ್ಕಿ: ಬೈಕ್ ಸವಾರ ಸಾವು Read More »

ಬೆಂಗಳೂರಿನಲ್ಲಿ ಟಿಪ್ಪರ್ – ಬೈಕ್ ನಡುವೆ ಅಪಘಾತ | ಕರಾಯದ ನಿತೇಶ್ ಮೃತ್ಯು

ಬೆಂಗಳೂರಿನಲ್ಲಿ ಟಿಪ್ಪರ್ -ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೆಳ್ತಂಗಡಿ ತಾಲೂಕಿನ ಕರಾಯದ‌ ನಿವಾಸಿಯೋರ್ವರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಕರಾಯ ಗ್ರಾಮದ ಕೊಂಬೆಟ್ಟಿಮಾರು ನಿವಾಸಿ ವಿಶ್ವನಾಥ ನಾಯ್ಕರ ಪುತ್ರ ನಿತೇಶ್ ಎಂದು ಗುರುತಿಸಲಾಗಿದೆ.ಬೆಂಗಳೂರಿನ‌ ಉದ್ಯೋಗದಲ್ಲಿದ್ದ ಅವರು ಲಾಕ್‌ಡೌನ್ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು.ಎರಡು ದಿನದ ಹಿಂದೆಯಷ್ಟೇ ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ಪುನಃ ಉದ್ಯೋಗಕ್ಕೆ ಬೆಂಗಳೂರಿಗೆ ತೆರಳಿದ್ದರು.

ನಾಪತ್ತೆಯಾಗಿದ್ದ ಸೇನಾ ತರಬೇತಿ ಪಡೆದ ಯುವಕ ನದಿ ಕಿನಾರೆಯಲ್ಲಿ ಶವವಾಗಿ ಪತ್ತೆ

ಮಂಗಳೂರು : ಎರಡು ದಿನದ ಹಿಂದೆ ನಾಪತ್ತೆಯಾಗಿದ್ದ ಸುರತ್ಕಲ್ ಸಮೀಪದ ಚೊಕ್ಕಬೆಟ್ಟು ನಿವಾಸಿ ಶಹಾನ್ (19) ಎಂಬವರ ಮೃತದೇಹ ಸಸಿಹಿತ್ಲು ನದಿ ಕಿನಾರೆಯಲ್ಲಿ ಪತ್ತೆಯಾಗಿದೆ. ಸ್ನೇಹಿತರೊಂದಿಗೆ ಈಜಲು ತೆರಳಿದ ವೇಳೆ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಜೂ.19ರಂದು ಖಂಡಿಗೆ ಸೇತುವೆ ಬಳಿ ಅನಾಥ ಸ್ಥಿತಿಯಲ್ಲಿ ಬೈಕೊಂದು ಪತ್ತೆಯಾಗಿತ್ತು. ಈ ಬಗ್ಗೆ ಸುರತ್ಕಲ್ ಪೊಲೀಸರು ತನಿಖೆ ನಡೆಸಿದ್ದರು. ಚೊಕ್ಕಬೆಟ್ಟುವಿನ ಶಹಾನ್ ಜೂ.19ರಂದು ಮನೆಯಿಂದ ಹೊರ ಹೋದವರು ಮನೆಗೆ ಬಾರದೆ ನಾಪತ್ತೆಯಾಗಿದ್ದರು.ಮನೆಯವರು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.ಈತನ್ಮದ್ಯೆ ಸಸಿಹಿತ್ಲು ನದಿ …

ನಾಪತ್ತೆಯಾಗಿದ್ದ ಸೇನಾ ತರಬೇತಿ ಪಡೆದ ಯುವಕ ನದಿ ಕಿನಾರೆಯಲ್ಲಿ ಶವವಾಗಿ ಪತ್ತೆ Read More »

ಫೇಸ್‌ಬುಕ್‌ ಗೆಳೆಯನಿಂದ ಮಹಿಳೆಗೆ ವಂಚನೆ | 1.15 ಲಕ್ಷ ರೂ.ವಂಚನೆ

ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ಉಡುಗೊರೆಯಾಗಿ ದೊಡ್ಡ ಮೊತ್ತದ ಹಣ ನೀಡುವುದಾಗಿ ಹೇಳಿ ಅವರಿಂದ 1.15 ಲಕ್ಷ ರೂ. ಪಡೆದು ವಂಚಿಸಿದ ಬಗ್ಗೆ ಮಂಗಳೂರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಲಾಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. ಮಂಗಳೂರಿನ ಮಹಿಳೆಯೊಬ್ಬರಿಗೆ ಫೇಸ್‌ಬುಕ್‌ನಲ್ಲಿ ನೆಲ್ಸನ್ ಮಾರ್ಕ್ ಹೆಸರಿನಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಮಹಿಳೆ ಅಕ್ಸೆಪ್ಟ್ ಮಾಡಿದ್ದರು. ನಂತರ ಆ ವ್ಯಕ್ತಿ ಮತ್ತು ಮಹಿಳೆಯ ನಡುವೆ ಫೇಸ್‌ಬುಕ್ ಮುಖಾಂತರ ಸಂದೇಶ ವಿನಿಮಯ ನಡೆಯುತ್ತಿತ್ತು ಎನ್ನಲಾಗಿದೆ. ಬಳಿಕ ನೆಲ್ಸನ್ ಮಾರ್ಕ್ ಮಹಿಳೆಯ …

ಫೇಸ್‌ಬುಕ್‌ ಗೆಳೆಯನಿಂದ ಮಹಿಳೆಗೆ ವಂಚನೆ | 1.15 ಲಕ್ಷ ರೂ.ವಂಚನೆ Read More »

error: Content is protected !!
Scroll to Top